ಹುಬ್ಬಳ್ಳಿ: ಹೂತಿಟ್ಟ ಕೋತಿ ಮೃತದೇಹವನ್ನು ತೆಗೆಯಲು ಮೌಲ್ವಿಯೊಬ್ಬ ಯತ್ನಿಸಿದ್ದು, ಆ ಮೌಲ್ವಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ.
ಬ್ಯಾಹಟ್ಟಿಯ ಮೌಲ್ವಿ ಇಮಾಮ್ ಸಾಬ್ ತಡಸ ಎಂಬುವವರು ಅದೇ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ, ಹೂತಿಟ್ಟಿದ್ದ ಕೋತಿ ಮೃತದೇಹವನ್ನು ತಗೆಯುವ ವೇಳೆ ಅದನ್ನು ವಿರೋಧಿಸಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅದನ್ನು ಪ್ರಶ್ನಿಸಿದ ಜನರಿಗೆ ಮೌಲ್ವಿ ಇಮಾಮ್ ಸಾಬ್, ಔಷಧಿಗಾಗಿ ಕೋತಿ ಬೇಕು ಎಂದು ಹೇಳಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ವಿಶ್ವ ಹಿಂದು ಪರಿಷತ್ ನ ಜಿಲ್ಲಾ ಸಹಕಾರ್ಯದರ್ಶಿ ಗುರು ಪಾಟೀಲ್ ಹಾಗೂ ಕಾರ್ಯಕರ್ತರು ಸೇರಿ ಆ ಮೌಲ್ವಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಇಮಾಮ್ ಸಾಬ್ನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಕಾರಣ ಏನು ಎಂಬುದನ್ನು ತನಿಖೆ ನಡೆಸಿದ್ದಾರೆ.