ಕಡಬ ಆ್ಯಸಿಡ್ ಸಂತ್ರಸ್ತರೆಯರನ್ನು ಭೇಟಿ ಮಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

ಮಂಗಳೂರು:  ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ ವಿದ್ಯಾರ್ಥಿನಿಯರು ದಾಖಲಾಗಿರುವ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿನೀಡಿದ್ದಾರೆ.

ಡಾ. ನಾಗಲಕ್ಷ್ಮೀ ಚೌಧರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಇವರು ಮಂಗಳೂರು ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥ ವಿದ್ಯಾರ್ಥಿನಿಯರ ಆಸ್ಪತ್ರೆಯೊಳಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ದ್ವಿತೀಯ ಪಿಯುಸಿಯ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿದ್ದ ಆರೋಪಿ ಅಬಿನ್ ಎಂದು ಸಂತ್ರಸ್ಥ ವಿದ್ಯಾರ್ಥಿನಿಯರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.ಸದ್ಯ ಆಸ್ಪತ್ರೆಯಲ್ಲಿ  ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳಿಕ ಈ ಕುರಿತು ಹೇಳಿಕೆ ನೀಡಿದ ಇವರು, ಸಂತ್ರಸ್ತ ಯುವತಿಯರು ನನ್ನಲ್ಲಿ ಭಾವುರಾಕಾಗಿ ಮಾತನಾಡಿದ್ರು. ಅವರ ಪರೀಕ್ಷೆ ಬಗ್ಗೆನೇ ಕೇಳ್ತಾ ಇದ್ರು. ಕನ್ನಡ ಪರೀಕ್ಷೆ ಮತ್ತೆ ಕೊಡಬೇಕಾ ಎಂದು ಕೇಳಿದ್ರು , ನಾನು ಒಬ್ಬಳು ತಾಯಿ ನನಗೆ ಅರ್ಥ ಆಗುತ್ತೆ, ಮಕ್ಕಳ ಮಾನಸಿಕ ಸ್ಥಿತಿ ಗತಿ ಹೇಗಿರುತ್ತೆ ಎಂದು. ಶಿಕ್ಷಣ ಸಚಿವರನ್ನ ಇಂದು ನಾನು ಭೇಟಿಯಾಗುತ್ತೇನೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ, ಆ್ಯಸಿಡ್ ದಾಳಿಯಿಂದ ಆದ ಗಾಯದ ಗಂಭೀರತೆ ಮೇಲೆ ಚಿಕಿತ್ಸೆ ನಿರ್ಧಾರವಾಗುತ್ತೆ ಎಂದು ಹೇಳಿದರು.

ಅಲ್ಲದೇ, ಸರಕಾರ ಪೊಲೀಸ್ ಇಲಾಖೆ ಯಿಂದ ಏನೇನು ಪರಿಹಾರ ಬೇಕೋ ಅದನ್ನ ಕೊಡಿಸುತ್ತೇವೆ ಎರಡು ವಾರದ ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಬಹುದು
ಇಬ್ಬರು ಮಕ್ಕಳಿಗೆ ಮಾಡಬೇಕಾಗುತ್ತೆ.  ಪ್ಲಾಸ್ಟಿಕ್ ಬಾಟಲ್ ನಲ್ಲಿ ಆ್ಯಸಿಡ್ ತಂದ ಹಿನ್ನಲೆ ಯುವತಿಯರು ಬಚಾವ್ ಆಗಿದ್ದಾರೆ. ಗ್ಲಾಸ್ ಬಾಟಲ್ ನಲ್ಲಿ ಎರಚಿದ್ದರೆ ಗಾಯಗಳು ಗಂಭೀರವಾಗುತ್ತಿತ್ತು, ಇಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸುತ್ತೇನೆ ತಕ್ಷಣ ಪರಿಹಾರವಾಗಿ ನಾಲ್ಕು ಲಕ್ಷ ಸರಕಾರದಿಂದ ಕೊಡಿಸುತ್ತೇವೆ. ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ವ್ಯವಸ್ಥೆ ಮಾಡುತ್ತೇವೆ  ಎಂದು ಸಾಂತ್ವನ ಹೇಳಿದರು

Font Awesome Icons

Leave a Reply

Your email address will not be published. Required fields are marked *