ಅಫಜಲಪುರ: ತಾಲೂಕಿನಲ್ಲಿ ಭೀಮಾನದಿ ಹಾದುಹೊಗಿದ್ದು ರೈತರು ನಮ್ಮ ಪುಣ್ಯ ಎಂದು ಜಪಿಸುತ್ತಿದ್ದರೆ,ಇತ್ತ ಮರಳುಗಳ್ಳರು ಚಿನ್ನದ ತಟ್ಟ ಭೀಮಾನದಿಯಲ್ಲಿ ಹರಿದು ಬರುತ್ತಿದೆ ಎಂದು ಖುಷಿ ಪಡುತ್ತಿದ್ದಾರೆ ಎನ್ನಬಹುದು.ಕಳೆದ ತಿಂಗಳು ಅಫಜಲಪುರ ಪಟ್ಟಣದಲ್ಲಿ ಭೀಮಾನದಿಯ ನೀರಿಗಾಗಿ 13 ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ.
ಆದರೆ ಭೀಮಾ ನದಿಯಲ್ಲ ನೀರು ಬಂದರು ನೀರು ನಿಲ್ಲದ ಸ್ಥಿತಿಯಲ್ಲಿ ಅಕ್ರಮ ಮರುಳುಗಳ್ಳರಿಂದ ನಡೆಯುತ್ತಿದೆ ಎಂದು ಯುವಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘದ ಅಧ್ಯಕ್ಷ ಅವ್ವಣ್ಣಗೌಡ ಪಾಟೀಲರ ನೇತೃತ್ವದಲ್ಲಿ ಭೀಮಾನದಿಗೆ ಇಳಿದು ಪ್ರತಿಭಟನೆ ಮಾಡಲಾಯಿತು.
ನಂತರ ಮಾತನಾಡಿದ ಅವ್ವಣ್ಣಗೌಡ ಪಾಟೀಲ ತಾಲೂಕಿನ ಗಾಣಗಾಪುರ ಪೊಲೀಸ ಠಾಣೆಯ ಸರಹದ್ದಿನಲ್ಲಿ ಒಟ್ಟು ಎಂಟು ಹಳ್ಳಿಗಳಿಗೆ ಭೀಮಾನದಿ ಅಂಟ್ಟಿಕೊಂಡಿದ್ದು, ಟಾಕಳಿ ಗ್ರಾಮದಲ್ಲಿ ಎಗ್ಗಿಲ್ಲದೆ ಮರಳುಗಾರಿಕೆ ನಡೆಯುತ್ತಿದೆ. ಗ್ರಾಮದಲ್ಲಿ ಮೂಲಸೌಕರ್ಯಗಳಿಲ್ಲದೇ ಪರದಾಡುತ್ತಿರುವ ಜನರ ಸಮಸ್ಯೆ ಆಲಿಸದ ಅಧಿಕಾರಿಗಳು ಭೀಮಾನದಿಯ ಸಪತ್ತನ್ನು ಖಾಸಗಿಯೇತರರಿಗೆ ಟೆಂಡರ್ ಮುಖಾಂತರ ಮಾರುತ್ತಿದ್ದಾರೆ.ಕಾನೂನನ್ವಯ ಮರಳು ಸಾಗಾಟ ಮಾಡಿದರೆ ತೊಂದರೆ ಇಲ್ಲ.ಆದರೆ ಟೆಂಡರ್ ಪಡೆದ ವ್ಯಕ್ತಿ ಕಾನೂನು ಬಾಹಿರವಾಗಿ ಮರಳು ಸಾಗಾಟ ಮಾಡುತ್ತಿದ್ದಾನೆ.
ಈ ಮೊದಲು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೆವಾದರೂ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಅಕ್ರಮ ಮರಳುಗಾರಿಕೆ ನಿಲ್ಲಬೇಕು.ಕಾನೂನಿನ ಅಡಿಯಲ್ಲಿ ಅಧಿಕಾರಗಳ ನೇಮಕ ಮಾಡಿ ಮರಳು ಸಾಗಟ ಮಾಡಬೇಕು ಅದಲ್ಲದೇ ಈಗಿರುವ ಟೆಂಡರ್ ಮಾಲಿಕನಿಗೆ ವಜಾಮಾಡಿ ಹೊಸ ಟೆಂಡರ್ ಪ್ರಕ್ರಿಯೆ ಮುಂದುವರೆಸಬೇಕು ಇಲ್ಲವಾದರೆ ನಾವು ಭೀಮಾ ನದಿಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಬೇಕಾಗುತ್ತದೆ ಎಂದರು.
ನಂತರ ಮಾತನಾಡಿದ ಕಲ್ಯಾಣ ಕರ್ನಾಟಕ ರೈತರ ಮಕ್ಕಳ ಸಂಘದ ಅಧ್ಯಕ್ಷ ಬಸವರಾಜ ಹರವಾಳ ಅಕ್ರಮ ಮರಳು ಮಾಫಿಯಾಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪೊಲೀಸರ ಸ್ರೀರಕ್ಷೆಯೊಂದಿಗೆ ಭೀಮಾನದಿ ಖಾಲಿ ಖಾಲಿಯಾಗುತ್ತಿದೆ.ರಾಜಾರೋಷವಾಗಿ ಹಗಲು ರಾತ್ರಿ ಎನ್ನದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಚುನಾವಣೆ ನೆಪವೊಡ್ಡಿ ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳ ಸಾಥ ನೀಡುತ್ತಿದ್ದಾರೆ.ಕಾನೂನಿನ ಪ್ರಕಾರ ಟೆಂಡರ್ ಆದರೂ ಸಹ 2 ಮೀಟರ್ ಮಾತ್ರ ನದಿಯನ್ನು ಅಗೆದು ಮರಳು ಸಾಗಾಟ ಮಾಡಬೇಕು.ಆದರೆ ಇವರು ಸುಮಾರು 30 ಅಡಿ ಅಗೆದು ಮರಳುಗಾರಿಕೆ ಮಾಡುತ್ತಿದ್ದಾರೆ.
ನದಿಯಲ್ಲಿ ನೀರು ಇದ್ದರೂ ಅದರಿಂದ ಮರಳು ಮೇಲ್ತಗೆದು ಕಾನೂನು ಬಾಹಿರ ಮರಳುಗಾರಿಕೆ ಮಾಡುತ್ತಿದ್ದಾರೆ.ಅದಲ್ಲದೇ ಇಲ್ಲಿರುವ ಗ್ರಾಮ ಪಂಚಾಯತಿ ಕಾರ್ಯಾಲಯದ ಗಮನಕ್ಕೂ ಇರದೆ ಎಲ್ಲೆಂದರಲ್ಲಿ ರೈತರ ಹೊಲಗಳಲ್ಲಿ ರಸ್ತೆ ನಿರ್ಮಾಣ ಮಾಡಿ ಅವರಿಗೆ ಹೆದರಿಸಿ ಬೆದರಿಸಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆ. ಇವರಿಗೆ ಹೇಳೊರು ಕೆಳೊರು ಯಾರು ಇಲ್ಲ ಯಾಕೆಂದರೆ ಅಧಿಕಾರಿಗಳೇ ಅವರಿಗೆ ಕಾವಲಾಗಿದ್ದಾರೆ.ಆದರೆ ನಾವು ಇದನ್ನ ಸಹಿಸೊದಿಲ್ಲ ನಮ್ಮ ರೈತರಿಗಾಗುವ ಅನ್ಯಾಯವನ್ನು ನಾವು ಖಂಡಿಸುತ್ತೆವೆ. ಅಕ್ರಮ ಮರಳುಗಳ್ಳರು ಎಷ್ಟೆ ಪ್ರಭಾವಿಗಳಾಗಿದ್ದರೂ ಹೆಂತಹ ಅಧಿಕಾರಿಯ ಶ್ರೀರಕ್ಷೆ ಇದ್ದರೂ ಭೀಮಾನದಿಯಲ್ಲಿನ ಹಿಡಿ ಮಣ್ಣು ಕೊಂಡ್ಯೊಯಲು ಬಿಡುವುದಿಲ್ಲ.ಕೂಡಲೇ ಟೆಂಡರ್ ಬದಲಿಸಿ,ಭೀಮಾನದಿಯ ದಡದಲ್ಲಿನ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ಮರಳು ಸಾಗಾಟದ ವಾಹನಗಳಿಂದ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ನದಿಯಿಂದ ತಗಲುವುದಿಲ್ಲ ಎಂದು ಪಟ್ಟು ಹಿಡಿದರು.ಸ್ಥಳಕ್ಕೆ ಧಾವಿಸಿದ ಗಣಿ ಮತ್ತು ಭೂವಿಜ್ಞಾನದ ಇಲಾಖೆಯ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಸಮಾಧಾನ ಪಡಿಸಲು ಮುಂದಾದರೂ ಯಾವುದಕ್ಕೂ ಜಗ್ಗದೆ ಪ್ರತಿಭಟನೆ ಮುಂದುವರೆಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಯುವಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಬಸವರಾಜ ಹರವಾಳ,ಜಿಲ್ಲಾ ಗೌರಾವಾದ್ಯಕ್ಷ ಬಸವರಾಜ ಬುದಿಹಾಳ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಗಾಯಕವಾಡ,ತಾಲೂಕಾ ಅಧ್ಯಕ್ಷೆ ಧಾನಮ್ಮ ಜಾಲಿಹಾಳ,ಶೋಭಾ ಕಾಂಬ್ಳೆ, ಹಸರಗುಂಡಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ,ಜಗದೇವಿ ದುಕಾನದಾರ,ಸುಭಾಷಚಂದ್ರ ದುಕಾನದಾರ,ಶಾಬುದ್ದಿನ್ ಮಕಾಸಿ,ಶಾಬುದ್ದಿನ್ ಮಕಾಂದರ,ರವಿ ಹರವಾಳ,ಹುಸೇನಿ ಮಕಂದರ,ಜೆಟ್ಟೆಪ್ಪ ನಾಯ್ಕೊಡಿ,ದಯಾನಂದ ಹಯ್ಯಾಳಕರ,ದಸ್ತಗಿರ ಮಕಂದರ ಸೇರಿದಂತೆ ಟಾಕಳಿ ಗ್ರಾಮಸ್ಥರು ಉಪಸ್ಥಿತರಿದ್ದರು.