FORTIS HOSPITAL:111 ಕೆ.ಜಿ ತೂಕವಿದ್ದ ಬಾಲಕನಿಗೆ “ಬೆನ್ನೆಲುಬಿನ ಡಿಸ್ಕ್” ಯಶಸ್ವಿ ಶಸ್ತ್ರಚಿಕಿತ್ಸೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

As a result of the spinal disc being located, he lost 111 kg of paralysis. A team of doctors from Fortis Hospital, Bannerghatta, successfully performed a leg-saving spine surgery called ‘micro-lumbar discectomy’ on a 15-year-old boy.

ಬೆಂಗಳೂರು ಜು,16,2024: (www.justkannada.in news) ಬೆನ್ನುಮೂಳೆಯ ಡಿಸ್ಕ್‌ಲೊಕೇಟ್ ಆಗಿದ್ದ ಪರಿಣಾಮ, ಪಾರ್ಶ್ವವಾಯುಗೆ ಒಳಗಾಗಬೇಕಿದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ‘ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ’ ಎಂಬ ಕಾಲು ಉಳಿಸುವ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ. ಗಣೇಶ್ ವಿ. ನೇತೃತ್ವದ ತಂಡ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಅವರು,

111 ಕೆ.ಜಿ. ತೂಕದ ಹೊಂದಿದ್ದ 15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕನಿಗೆ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್‌ಲೊಕೇಟ್‌ ನಿಂದ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು. ನಾಲ್ಕು ತಿಂಗಳುಗಳ ಕಾಲ ಈ ನೋವನ್ನು ಹಾಗೇ ನಿರ್ಲಕ್ಷಿಸಿದ್ದಾರೆ. ಪರಿಣಾಮ ಈ ಬಾಲಕ ನಡೆಯಲು, ಕೂರಲು ಸಹ ಆಗದಷ್ಟು ಅಗಾಧ ನೋವಿಗೆ ಒಳಗಾಗಿದ್ದ. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ MRI ಸ್ಕ್ಯಾನ್‌ ಮಾಡುವ ಮೂಲಕ ಅವರ ಬೆನ್ನುಮೂಳೆಯ L3-L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್‌ಟ್ರಶನ್ ಆಗಿರುವುದು ಬಹಿರಂಗವಾಯಿತು.

ಹೀಗಾಗಿ ಬಾಲಕನ ಕಣಕಾಲಿನವರೆಗೂ ಡಿಸ್‌ಲೊಕೇಟ್‌ನ ಪರಿಣಾಮ ಸಂಭವಿಸಿತ್ತು. ಈ ನೋವನ್ನು ಹೀಗೆ ನಿರ್ಲಕ್ಷ್ಯ ಮಾಡಿದ್ದರೆ ಮುಂದೊಂದುದಿನ ಆ ಕಾಲು ಪಾರ್ಶ್ವವಾಯು ಆಗುವ ಸಾಧ್ಯತೆ ತುಂಬಾ ಇತ್ತು. ಬಾಲಕನ ಆರೋಗ್ಯದ ಗಂಭೀರತೆಯನ್ನು ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದೆವು, ಇದು ನರಗಳ ಮೇಲಿನ ಒತ್ತಡವನ್ನು ನಿವಾರಿಸಲು ಡಿಸ್‌ಲೊಕೇಟ್‌ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಕಿತ್ಸೆ ಸಾಕಷ್ಟು ಸವಾಲಾಗಿತ್ತು, ಆದರೂ ನಮ್ಮ ತಂಡ ಕಾರ್ಯಕ್ರಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದರು

key words: Fortis Hospital, successfully performed, a leg-saving, spine surgery, micro-lumbar discectomy

SUMMARY: 

As a result of the spinal disc being located, he lost 111 kg of paralysis. A team of doctors from Fortis Hospital, Bannerghatta, successfully performed a leg-saving spine surgery called ‘micro-lumbar discectomy’ on a 15-year-old boy.

Font Awesome Icons

Leave a Reply

Your email address will not be published. Required fields are marked *