ಬಾಲಿವುಡ್ ಪ್ರಸಿದ್ಧ ನಟ ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ಸುದ್ಧಿ ಕೆಲವು ದಿನಗಳ ಹಿಂದೆ ಎಲ್ಲೆಡೆ ಹರಿದಾಡಿತ್ತು. ಬಚ್ಚನ್ ನಿಜವಾಗಿಯೂ ಅನಾರೋಗ್ಯವೋ ಎಂಬ ಅಭಿಮಾನಿಗಳ ಗೊಂದಲಕ್ಕೆ ಬಿಗ್ ಬಿ ಸ್ಪಷ್ಟನೆ ನೀಡಿದ್ದಾರೆ. ಸ್ವತಃ ಅವರೇ ನಾನು ಆರೋಗ್ಯದಿಂದ ಇದ್ದೀನಿ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಇದೀಗ ವಿಡಿಯೋ ಎಲ್ಲೆಡೆ ವೈರಲ್ ಅಗಿದೆ.
ಸೆಲಿಬ್ರಿಟಗಳು ಏನು ಮಾಡಿದರೂ ಅವು ಸುದ್ಧಿ ಅಗುತ್ತವೆ ಕೆಲವೊಂದು ಸತ್ಯಸಂಗತಿಯಾಗಿದ್ದರೆ ಇನ್ನು ಕೆಲವು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇದೀಗ ಅಮಿತಾಭ್ ಬಚ್ಚನ್ ಅವರು ಶುಕ್ರವಾರ (ಮಾರ್ಚ್ 15) ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾದರು ಎನ್ನುವ ಸುದ್ದಿ ಹರಿದಾಡಿತ್ತು. ಇಷ್ಟೇ ಅಲ್ಲ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ವರದಿ ಆಗಿತ್ತು. ಆದರೆ ಇವೆಲ್ಲ ತಾನಾಗೆ ಹುಟ್ಟಿಕೊಂಡ ವದಂತಿಗಳಷ್ಟೆ ಇದನ್ನು ಹುಟ್ಟು ಹಾಕಿದವರು ಯಾರು ಎಂಬುದು ಇನ್ನು ತಿಳಿದಿಲ್ಲ.
ಅಮಿತಾಭ್ ಅವರು ಐಎಸ್ಪಿಎಲ್ನ ಫಿನಾಲೆ ಮ್ಯಾಚ್ನಲ್ಲಿ ಭಾಗಿ ಆಗಿದ್ದಾರೆ.ನಂತರ ಎಲ್ಲರ ಜೊತೆ ಮ್ಯಾಚ್ ಎಂಜಾಯ್ ಮಾಡಿದ್ದಾರೆ.ಸ್ಟೇಡಿಯಂನಲ್ಲಿ ಅವರ ಅಭಿಮಾನಿಗಳು ಕೆವರು ಅವರನ್ನು ಕಂಡು ಸಂತಸ ವ್ಯಕ್ತ ಪಡಿಸಿದ್ದಾರೆ ಹಾಗೂ ಅವರ ಅರೋಗ್ಯದ ಬಗ್ಗೆಯೂ ವಿಚಾರಿಸಿದ್ದಾರೆ ಆದರೆ ಅವರು ತನಗೆ ಯಾವುದೇ ಆರೋಗ್ಯದ ತೊಂದರೆ ಆಗಿರಲಿಲ್ಲ ಇದು ಫೇಕ್ ನ್ಯೂಸ್ ಎಂದು ಸ್ಪಷ್ಟನೆ ನೀಡಿದ್ದಾರೆ.ಇದೀಗ ವಿಡಿಯೋ ಎಲ್ಲೆಡ ವೈರಲ್ ಅಗಿದೆ.