ಆಕ್ರೋಶ ಹೊರ ಹಾಕಿದ ಗಾಯಕಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಉತ್ತರ ಪ್ರದೇಶ:  ಲೋಕಸಭಾ ಚುನಾವಣ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ವಿರುದ್ದ ಅವಹೇಳನಕಾರಿ ಪೋಸ್ಟ್‌ ಹೊರಹಾಕಿದ್ದ ಸುಪ್ರಿಯಾ ಶ್ರೀನೆಟ್ ಪ್ರಕರಣದ ರಾಜಕೀಯ ಕ್ಷೇತ್ರದಲ್ಲಿ ಭಾರೀ ಚರ್ಚೆಯಾಗಿತ್ತು ಮತ್ತು ಅದನ್ನು ತಾನು ಮಾಡಿಲ್ಲವೆಂದು ಸುಪ್ರಿಯಾ ಸ್ಪಷ್ಟನೆ ನೀಡಿದ್ದರು ಇದರ ಕಾವು ಹಾರುವ ಬೆನ್ನಲ್ಲೆ ಉತ್ತರ ಪ್ರದೇಶದ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್, ತನಗೆ ಅವಮಾನ ಮಾಡುವವರ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ತೀರಿ ಎಂದು ಟ್ವೀಟ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ನೇಹಾ ಸಿಂಗ್ ರಾಥೋಡ್ ಟ್ವೀಟ್ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ಇನ್ನು ನೇಹಾ ಟ್ವೀಟ್‌ನಲ್ಲಿ ಸ್ಮೃತಿಇರಾನಿ, ನರೇಂದ್ರಮೋದಿ, ಜೆ ಪಿ ನಡ್ಡಾ, ಹಾಗೂ ಅಮಿತ್‌ಶಾ ಅವರನ್ನು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.

 

ಕಂಗನಾ ರಣಾವತ್ ಮಾತ್ರ ಈ ದೇಶದ ಮಗಳೇ..?
ಬಿಜೆಪಿ ಮಾಧ್ಯಮಗಳಿಗೆ ಅವಳ ನೋವು ಮಾತ್ರ ಕಾಣುತ್ತಿದೆಯೇ?
ಇಂದು ಬೆಳಗ್ಗೆಯಿಂದ ನೀಲಿಚಿತ್ರ ತಾರೆ ಮಿಯಾ ಖಲಿಫ್ ಜೊತೆ ನನ್ನ ಫೋಟೋ ಕೊಲಾಜ್ ಮಾಡಿ ಟ್ವಿಟರ್​ನಲ್ಲಿ ಟ್ರೆಂಡ್ ಮಾಡ್ತಿದ್ದಾರೆ. ಬುದ್ಧಿ ಇರೋರು ಯಾರೂ ನೋಡ್ತಿಲ್ಲವೇ?
ಮೋದಿಜೀ ಅವರ ಕುಟುಂಬದಿಂದ ಪಾರಾಗಲು ನಾನು ಒಬ್ಬಂಟಿಯಾಗಿ ಹೋರಾಡಬೇಕೇ..?
ಬಿಜೆಪಿ ಮಹಿಳಾ ಅಭ್ಯರ್ಥಿಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಎಲ್ಲಾ ರೀತಿಯ ಹೋರಾಟ ನಡೆಸುತ್ತದೆಯೇ?
ರಾಷ್ಟ್ರೀಯ ಮಹಿಳಾ ಆಯೋಗ ನನ್ನ ನೋವನ್ನು ಯಾವಾಗ ಆಲಿಸುತ್ತದೆ?
ನನಗೆ ಆಗಿದ ಅವಮಾನ ದೇಶದ ಮಗಳಿಗೆ ಆಗಿರುವ ಅವಮಾನ ಅಲ್ಲವೇ?
ನನಗೆ ಆಗಿರುವ ಅವಮಾನದ ಬಗ್ಗೆ ಮಹಿಳಾ ಆಯೋಗಕ್ಕೆ ಗೊತ್ತಿದೆಯಾ?
ನನ್ನ ಹೆಸರಲ್ಲಿ ಅವಹೇಳನಾಕಾರಿ ಟ್ವೀಟ್​ಗಳನ್ನು ಮಾಡುವ ಮೂಲಕ ಅವಮಾನ ಮಾಡ್ತಿದ್ದಾರೆ, ಅವರಿಗೆ ಯಾವಾಗ ಶಿಕ್ಷೆ ಕೊಡ್ತೀರಿ?
ನನ್ನ ಗೌರವಕ್ಕಾಗಿ ನಾನು ಮಾತ್ರ ಹೋರಾಡಬೇಕೇ..?
ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಕ್ಕೆ ಎಷ್ಟೊಂದು ಶಿಕ್ಷೆ ವಿಧಿಸಲಾಗುತ್ತದೆ? ನನ್ನ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬೇಕು ಎಂದು ಸರ್ಕಾರಕ್ಕೆ ಜನಪದ ಗಾಯಕಿ ನೇಹಾಸಿಂಗ್‌ ಕೇಳಿಕೊಂಡಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *