‘ಟೈಗರ್’ ಡಾಕ್ಯುಮೆಂಟರಿಗೆ ಧ್ವನಿ ನೀಡಿದ ಪ್ರಿಯಾಂಕಾ ಚೋಪ್ರಾ

ಮುಂಬೈ: ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಕ್ಕೆ ತೆರಳುತ್ತಿದ್ದಂತೆ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಂತ ಅವರು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಡಿಸ್ನಿ ಪ್ಲಸ್ ಹಾಟ್​​ ಸ್ಟಾರ್​ನಲ್ಲಿ ಪ್ರಸಾರ ಕಾಣಲಿರುವ ‘ಟೈಗರ್’ ಹೆಸರಿನ ಡಾಕ್ಯುಮೆಂಟರಿಗೆ ಅವರು ಧ್ವನಿ ಆಗಿದ್ದಾರೆ.

ಹುಲಿಗಳ ಜೀವನವನ್ನು ಈ ಸಿನಿಮಾದಲ್ಲಿ ತೆರೆದಿಡಲಾಗುತ್ತಿದೆ. ತಾಯಿ ಹಾಗೂ ಮಗುವಿನ ಬಾಂಧವ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ಹೇಳಲಾಗುತ್ತಿದೆ. ಈ ಸಿನಿಮಾನ ಬರೋಬ್ಬರಿ 8 ವರ್ಷಗಳ ಕಾಲ ಶೂಟ್ ಮಾಡಲಾಗಿದೆ. ಏಪ್ರಿಲ್ 22ರಂದು ಈ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ.

‘ಟೈಗರ್’ ಡಾಕ್ಯುಮೆಂಟರಿ ಟ್ರೇಲರ್​ನ ಪ್ರಿಯಾಂಕಾ ಚೋಪ್ರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಡಾಕ್ಯುಮೆಂಟರಿಯಲ್ಲಿ ಬರುವ ವಿವರಣೆಗಳು ಪ್ರಿಯಾಂಕಾ ಚೋಪ್ರಾ ಧ್ವನಿಯಲ್ಲಿ ಇರಲಿದೆ. ‘ಅತ್ಯದ್ಭುತ ಸ್ಟೋರಿ ಹಾಗೂ ಕಾಡಿನ ಅನ್ವೇಷಣೆ ಮಾಡುವ ಈ ಸಿನಿಮಾಗೆ ನಾನು ಧ್ವನಿ ನೀಡುತ್ತಿರುವುದು ಖುಷಿ ಇದೆ. ಇದಕ್ಕಾಗಿ ಕಾಯುತ್ತಿದ್ದೇನೆ. ನಮ್ಮ ಜೊತೆ ಕಾಡನ್ನು ಎಂಜಾಯ್ ಮಾಡಿ’ ಎಂದು ಪ್ರಿಯಾಂಕಾ ಕೋರಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *