ಬಿಜೆಪಿ ಅವಧಿಯಲ್ಲಿ ಹಲವು ಹಗರಣ: ತನಿಖೆ ಮಾಡಿಸಿ ಜೈಲಿಗೆ ಕಳುಹಿಸಿದೇ ಬಿಡಲ್ಲ- ಸಿಎಂ ಸಿದ್ದರಾಮಯ್ಯ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಜುಲೈ,19,2024 (www.justkannada.in):  ಬಿಜೆಪಿ ಆಡಳಿತದ ಅವಧಿಯಲ್ಲಿ ಹಲವು ಹಗರಣಗಳು ನಡೆದಿವೆ. ಈ ಹಗರಣಗಳ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸದೇ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಕುರಿತು ಚರ್ಚೆಗೆ ವಿಧಾನಸಭೆಯಲ್ಲಿ 12 ಪುಟಗಳ ಲಿಖಿತ  ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವಧಿಯಲ್ಲಿನ 21 ಹಗರಣಗಳ ಬಗ್ಗೆ ಪ್ರಸ್ತಾಪಿಸಿದರು. ಎಪಿಎಂಸಿ ಹಗರಣ,  ಪ್ರವಾಸೊದ್ಯಮ ಇಲಾಖೆಯಲ್ಲಿ ಅಕ್ರಮ, ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ, ಕೋವಿಡ್ ಹಗರಣ ಮುಂತಾದ ಹಗರಣಗಳು ನಡೆದಿವೆ. ನಿಮ್ಮನ್ನು ಕಳ್ಳರು ಲೂಟಿಕೋರರು ಅಂತ ಜನ ವಿಪಕ್ಷದಲ್ಲಿರಿಸಿದ್ದಾರೆ. ನಾವು ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನ ಗೆದ್ದಿದ್ದೇವೆ ಎಲ್ಲಾ ಹಗರಣಗಳ ತನಿಖೆ ಮಾಡಿಸಿ ಜೈಲಿಗೆ ಕಳುಹಿಸಿದೇ ಬಿಡಲ್ಲ. ತಪ್ಪು ಮಾಡಿದವರನ್ನ ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿದರು.

ವಿರೋಧ ಪಕ್ಷದವರ ವಿರುದ್ದ 171 ಪ್ರಕರಣಗಳಿವೆ.  ಸಂವಿಧಾನ ವಿರೋಧಿಸಿದ ಆರ್ ಎಸ್ ಎಸ್ ನವರು ನಮಗೆ ಪಾಠ ಹೇಳಲು ಬರುತ್ತಾರೆ.  ನಿಗಮಕ್ಕೆ ಮೀಸಲಿಟ್ಟ ಹಣ ಕದಿಯಲು ಬಿಡಲ್ಲ. ಕಳ್ಳತನ ಮಾಡಿದರೂ ಕಳ್ಳರನ್ನ ಬಿಡಲ್ಲ.  ವಾಲ್ಮೀಕಿ ನಿಗಮ ಹಗರಣದಲ್ಲಿ ಹಣಕಾಸು ಇಲಾಖೆಯ ಪಾತ್ರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ವಾಲ್ಮೀಕಿ ನಿಗಮದಲ್ಲಿ ಯಾರನ್ನೂ ರಕ್ಷಣೆ ಮಾಡಲ್ಲ, ಎಸ್‌ ಐಟಿಯಿಂದ ನ್ಯಾಯಯುತ ತನಿಖೆ ಮಾಡಿಸ್ತಿದ್ದೇವೆ. ಕೇಂದ್ರದ ಕೆಳಗೆ ಬರುವುದರಿಂದ ಸಿಬಿಐ ಕೇಳುತ್ತಿದ್ದಾರೆ, ಯಾವ ಹಗರಣದ ಬಗ್ಗೆಯೂ ಇಡಿ ಬಂದಿರಲಿಲ್ಲ. ಇವಾಗ ಸುಮುಟೋ ಮೂಲಕ ಇಡಿ ತನಿಖೆ ಮಾಡ್ತಿದ್ದಾರೆ ಎಂದರು.

Key words: scandals, BJP period, Investigate, CM Siddaramaiah

Font Awesome Icons

Leave a Reply

Your email address will not be published. Required fields are marked *