ಕೇಂದ್ರದ ಯೋಜನೆ ಫಲಾನುಭವಿಗಳ ಮನೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ

 ಬೀದರ್‌:  ಮೋದಿ ಸಮರ್ಥ ನಾಯಕತ್ವದಡಿ ದೇಶವು ಉನ್ನತ್ತಿಯತ್ತ ಸಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ಕೇಂದ್ರದಲ್ಲಿ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ಮೇಲೆ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಲಾಭ ಜನರ ಮನೆ ಬಾಗಿಲಿಗೆ ತಲುಪಿವೆ ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಲು ಮತದಾರರು ಉತ್ಸಾಹದಲ್ಲಿದ್ದಾರೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ ಗ್ರಾಮದಲ್ಲಿರುವ ಬೂತ್ ಸಂಖ್ಯೆ 26 ಮತ್ತು 27ರಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಲಾಭರ್ಥಿ, ಫಲಾನುಭವಿಗಳ ವಿವಿಧ ಮನೆಗಳಿಗೆ ಭೇಟಿ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಹಾಯ ಪಡೆದ ಫಲಾನುಭವಿಗಳಿಗೆ ಕರಪತ್ರಗಳು ನೀಡಿ, ಮೋದಿ ಗ್ಯಾರಂಟಿಯ ಸ್ಟೀಕರ್ ಅಂಟಿಸಿ. ಮತ್ತೋಮ್ಮೆ ಮೋದಿ ಸರಕಾರ ಎನ್ನುವ ಗೋಡೆ ಬರಹಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಮೋದಿ ಅವರ ಸಮರ್ಥ ನಾಯಕತ್ವದಡಿ ದೇಶವು ಉನ್ನತ್ತಿಯತ್ತ ಸಾಗುತ್ತಿದೆ. ಕೇಂದ್ರ ಸರ್ಕಾರವು ರಾಷ್ಟ್ರದ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪರಿಚಯಿಸಿದೆ.

ಈ ಕಾರ್ಯಕ್ರಮಗಳಿಂದ ದೇಶಕ್ಕೆ ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸಲಾಗಿದೆ. ಹತ್ತಾರು ಯೋಜನೆಗಳ ಮೂಲಕ ಹಳ್ಳಿ ಹಳ್ಳಿಯ ಜನರಿಗೆ ಸವಲತ್ತು ನೀಡ್ತಿರೊ ನಮ್ಮ ಕೇಂದ್ರ ಸರ್ಕಾರ ಇದೀಗ ಯೋಜನೆಯ ಫಲ ಸಕಲರಿಗೂ ಸಿಗಲಿ ಅನ್ನೋ ಮಹತ್ವಾಕಾಂಕ್ಷೆಯೊAದಿಗೆ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಪ್ರಧಾನಿ ಮೋದಿಯವರ ಕನಸಿನ ಯೋಜನೆ ನಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕೂಡ ಹಳ್ಳಿ ಹಳ್ಳಿಯಲ್ಲಿ ಸಂಚರಿಸುತ್ತಾ ಅನೇಕ ಜನರಿಗೆ ಕೇಂದ್ರದ ಯೋಜನೆಗಳ ಫಲ ಸಿಗುವಂತಾಗಿದೆ ಹೀಗಾಗಿ ಜನರು ಫುಲ್ ಖುಷಿಯಾಗಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಮಾತೃವಂದನ, ಕಿಸಾನ್ ಸಮ್ಮಾನ್, ಉಜ್ವಲ ಯೋಜನೆ, ಕೃಷಿ ಸಿಂಚಾಯಿ, ಜನದನ್ ಯೋಜನೆ ಹೀಗೆ ಬಡವರು, ನಿರ್ಗತಿಕರು, ರೈತರು, ಮಹಿಳೆಯರಿಗೆ ಜಾರಿಯಾಗಿರೊ ಯೋಜನೆಗಳ ಬಗ್ಗೆ ಅರಿವು ಮೋಡಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಜೋತೆಗುಡಿ ನಾವು ಜನರ ಮನೆಬಾಗಿಲಿಗೆ ತೆರಳಿ ಫಲಾನುಭವಿಗಳ ಜೋತೆ ಮಾತನಾಡುತ್ತಿದ್ದೇವೆ, ಜೊತೆಗೆ ಅರ್ಹರಿಗೆ ಅರ್ಜಿ ಸಲ್ಲಿಸುವಂತೆ ಮಾಡಿ ಅವರಿಗೆ ಯೋಜನೆ ಫಲ ಸಿಗುವಂತೆ ಮಾಡಬೇಕು ಅನ್ನೋ ಮಹತ್ವಾಕಾಂಕ್ಷೆಯೊAದಿಗೆ ಪ್ರಧಾನಿ ಮೋದಿಯವರ ಕನಸು ಎಲ್ಲರೂ ಅಭಿವೃದ್ದಿಯಾಗಬೇಕು ಎನ್ನೋದು ಹಾಗಾಗಿಯೇ ಎಲ್ಲರ ಶ್ರೇಯೋಭಿವೃದ್ದಿಗೆ ಈ ಅಭಿಯಾನ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಅನೀಲ ಗುನ್ನಳ್ಳಿ, ಚಂದು ಮಡಕಿ, ದೀಲಿಪ ಗುಮ್ಮಾ, ಶಿವಕುಮಾರ ಪಾಟೀಲ್, ಶಿವಕುಮಾರ ನಾಗಲಗಿದ್ದಿ, ನರಸಪ್ಪ ಡೋಮಣೆ, ರಾಹುಲ್ ಮೋರೆ, ಧನರಾಜ ಭಾಲ್ಕಿ, ರಾಜಕುಮಾರ ಕೋಳಿ, ಕಿಶೋರ ರೆಡ್ಡಿ, ಭದ್ರು ಸ್ವಾಮಿ, ಅನೀಲ ಮೋರ್ಗಿ, ಕುಶಲ್ ನಾಗಲಗಿದ್ದಿ, ಆಕಾಶ ಕೋಟೆ, ಮಹಾಂತೇಶ ಧರಗೊಂಡ, ಲೋಕೇಶ ಜ್ಯಾಂತೆ, ಸಿದ್ರಾಮ ಡೋಮಣೆ, ಕಪೀಲ್ ಗಾದಗಿಕರ್, ಶ್ರೀನಿವಾಸ, ಕುಶಲರಾವ, ಸುರೇಶ ಮತ್ತಿತರರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *