ಮುಂಬೈ: ‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 3 ಅನ್ನು ವೆಬ್ ಸಿರೀಸ್ ಮೂಲಕ ತೋರಿಸಲು ನಿರ್ಮಾಪಕ ಕರಣ್ ಜೋಹರ್ ನಿರ್ಧರಿಸಿದ್ದಾರೆ.
ಈ ವೆಬ್ ಸಿರೀಸ್ಗೆ ರೀಮಾ ಮಾಯಾ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಇದರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಕರಣ್ ಜೋಹರ್ ಮಾಹಿತಿ ನೀಡಿದ್ದಾರೆ.
ಇದೀಗ ಈ ಚಿತ್ರದ ಪಾರ್ಟ್ 3 ಮೂಲಕ ಮತ್ತುಷ್ಟು ಸೆಲೆಬ್ರಿಟಿ ಮಕ್ಕಳು ಲಾಂಚ್ ಆಗಲಿದ್ದಾರೆ. ಮುಂದಿನ ವರ್ಷ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದಾಗಿದೆ.
‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 1 ಮತ್ತು ಪಾರ್ಟ್ 2 ಕಥೆಗಿಂತ ವಿಭಿನ್ನವಾಗಿ ಪಾರ್ಟ್ 3 ಮೂಡಿ ಬರಬೇಕು ಎಂಬುದು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ.
ಈಗಾಗಲೇ ‘ಸ್ಟುಡೆಂಡ್ ಆಫ್ ದಿ ಇಯರ್’ ಫ್ರಾಂಚೈಸ್ ಮೂಲಕ ಹಲವು ಸೆಲೆಬ್ರಿಟಿ ಮಕ್ಕಳನ್ನು ಕರಣ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.