ಸೀರೆಗೆ ಅವಮಾನ ಅನ್ನೋ ಹೋರಾಟ ಶುರುವಾಗಿದ್ದು, ಇಡೀ ದೇಶಾದ್ಯಂತ ಇಂಥದ್ದೊಂದು ಕಿಡಿ ಹೊತ್ತಿದೆ. ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ನಮ್ಮ ದೇಶದ ಸಂಪ್ರದಾಯದಲ್ಲಿ ಸೀರೆಗೆ ಅದರದ್ದೇ ಆದ ಮಹತ್ವದ ಇದೆ.
ಸೀರೆಗೆ ಅವಮಾನ ಆಗ್ತಿದೆ ಅನ್ನೋ ಕೂಗು ಶುರುವಾಗಿದೆ. ಇದಕ್ಕೆ ವರ್ಡ್ ಮ್ಯಾಗ್ಜೀನ್ನ ಕವರ್ ಪೇಜ್ ಕಾರಣವಾಗಿದೆ. ಇತ್ತೀಚೆಗೆ ಪ್ರಸಿದ್ಧ ವರ್ಡ್ ಮ್ಯಾಗ್ಜೀನ್ ತನ್ನ ಕವರ್ಪೇಜ್ನಲ್ಲಿ ಸೀರೆಯನ್ನಟ್ಟಿರೋ ಒಂದಷ್ಟು ಪುರುಷರ ಫೋಟೋವನ್ನ ಹಾಕಿತ್ತು.
ಎಲ್ಜಿಬಿಟಿ ಸಮುದಾಯದ ಕರಣ್, ಪುಷ್ಪಕ್, ವರುಣ್, ಜಯಂತ್, ಕೋಕೋ ಸೇರಿದಂತೆ ಒಂದಷ್ಟು ಮೆನ್ ಮಾಡೆಲ್ಗಳು ಸೀರೆಯೊಟ್ಟು ಪೋಸ್ ಕೊಟ್ಟಿದ್ದರು. ಇದೇ ಫೋಟೋವನ್ನ ವರ್ಡ್ ಮ್ಯಾಗ್ಜೀನ್ ತನ್ನ ಕವರ್ಪೇಜ್ನಲ್ಲಿ ಪ್ರಕಟಿಸಿದೆ.
ಅಲ್ಲದೇ The sari belongs to everyone. ಅಂತಾ ಕ್ಯಾಪ್ಶನ್ ಕೊಟ್ಟಿತ್ತು. ಅಂದ್ರೆ ಸೀರೆ ಎಲ್ಲರಿಗೂ ಸೇರಿದ್ದು ಅನ್ನೋ ಕ್ಯಾಪ್ಶನ್ ಕೊಟ್ಟಿತ್ತು. ಇಲ್ಲಿಂದಲೇ ನೋಡಿ ವಿವಾದದ ಕಿಡಿ ಹೊತ್ತಿಕೊಂಡಿದೆ.
ಯಾವಾಗ ವರ್ಡ್ ಮ್ಯಾಗ್ಜೀನ್ ಕವರ್ಪೇಜ್ನಲ್ಲಿನ ಸ್ಯಾರಿ ಸೀರಿಸ್ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ ಸಂಪ್ರದಾಯಬದ್ಧ ಭಾರತೀಯರ ಕಣ್ಣನ್ನ ಕೆಂಪಾಗುವಂತೆ ಮಾಡಿದೆ.
ಸೀರೆ ಎಲ್ಲರಿಗೂ ಸೇರಿದ್ದಲ್ಲ ಅದು ಮಹಿಳೆಯರಿಗೆ ಮಾತ್ರ ಸೇರಿದ್ದು ಅನ್ನೋ ಕೂಗು ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಇದು ಸೀರೆಗೆ ಮಾಡಿದ ಅವಮಾನ ಅನ್ನೋ ಚರ್ಚೆಯೂ ಜಾಲತಾಣದಲ್ಲಿ ನಡೀತಿದೆ. ಈ ನಡುವೆ ಭಾರತಕ್ಕೆ ವೋಕ್ ಕಲ್ಚರ್ ಬರೋದನ್ನ ತಡೆಯಬೇಕು ಅನ್ನೋ ಅಭಿಯಾನವೇ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ವೋಕ್ ಕಲ್ಚರ್ ಅನ್ನೋ ಪರಿಕಲ್ಪನೆ ಇದೆ. ಜನಾಂಗಿಯ ಸಮಾನತೆ ಹಾಗೂ ಲಿಂಗ ಸಮಾನತೆ ಕಾಪಾಡಿಕೊಳ್ಳುವ ಉದ್ದೇಶ ಇದರದ್ದಾಗಿದೆ. ಎಲ್ಜಿಬಿಟಿ ಸಮುದಾಯದವರಿಗೆ ಸಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸಮಾನ ಹಕ್ಕು ಸಿಗಬೇಕು ಅನ್ನೋ ಮನಸ್ಥಿತಿಯ ಜನ ವೋಕ್ ಕಲ್ಚರ್ನ್ನ ಪಾಲಿಸ್ತಾರೆ.
ಅಮೆರಿಕಾದಂತ ದೇಶಗಳಲ್ಲಿ ಇದು ಸಾಮಾನ್ಯ. ಆದ್ರೆ ಇದೇ ಕಲ್ಚರ್ ಇದೀಗ ಸೀರೆಯನ್ನ ಪುರುಷರೂ ಧರಿಸೋ ಮೂಲಕ ಭಾರತಕ್ಕೆ ಬರ್ತಿದೆ ಅನ್ನೋ ಕಿಡಿ ಹೊತ್ತಲು ಕಾರಣವಾಗಿದೆ. ನಮ್ಮದು ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಬಹಳ ಪ್ರಾಮುಖ್ಯತೆ ನೀಡುವ ದೇಶ.
ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿರೋ ಈ ವೋಕ್ ಕಲ್ಚರ್ನ್ನ ಒಪ್ಪದವರು ಇದನ್ನ ವೋಕ್ ವೈರಸ್ ಅಂತಾ ಕರೀತಾರೆ. ಹೀಗಾಗಿ ಸೀರೆಯ ವೇಷಧಲ್ಲಿ ವೋಕ್ ವೈರಸ್ ಭಾರತಕ್ಕೆ ಬರ್ತಿದೆ. ಇದನ್ನ ತಡೆಯಬೇಕು ಅನ್ನೋ ಕೂಗು ಶುರುವಾಗಿದೆ. ಅಲ್ಲದೇ ಸೀರೆಯ ಮಹತ್ವವನ್ನು, ಅದರ ಘನತೆಯನ್ನು ಕಾಪಾಡಬೇಕು ಅನ್ನೋ ಚರ್ಚೆಗೂ ಕಾರಣ.