ಕೊಲೆ ಕೇಸ್ ನಲ್ಲಿ ತಲೆಮರಿಸಿಕೊಂಡಿದ್ದ ಸಿನಿಮ ನಿರ್ದೇಶಕನ ಬಂಧನ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಬೆಂಗಳೂರು,ಜುಲೈ,17,2024 (www.justkannada.in): ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರಿಸಿಕೊಂಡಿದ್ದ ಸಿನಿಮಾ ನಿರ್ದೇಶಕನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗಜೇಂದ್ರ ಅಲಿಯಾಸ್ ಗಜ ಬಂಧಿತ ಸಿನಿಮಾ ನಿರ್ದೇಶಕ. 2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್​ನಲ್ಲಿ ರೌಡಿ ಶೀಟರ್ ಕೊತ್ತರವಿ  ಕೊಲೆಯಾಗಿತ್ತು. ಈ ಕೊಲೆ ಕೇಸ್​​ನಲ್ಲಿ ನಿರ್ದೇಶಕ ಗಜೇಂದ್ರ 8 ಆರೋಪಿಯಾಗಿದ್ದ. ಕೊಲೆ ಕೇಸ್​ ನಲ್ಲಿ ಬಂಧಿತನಾಗಿದ್ದ ಗಜೇಂದ್ರಗೆ  ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ  ನಂತರ ಗಜೇಂದ್ರ ಜಾಮೀನು ಪಡೆದು ಹೊರಬಂದಿದ್ದ.

ಜಾಮೀನು ಪಡೆದ ಬಳಿಕ ಗಜೇಂದ್ರ ಕೋರ್ಟ್ ​ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.  ಇದೀಗ ಗಜೇಂದ್ರನನ್ನ ಸಿಸಿಬಿ ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಈ ಹಿಂದೆ ಗಜೇಂದ್ರ  ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದನು.

Key words: film director, murder case, arrest






Previous articleಕಬಿನಿ ಜಲಾಶಯದ ಹೊರಹರಿವು ಮತ್ತಷ್ಟು ಹೆಚ್ಚಳ


Font Awesome Icons

Leave a Reply

Your email address will not be published. Required fields are marked *