ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ: ತಾಯಿ ಸೇರಿದಂತೆ ನಾಲ್ವರು ದೋಷಿ

ಚಿಕ್ಕಮಗಳೂರು: ಹಣಕ್ಕಾಗಿ ತಾಯಿಯೇ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣಕ್ಕೆ ಬಂಧಿಸಿದಂತೆ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ.

ಬಾಲಕಿಯ ತಾಯಿ ಸೇರಿದಂತೆ ನಾಲ್ಕು ಜನರ ಮೇಲೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಜನರನ್ನು ದೋಷಿ ಎಂದು ಚಿಕ್ಕಮಗಳೂರು ತ್ವರಿತ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.

ಸ್ಮಾಲ್ ಅಭಿ, ಸಂತ್ರಸ್ತೆ ತಾಯಿ ಗೀತಾ, ಗಿರೀಶ್, ದೇವಿ ಶರಣ್ ಅಪರಾಧಿಗಳೆಂದು ಸಾಬೀತಾಗಿದ್ದು. ಇದೇ ಮಾರ್ಚ್ 11 ರಂದು ನಾಲ್ಕು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಿದೆ. 53 ಜನರ ಪೈಕಿ 49 ಜನರನ್ನ ಪ್ರಕರಣದಿಂದ ಖುಲಾಸೆಗೊಳಿಸಿದೆ.

ವೇಶ್ಯಾವಾಟಿಕೆ ದಂಧೆಗೆ ಗೀತಾಳಿಗೆ ಸ್ಮಾಲ್ ಅಭಿ, ಗಿರೀಶ್, ದೇವಿ ಶರಣ್ ಎನ್ನುವರು ಸಹಾಯ ಮಾಡಿದ್ದರು. ಈ ಪೈಕಿ ಇದೀಗ 49 ಜನರನ್ನು ಕೋರ್ಟ್ ಖುಲಾಸೆಗೊಳಿಸಿದ್ದು ನಾಲ್ವರನ್ನು ದೋಷಿ ಎಂದು ತೀರ್ಪು ನೀಡಿದೆ.

ತಾಯಿಯ ಕಿರುಕುಳ ತಾಳಲಾರದೆ ಬಾಲಕಿ ವೇಶ್ಯಾವಾಟಿಕೆ ಒಪ್ಪಿದ್ದಳು. ಹೀಗಾಗಿ 2020ರ ಸೆಪ್ಟೆಂಬರ್ 1 ರಿಂದ 2021ರ ಜನವರಿ 27ರ ವರೆಗೂ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿತ್ತು.ಕೊನೆಗೆ ಶೃಂಗೇರಿ ತಾಲೂಕಿನ ಕುಂಚೆಬೈಲ್ ಸಮೀಪದ ಗೋಚವಲ್ಲಿ ಗ್ರಾಮದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ 2021ರಲ್ಲಿ ಪೊಲೀಸರು ದಾಳಿ ಮಾಡಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ಈ ಒಂದೇ ಅತ್ಯಾಚಾರ ಪ್ರಕರಣದಲ್ಲಿ ಶೃಂಗೇರಿ ಪೊಲೀಸರು 53 ಜನರನ್ನು ಬಂಧಿಸಿದ್ದರು.

Font Awesome Icons

Leave a Reply

Your email address will not be published. Required fields are marked *