ರಾಜ್ಯದ ಅಧಿಕೃತ ಭಾಷೆಯಾಗಿ ತುಳು, ಕೊಡವ, ಲಂಬಾಣಿ ಭಾಷೆ ಜಾರಿ ಯಾವಾಗ ?

ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದ್ದು, ಇಲಾಖೆಯಿಂದ ವರದಿ ಪಡೆದ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Ad

300x250 2

ಕೊಡವ ಮತ್ತು ಲಂಬಾಣಿ ಭಾಷೆಗೂ ಇದೇ ರೀತಿಯ ಕ್ರಮ ಮಾನ್ಯತೆ ಒದಗಿಸಲು ಆಗ್ರಹವಿದ್ದು, ತುಳು, ಕೊಡವ ಹಾಗೂ ಲಂಬಾಣಿ ಮೂರೂ ಭಾಷೆಗಳ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಬಂದ ಅನಂತರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

Font Awesome Icons

Leave a Reply

Your email address will not be published. Required fields are marked *