ನಟ ಅಜಿತ್ ಕುಮಾರ್ ಮಿದುಳಿನ ಸರ್ಜರಿ ಬಗ್ಗೆ​ ಸ್ಪಷ್ಟನೆ ನೀಡಿದ ವಕ್ತಾರರು

ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ನರಗಳಲ್ಲಿ ಊತ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಅವರು ಮಿದುಳಿನ ಸರ್ಜರಿ​ಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಇದೀಗ ಈ ಬಗ್ಗೆ ಅಜಿತ್ ಕುಮಾರ್ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಅಜಿತ್ ಕುಮಾರ್ ಅವರು ಚೇತರಿಕೆ ಕಾಣುತ್ತಿದ್ದು, ಸರ್ಜರಿ ವಿಚಾರ ಸುಳ್ಳು ಎಂದು ಹೇಳಿದ್ದಾರೆ. ಸಾಮಾನ್ಯ ಪರೀಕ್ಷೆಗಾಗಿ ‘ಅಜಿತ್ ಅವರು ಗುರುವಾರ ಆಸ್ಪತ್ರೆಗೆ ದಾಖಲಾದರು. ಅವರ ಮಿದುಳು ಹಾಗೂ ಕಿವಿಗೆ ಕನೆಕ್ಟ್ ಆಗೋ ನರದಲ್ಲಿ ಊತ ಇತ್ತು. ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆಯಿಂದ ಅದನ್ನು ಪರಿಹರಿಸಿದ್ದಾರೆ. ಅಜಿತ್ ಅವರು ಆರೋಗ್ಯವಾಗಿದ್ದಾರೆ. ಐಸಿಯುನಿಂದ ಅವರು ವಾರ್ಡ್​ಗೆ ನಡೆದೇ ಹೋಗಿದ್ದಾರೆ’ ಎಂದು ಅಜಿತ್ ಕುಮಾರ್ ವಕ್ತಾರರು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *