ಪಂಚೆ ಧರಿಸಿ ಬಂದ ರೈತನಿಗೆ ಅಪಮಾನ : 7 ದಿನ ಜಿ.ಟಿ ಮಾಲ್ ಕ್ಲೋಸ್ ಮಾಡಿಸಲು ನಿರ್ಧಾರ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಜುಲೈ,18,2024 (www.justkannada.in):  ಪಂಚೆ ಧರಿಸಿ ಬಂದಿದ್ದಕ್ಕೆ ರೈತನಿಗೆ ಅಪಮಾನ ಮಾಡಿದ ಜಿ.ಟಿ ಮಾಲ್ ಅನ್ನು 7 ದಿನಗಳ ಕಾಲ ಮುಚ್ಚಿಸುತ್ತೇವೆ ಎಂದು ಸದನದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಘೋಷಣೆ ಮಾಡಿದ್ದಾರೆ.

ಶಾಸಕರ ಒತ್ತಾಯ ಹಿನ್ನೆಲೆ ಈ ಕುರಿತು ಸದನದಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ್,  ಈಗಾಗಲೇ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದೇವೆ. ಕಾನೂನಿನಲ್ಲಿ ಅವಕಾಶವಿದೆ  ಎಂದಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳುತ್ತೇವೆ 7 ದಿನಗಳ ಕಾಲ ಜಿಟಿ ಮಾಲ್ ಮುಚ್ಚಿಸುತ್ತೇವೆ ಎಂದರು.

ಪಂಚೆ ಧರಿಸಿ ಪುತ್ರನ ಜೊತೆ ಸಿನಿಮಾ ವೀಕ್ಷಣೆಗೆ ಬಂದಿದ್ದ ರೈತ  ಫಕೀರಪ್ಪರನ್ನು ಜಿಟಿ ಮಾಲ್ ಸಿಬ್ಬಂದಿ ಒಳಕ್ಕೆ ಬಿಡದೆ ತಡೆದು ಅಪಮಾನಿಸಿದ್ದರು. ಈ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು ಈ ಬೆನ್ನಲ್ಲೆ ಜಿಟಿ ಮಾಲ್ ಮಾಲೀಕ  ಘಟನೆಗೆ ಕ್ಷಮೆ ಕೋರಿ ರೈತ ಫಕೀರಪ್ಪರನ್ನು ಕರೆದು  ಸನ್ಮಾನಿಸಿದ್ದರು.

Key words: Insult, farmer, GT Mall, close, Minister, Bhairati Suresh

Font Awesome Icons

Leave a Reply

Your email address will not be published. Required fields are marked *