ಆಂಧ್ರದಲ್ಲಿ ನಡೆದ ರೈಲುಗಳ ನಡುವಿನ ಭೀಕರ ಅಪಘಾತದ ಕಾರಣ ಬಯಲು !

ಹೊಸದಿಲ್ಲಿ: ಕಳೆದ ವರ್ಷದ ಅ.29ರಂದು ಆಂಧ್ರಪ್ರದೇಶದಲ್ಲಿ ನಡೆದ ಎರಡು ಪ್ಯಾಸೆಂಜರ್‌ ರೈಲುಗಳ ನಡುವಿನ ಅಪಘಾತಕ್ಕೆ ಚಾಲಕ ಮತ್ತು ಸಹ ಚಾಲಕ ಮೊಬೈಲ್‌ನಲ್ಲಿ ಕ್ರಿಕಟ್‌ ಪಂದ್ಯ ವೀಕ್ಷಿಸಿದ್ದೇ ಕಾರಣ ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯಲ್ಲಿ ಹೌರಾ-ಚೆನ್ನೈ ನಡುವಿನ ಮಾರ್ಗದಲ್ಲಿ ವಿಶಾಖಪಟ್ಟಣದಲ್ಲಿ ಪಲಾಸ ರೈಲಿಗೆ ಹಿಂದಿನಿಂದ ರಾಯಗಢ ಪ್ಯಾಸೆಂಜರ್‌ ರೈಲು ಢಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 14 ಪ್ರಯಾಣಿಕರು ಮೃತಪಟ್ಟು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

ಭಾರತೀಯ ರೈಲ್ವೆ ಅಳವಡಿಸಿಕೊಳ್ಳುತ್ತಿರುವ ಹೊಸ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವ ವೇಳೆ ಅಶ್ವಿನಿ ವೈಷ್ಣವ್ ಆಂಧ್ರ ರೈಲು ಅಪಘಾತವನ್ನು ಉಲ್ಲೇಖಿಸಿದರು.

“ಆಂಧ್ರಪ್ರದೇಶದಲ್ಲಿ ಅಕ್ಟೋಬರ್‌ 29ರಂದು ನಡೆದ ರೈಲು ಅಪಘಾತಕ್ಕೆ ಚಾಲಕ ಮತ್ತು ಸಹಾಕನ ನಿರ್ಲಕ್ಷ್ಯವೇ ಕಾರಣ. ಅಂದು ಅವರು ಮೊಬೈಲ್‌ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು. ಈಗ ನಾವು ಅಂತಹ ಪರಿಸ್ಥಿತಿಯಿಂದ ಹೇಗೆ ಪಾರಾಗಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಪೈಲಟ್‌ ಮತ್ತು ಸಹಾಯಕ ಪೈಲಟ್‌ ವಿಚಲಿತರಾಗದೆ ರೈಲನ್ನು ಓಡಿಸುವತ್ತ ಸಂಪೂರ್ಣ ಗಮನ ಹರಿಸಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದೇವೆ.  ಭವಿಷ್ಯದಲ್ಲಿ ಈ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದು, ಈ ನಿಟ್ಟಿನಲ್ಲಿ ನೂತನ ಸುರಕ್ಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *