MYSORE : ಇನ್ಮುಂದೆ ಬಟ್ಟೆ ಬ್ಯಾಗ್‌ ನದ್ದೆ ಹವಾ , ಜನತೆ ಸಹಕಾರ ಕೋರಿದ ಪಾಲಿಕೆ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರಿನ ಕುವೆಂಪುನಗರದ ʼಸೆಲೆಬ್ರೇಷನ್‌ ಅಡ್ಡʼ ಮಾಲೀಕರಾದ ಕುಮಾರ್‌ ಅವರು ಪಾಲಿಕೆ ವಲಯ ಆಯುಕ್ತರಾದ ಸತ್ಯಮೂರ್ತಿ ಅವರಿಗೆ
ಬಟ್ಟೆ ಬ್ಯಾಗ್‌ ಹಸ್ತಾಂತರಿಸಿದರು.


 

ಮೈಸೂರು, ಜು,12,2024: (www.justkannada.in news)  ಹಿಂದೊಮ್ಮೆ ಸ್ವಚ್ಛತಾ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೈಸೂರು, ಈಗ ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸಲು ದಿಟ್ಟ ಹೆಜ್ಜೆ ಮುಂದಿಟ್ಟಿದೆ.

ಮೈಸೂರು ಮಹಾನಗರ ಪಾಲಿಕೆಯು ಪ್ಲಾಸ್ಟಿಕ್‌ ಮುಕ್ತ ಮೈಸೂರು ನಗರ ಮಾಡಲು ಪಣ ತೊಟ್ಟಿದೆ. ಈಗಾಗಲೇ ನಗರ ಪಾಲಿಕೆ ಆಯುಕ್ತರು ಪ್ಲಾಸ್ಟಿಕ್‌ ಬ್ಯಾಗ್‌ ಗಳ ಬಳಕೆ ಮೇಲೆ ನಿಷೇದ ಹೇರಿದ್ದು, ಬಟ್ಟೆ ಬ್ಯಾಗ್‌ ಬಳಕೆಗೆ ಮುಂದಾಗುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರಿನ ಶಾರದದೇವಿನಗರದಲ್ಲಿರುವ ನಗರ ಪಾಲಿಕೆಯ ವಲಯ ಕಚೇರಿ ಆಯುಕ್ತ ಸತ್ಯಮೂರ್ತಿ  ಅವರು ಸಂಘ, ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಿಂದ ಬಟ್ಟೆ ಬ್ಯಾಗ್‌ ಗಳನ್ನು ಮನೆಮನೆಗೂ ವಿತರಣೆ ಮಾಡುವ ಯೋಜನೆ ಹಮ್ಮಿಕೊಂಡಿದ್ದಾರೆ. ಈಗಾಗಲೇ ಸ್ಥಳೀಯ ಶಾಸಕರ ನೆರವಿನಿಂದ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಬಡಾವಣೆ ನಿವಾಸಿಗಳನ್ನು ಬಟ್ಟೆ ಬ್ಯಾಗ್‌ ಬಳಕೆಗೆ ಪ್ರೇರೆಪಿಸುತ್ತಿದ್ದಾರೆ.

ಈ ಸಂಬಂದ ಜಸ್ಟ್‌ ಕನ್ನಡ ಜತೆ ಮಾತನಾಡಿದ ವಲಯ ಆಯುಕ್ತ ಸತ್ಯಮೂರ್ತಿ ಅವರು ಹೇಳಿದಿಷ್ಟು..

ಪ್ಲಾಸ್ಟಿಕ್ ಬ್ಯಾಗ್ ಗಳ ಬದಲು ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು.ಈ ಸಲುವಾಗಿ  ಪ್ರತಿ ಮನೆಗೆ ಎರಡು ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ೫ ಕೇಜಿ ಹಾಗೂ ೧೦ ಕೇಜಿ ತೂಕ ಸಾಮರ್ಥ್ಯದ ಬ್ಯಾಗ್‌ ಗಳನ್ನು ನೀಡಲಾಗುತ್ತಿದೆ. ಇದಕ್ಕೆ ದಾನಿಗಳ ನೆರವು ಪಡೆದುಕೊಳ್ಳಲಾಗುತ್ತಿದೆ. ಬಟ್ಟೆ ಬ್ಯಾಗ್‌ ಪ್ರಾಯೋಜಿಸುವವರು ತಮ್ಮ ಸಂಸ್ಥೆಯ ಲೋಗೋ ಅಥವಾ ಹೆಸರನ್ನು ಬ್ಯಾಗ್‌ ಮೇಲೆ ಮುದ್ರಿಸುವ ಅವಕಾಶ ನೀಡಲಾಗಿದೆ. ಈ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಸಹಕಾರ ನೀಡುವಂತೆ ವಿನಂತಿಸಿದರು.

key words: Mysore city corporation, distributing, cloth bags, to public, to reduce, usage of plastic.

Font Awesome Icons

Leave a Reply

Your email address will not be published. Required fields are marked *