ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ಕುತ್ತಿಗೆ ಹಿಸುಕಿ ಕೊಂದ‌ ತಂದೆ, ಅಜ್ಜಿ

ಕೊಡಗು: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ  ಅಕ್ರಮ ಸಂಬಂಧದಿಂದ ಮಗು ಜನಿಸಿದ ಆರೋಪದ ಹಿನ್ನೆಲೆ ಮಗು ಜನಿಸುತ್ತಲೆ ತಂದೆ, ಅಜ್ಜಿ ಕುತ್ತಿಗೆ ಹಿಸುಕಿ ಕೊಂದು ಮೃತ ಹಸುಗೂಸನ್ನು ಗದ್ದೆಯಲ್ಲಿ ಹೂತಿಟ್ಟ ಘಟನೆ ನಡೆದಿದೆ.

ತಂದೆ ಕುಮಾರ (37), ಅಜ್ಜಿ ಯಮುನಾ (57) ಕೊಲೆ ಆರೋಪಿಗಳು.

ಆರೋಪಿ ಕುಮಾರ್​ ವಿವಾಹಿತನಾಗಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇತ್ತ ಹೆರಿಗೆಗೆಂದು ಕುಮಾರನ ಪತ್ನಿ ತವರಿಗೆ ತೆರಳಿದ್ದಳು. ಇದೇ‌ ಸಂದರ್ಭ ತುಂಬು ಗರ್ಭಿಣಿ ಯುವತಿಯನ್ನ ಮನೆಗೆ ಕರೆತಂದ ಕುಮಾರ್​, ಮಗು ಜನಿಸಿದ ಬಳಿಕ‌ ತಾನೇ ಸಾಕುವುದಾಗಿ ಪ್ರೇಯಸಿಗೆ ಭರವಸೆ ನೀಡಿದ್ದಾನೆ.

ಬಳಿಕ ಕುಮಾರ್​ ಮನೆಯಲ್ಲಿಯೇ ಯುವತಿ ಮಗುವಿಗೆ ಜನ್ಮ‌ನೀಡಿದ್ದಾಳೆ. ಯಾವಾಗ ಯುವತಿ ಮನೆಯಿಂದ‌ ತೆರಳಿದಳೋ ತಕ್ಷಣ ಮಗುವಿನ ಹತ್ಯೆ ಮಾಡಿದ್ದಾರೆ. ಇಂದು(ಮಾ.10) ಬೆಳಗ್ಗಿನ ಜಾವ ಗದ್ದೆಯಲ್ಲಿ ಮೃತ ಹಸುಗೂಸಿನ ತಂದೆ ಕುಮಾರ್​ ಹಾಗೂ ಅಜ್ಜಿ ಜಾನಕಿ ಗುಂಡಿ ತೆಗೆದಿದ್ದಾರೆ. ಇದನ್ನ ಸ್ಥಳೀಯ ನಿವಾಸಿಗಳು ಗಮನಿಸಿ, ಶಂಕೆಯಿಂದ ಮಣ್ಣು ತೆಗೆದು ನೋಡಿದಾಗ ಗಂಡು ಮಗುವಿನ ಶವ ಪತ್ತೆಯಾಗಿದೆ.

ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *