ʼಅಹಿಂದʼ ನಾಯಕರ ವಿರುದ್ಧ ಪಿತೂರಿಗೆ ದಶಕಗಳ ಇತಿಹಾಸವಿದೆ ; ಹಿರಿಯ ಪತ್ರಕರ್ತ ಎಂ.ಸಿದ್ದರಾಜು ವಿಶ್ಲೇಷಣೆ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

Chief Minister Siddaramaiah turns 77 tomorrow and is making his 78th spring debut.(August 3, 1947, the day Siddaramaiah was born) A man, a popular leader, needs more reason to celebrate than this? Especially Siddaramaiah, a popular leader, “Huliya” who has millions of fans.

 

ಬೆಂಗಳೂರು, ಆ.02,2024: ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 77 ವರ್ಷ ಪೂರೈಸಿ, 78 ನೇ ವಸಂತ ಕ್ಜೆ ಪಾದಾರ್ಪಣೆ ಮಾಡುತ್ತಿದ್ದಾರೆ.  ( ಆಗಸ್ಟ್‌ 3, 1947 ಸಿದ್ದರಾಮಯ್ಯ ಜನಿಸಿದ ದಿನ) ಒಬ್ಬ ವ್ಯಕ್ತಿ, ಜನಮನ್ನಣೆ ಗಳಿಸಿದ ನಾಯಕನಿಗೆ, ಸಂಭ್ರಮ ಆಚರಿಸಲು ಇದಕ್ಕಿಂತ ಕಾರಣ ಬೇಕೇ? ಅದರಲ್ಲೂ ಸಿದ್ದರಾಮಯ್ಯ, ಓರ್ವ ಜನಾನುರಾಗಿ ನಾಯಕ, ಲಕ್ಷಾಂತರ ಅಭಿಮಾನಿ ಬಳಗವುಳ್ಳ  ” ಹುಲಿಯಾ”.

ಇಂತಹ ನಾಯಕನ ಜನ್ಮ ದಿನವನ್ನು ಆಚರಿಸಲು ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ ಎಂದರೆ ಆಶ್ಚರ್ಯ ಪಟುವಂತದು ಏನೂ ಇರದು.

2022 ರ ಆಗಸ್ಟ್‌  3 ರಂದು ಸಿದ್ದರಾಮಯ್ಯ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ, ತಮ್ಮ ನೆಚ್ಚಿನ ನಾಯಕನ ಅಮೃತ ಮಹೋತ್ಸವದ ಆಚರಣೆಯನ್ನು ಅದ್ಧೂರಿಯಾಗಿ, ಲಕ್ಷೋಪ ಲಕ್ಷ ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಿ, ಇತಿಹಾಸವನ್ನು ಸೃಷ್ಟಿ ಸಿದ್ದರು. ಬಹುಶಃ ಇತಿಹಾಸದಲ್ಲಿ ಯಾವೊಬ್ಬ ನಾಯಕನ ಜನ್ಮ ಅಮೃತೋತ್ಸವ ಇಷ್ಟೊಂದು ಜನ ಸಾಗರದ ನಡುವೆ ನಡೆದ ಇತಿಹಾಸ ಹಿಂದೆ ಸೃಷ್ಟಿ ಯಾಗಿಲ್ಲಾ, ಮಂದೆ ಆಗುವ ಸಂಭವವೂ ಕಡಿಮೆ.

ಸಿದ್ದರಾಮಯ್ಯ ನವರ ಎಪ್ಪತೈದನೆ ಹುಟ್ಟು ಹಬ್ಬದ ಆಚರಣೆ, ಒಂದು ರೀತಿಯಲ್ಲಿ 2023 ರ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವಿಜಯೋತ್ಸವಕ್ಕೆ ಮುನ್ನುಡಿ ಬರೆಯಿತು ಎಂದೆ ಭಾವಿಸಬಹುದು. ಸಿದ್ದರಾಮಯ್ಯ ನವರಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಯಾದುದು ಹೇಗೆ? ಅದಕ್ಕೆ ಉತ್ತರ ಸರಳ. ಸಿದ್ದರಾಮಯ್ಯ ನವರ ನಡೆದುಕೊಂಡು ಬಂದ ಸರಳ ಜೀವನ, ಆತ್ಮೀಯತೆಯಿಂದ ಎಲ್ಲರೊಡನೆ ಬೆರೆತ ರೀತಿ, ಜನ ಸಾಮಾನ್ಯ ರ ಬದುಕು ಬವಣೆಗೆ ಸ್ಪಂದಿಸಿ ದ ರೀತಿ, ಆದಿಕಾರದಲ್ಲಿದ್ಸಾಗ ಜನ ಹಿತಕ್ಜೆ ಜಾರಿಗೊಳಿಸಿದ ಜನಪರ ಯೋಜನೆಗಳು. ಹಾಗೂ ಹಿಂದುಳಿದ ವರ್ಗದ ಜನ ಸಿದ್ದರಾಮಯ್ಯ ನವರನ್ನು ತಮ್ಮ ಆಶಾ ಕಿರಣ ಎಂದು ಅವರ ನಾಯಕತ್ವದಲ್ಲಿ ಭರವಸೆ ಇಟ್ಟಿದ್ದು, ಆ ಭರವಸೆಯನ್ನು ಹುಸಿಗೊಳಿಸದಂತೆ ಸಿದ್ದರಾಮಯ್ಯ ಸ್ಪಂದಿಸಿದ್ದು ಕಾರಣ.

ದಿವಂಗತ ಡಿ ದೇವರಾಜ್ ಅರಸ್ ಅವರು ಈ ರಾಜ್ಯ ಕಂಡ ಧೀಮಂತ ನಾಯಕ, ಉತ್ತಮ ಆಡಳಿತಗಾರ. ಬಡವರಿಗೆ, ತುಳಿತಕ್ಕೆ ಒಳಗಾದ ಸಮುದಾಯದ ಅಭ್ಯುದಯಕ್ಕೆ ಅವರ ಜಾರಿಗೊಳಿಸಿದ ಕಾರ್ಯಗಳನ್ನು ಬೇರೆ ಯಾರೂ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಬಡವರ ಪಾಲಿನ ಆರಾಧ್ಯದೈವ ಅರಸುವರು. ಅವರು ಜಾರಿಗೆ ತಂದ ಭೂ ಸುಧಾರಣೆ ಕಾರ್ಯಕ್ರಮ ಹಲವು ಭೂಮಿ ರಹಿತ ಕೂಲಿಗಾರರನ್ನು ಭೂ ಒಡೆಯರನ್ನಾಗಿ ಮಾಡಿತು. ಹಿಂದುಳಿದ ವರ್ಗದ ಅನೇಕರನ್ನು ರಾಜಕೀಯಕ್ಕೆ ತಂದು ಅವರನ್ನು ನಾಯಕರನ್ನಾಗಿಸಿದ ಕೀರ್ತಿ ಅರಸರದು. ಬಡವರಿಗೆ ಸೂರು, ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮಂಚೂಣಿಯಲ್ಲಿರುವ ಹಾಗೆ ಹಲವು ಯೋಜನೆಯನ್ನು ಅವರು ರೂಪಿಸಿದ್ದರು.

ದೇವರಾಜ್ ಅರಸ್ ರು ಅಸ್ತಂಗತರಾದ ನಂತರ ಹಿಂದುಳಿದ ಹಾಗೂ ದಲಿತರ ಪರ ಹೋರಾಡುವ ನಾಯಕನ ಕೊರತೆ ಈ ರಾಜ್ಯವನ್ನು ಕಾಡುತ್ತಿತ್ತು. ಇಂತಹ ಕೊರತೆಯನ್ನು ಸ್ವಲ್ಪ ಮಟ್ಟಿಗೆ ತುಂಬುದವರು ಎಸ್ ಬಂಗಾರಪ್ಪ.

ಬಂಗಾರಪ್ಪ ನವರ ನಂತರ ಹಿಂದುಳಿದ, ಅಲ್ಪ ಸಂಖ್ಯಾತರ ಹಾಗೂ ದಲಿತರ ನೆಚ್ಚಿನ ನಾಯಕ, ಅಹಿಂದ ವರ್ಗದ ಆಶಾ ಕಿರಣವಾಗಿ ಹೊರ ಹೊಮ್ಮಿದ ವರು ಎಂದರೆ ಅದು ಸಿದ್ದರಾಮಯ್ಯ. ಇಂದಿಗೂ ಅಹಿಂದ ವರ್ಗ ಸಿದ್ದರಾಮಯ್ಯ ನವರ ಮೇಲೆ ತುಂಬಾ ಭರವಸೆ ಇಟ್ಟಿದೆ.  ಸಿದ್ದರಾಮಯ್ಯ ನವರು ಈ ವರ್ಗ ಅವರ ಮೇಲೆ ಇಟ್ಟಿರುವ ಭರವಸೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ.

 ಕರ್ನಾಟಕ ರಾಜ್ಯದ ಲ್ಲಿ ಅಹಿಂದ ವರ್ಗದ ಜನರ ಹಣೆ ಬರಹವೆ ಸರಿಯಿಲ್ಲಾ ಎನಿಸುತ್ತಿದೆ. ಅಹಿಂದ ವರ್ಗದ ನಾಯಕರು ಮುಂಚೂಣಿ ಗೆ ಬಂದಾಗಲೆಲ್ಲಾ ಅವರ ವಿರುದ್ಧ ಪಿತೂರಿ ಹೆಣೆದು ಅವರನ್ನು ಮೂಲೆಗೆ ಸರಿಸಲಾಗುತ್ತೆ. ಮಾಧ್ಯಮ ಗಳಂತೂ ಹಿಂದುಳಿದ ವರ್ಗದ ನಾಯಕರಿಗೆ ಬೆಂಬಲಿಸಿದ ಉದಾಹರಣೆ ಕಡಿಮೆ.

ಚಾರಿತ್ರಿಕ ನಿರ್ಧಾರ ಗಳಿಂದ ಬಡ ಜನರ ಬದುಕನ್ನೆ ಬದಲಿಸಿದ ದೇವರಾಜ್ ಅರಸ್ ರನ್ನು ಸಹ ಮಾಧ್ಯಮ ಗಳು ಬೆಂಬಲಿಸಲಿಲ್ಲ,  ಅವರ ಪರ ನಿಲ್ಲಲಿಲ್ಲಾ. ಕೇವಲ ಐದು ಕೋಟಿ ಮೊತ್ತದ ಕ್ಲಾಸಿಕ್ ಕಂಪೂಟರ್ ಕೇಸ್ ಹಿಡಿದು ಆಶ್ರಯ, ಆರಾಧನಾ, ಕೌಶಲ್ಯ ಹೀಗೆ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದ ಬಂಗಾರಪ್ಪ ನವರಿಗೂ ಬೆಂಬಲ ಸಿಗಲಿಲ್ಲಾ. ಕಡಿಮೆ ಜನ ಸಂಖ್ಯೆ ಉಳ್ಳ ಸಮುದಾಯದ ವೀರಪ್ಪ ಮೊಯಿಲಿ, ಮುಖ್ಯ ಮಂತ್ರಿ ಯಾಗಿ ಕ್ರಾಂತಿ ಕಾರಿ ಸಿ ಇ ಟಿ ವ್ಯವಸ್ಥೆ ಜಾರಿಗೊಳಿಸಿದ ರು ಎಂಬ ಕಾರಣಕ್ಕೆ ಅವರನ್ನು ತುಳಿಯಲಾಯಿತು.

ಇನ್ನು ರಜಪೂತ ಸಮುದಾಯದ ಧರಂ ಸಿಂಗ್ ರವರದು ಅನ್ವರ್ಥ ನಾಮ. ಸಹಾಯ ಹಸ್ತ ಚಾಚುವುದರಲ್ಲಿ ಧರ್ಮ ರಾಯನೆ.  ಯಾರದೊ ಪುತ್ರ ವ್ಯಾಮೋಹ ಕ್ಕೆ ಬಲಿಯಾಗಿ ಅಧಿಕಾರ ಕಳೆದುಕೊಂಡರು.

ಈ ರಾಜ್ಯದಲ್ಲಿ ಅಹಿಂದ ವರ್ಗದ ಜನರ ಜನ ಸಂಖ್ಯೆ ಶೇಕಡ ಸರಿ ಸುಮಾರು 69 ರಷ್ಟಿದೆ. ಈ ವರ್ಗದ ಜನ ಸಂಘಟಿತರಾಗುತ್ತಿಲ್ಲಾ.ಅಥವಾ ಇವರನ್ನು ಸಂಘಟಿತರಾಗಲು ಬಿಡುತ್ತಿಲ್ಲಾ. ಇದರಲ್ಲಿ ಯಾವುದು ಸತ್ಯ ಎಂಬುದನ್ನು ಪರಾಂಭರಿಸುವ ಕಾಲ ಯಾವಾಗ ಬರುವುದು? ಅದಕ್ಕಾಗಿ ಇನ್ನು ಎಷ್ಟು ವರ್ಷ ಕಾಯಬೇಕು?

ದೇವರಾಜ್ ಅರಸ್ ರವರು ಎಂಟು ವರ್ಷಗಳ ಕಾಲ ಮುಖ್ಯ ಮಂತ್ರಿ ಯಾಗಿದ್ದರೂ ಅವರಿಗೆ ಕಿರುಕುಳ ಇಲ್ಲದೆ ಇರಲಿಲ್ಲಾ. ಹಿಂದುಳಿದ ನಾಯಕರು ಮುಖ್ಯ ಮಂತ್ರಿ ಯಾದರೆ, ಕೂಡಲೆ ಕುರುಕುಳಗಳು ಅವರನ್ನು ಹಿಂಬಾಲಿಸಿ ಬರುತ್ತವೆ. ಅವರಿಗೆ ಮಾತ್ರ ಹೀಗೇಕೆ?

ಬಂಗಾರಪ್ಪ ತಮ್ಮ ಮುಖ್ಯ ಮಂತ್ರಿಯ ಎರಡು ವರ್ಷಗಳ ಅವಧಿಯ ಉದ್ದಕ್ಕೂ ಬಿನ್ನಮತ ಅನುಭವಿದರು. ವೀರಪ್ಪ ಮೊಯಿಲಿ ಯವರನ್ನೂ ಬಿನ್ನಮತದ ಭೂತ ಬಿಡದಂತೆ ಕಾಡಿತು.

1983 ರ ವಿಧಾನ ಸಭಾ ಚುನಾವಣೆಯಲ್ಲಿ ಚುನಾವಣಾ ಕಣಕ್ಕೆ ದುಮುಕಿದ ಸಿದ್ದರಾಮಯ್ಯ ಗೆದ್ದು, ಅತಿ ಕಡಿಮೆ ಅವಧಿಯಲ್ಲಿ ಜನಾನುರಾಗಿ ನಾಯಕರಾಗಿ ಬೆಳೆದರು. ಅಹಿಂದ ವರ್ಗದ ಆಶಾಕಿರಣವಾಗಿ ವಿಜೃಂಭಿಸುತ್ತಿದ್ದಾರೆ. ಸಿದ್ದರಾಮಯ್ಯ ನವರ ಈ ಬೆಳವಣಿಗೆ, ಜನಪ್ರಿಯತೆ ಹಲವರಿಗೆ ಕಣ್ಣು ಕೆಂಪಗೆ ಮಾಡಿದೆ. ಅಹಿಂದ ವರ್ಗದ ಜನ ಸಿದ್ದರಾಮಯ್ಯ ನವರನ್ನು ಆರಾಧಿಸುವ ರೀತಿ ಕಂಡು ಹಲವರಿಗೆ ಸಂಕಟವಾಗಿದೆ. ಅಹಿಂದ ವರ್ಗದ ಜನರ ಪರ ಹೋರಾಟ ಪ್ರಾರಂಭಿಸಿದ ಕಾರಣಕ್ಕೆ ಸಿದ್ದರಾಮಯ್ಯ ನವರನ್ನು ಜಾತ್ಯಾತೀತ ಜನತಾದಳ ಪಕ್ಷದಿಂದ ಉಚ್ಚಾಟಿಸಲಾಯಿತು. ಉಪ ಮುಖ್ಯ ಮಂತ್ರಿ ಹುದ್ದೆಯಿಂದ ವಜಾ ಗೊಳಿಸಲಾಯಿತು ಎಂಬುದು ಬಹಿರಂಗ ಸತ್ಯ.

ರಾಜಕೀಯವಾಗಿ ತಮ್ಮನ್ನು ಮುಗಿಸಲು ಕೆಲವರು ಹೆಣೆದ ಕುತಂತ್ರಕ್ಕೆ ಸಿದ್ದರಾಮಯ್ಯ ಜಗ್ಗಲಿಲ್ಲಾ, ಕಂಗೆಡಲಿಲ್ಲಾ. ಬದಲಿಗೆ ಅಹಿಂದ ವರ್ಗದ ಜನರ ಸಂಘಟಿಸಿ, ತಮ್ಮ ರಾಜಕೀಯ ವೈರಿಗಳಿಗೆ ತಕ್ಜ ಉತ್ತರ ನೀಡಿದರು.ಬಹುಶಃ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮಾಡಿದ ಒಂದು ತಪ್ಪು ಎಂದರೆ, ರಾಮಕೃಷ್ಣ ಹೆಗಡೆ, ಜೆ ಹೆಚ್ ಪಟೇಲ್ ರ ಜನತಾ ಪರಿವಾರ ತೊರೆದು ಜಾತ್ಯಾತೀತ ಜನತಾದಳ ಕ್ಕೆ ಹೋದದ್ದು.

ಜಾತ್ಯಾತೀತ ಜನತಾದಳ ದಿಂದ ಸಿದ್ದರಾಮಯ್ಯ ನವರ ಉಚ್ಚಾಟನೆ, ಒಂದು ರೀತಿಯಲ್ಲಿ ಅವರಿಗೆ ವರವೇ ಆಯಿತು. ಸಿದ್ದರಾಮಯ್ಯ ನವರಲ್ಲಿ ಇದ್ದ ನಾಯಕತ್ವದ ಗುಣ, ಅಹಿಂದ ವರ್ಗ ಅವರ ಮೇಲೆ ಇಟ್ಟಿದ್ದ ಭರವಸೆ ಬೆಳಕಿಗೆ ಬಂದವು.  ಸಿದ್ದರಾಮಯ್ಯ ನವರ ರಾಜಕೀಯ ಏಳಿಗೆ ಸಹಿಸಲಾರದ ಆತ್ಮಗಳು ಇಂದಿಗೂ ಇವೆ. 2023 ರಲ್ಲಿ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯ ಮಂತ್ರಿ ಯಾದುದು, ಈ ಅತೃಪ್ತ ಆತ್ಮಗಳಿಗೆ ನಿದ್ದೆ ಗೆಡಿಸಿದೆ. ಅವರ ವರ್ಚಸ್ಸಿಗೆ ಹೇಗಾದರೂ ಮಸಿ ಬಳಿಯಲು ಇನ್ನಿಲ್ಲದ ಸಂಚು ಹೂಡುತ್ತಿವೆ.

77 ವಸಂತ ಗಳ ಪೂರೈಸಿ, 78 ನೆ ವರ್ಷ ಕ್ಕೆ ಪಾದಾರ್ಪಣೆ ಮಾಡುವ ಹೊತ್ತಲ್ಲಿ ಸಂಕಷವೊಂದು ಎರಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರ ಇವರ ಜಮೀನನ್ನು ವಶ ಪಡಿಸಿಕೊಂಡ ಕಾರಣ ಬದಲಿಗೆ ಹಂಚಿಕೆ ಮಾಡಿದ ಹದಿನಾಲ್ಕು ನಿವೇಶನ ಹಗರಣದ ರೂಪ ಪಡೆದು ಕಾಡಿದೆ. ಎಲ್ಲಾ ಅಭಿವೃದ್ಧಿ ಪ್ರಾಧಿಕಾರ ಗಳು ಭೂಮಿ ಕಳೆದುಕೊಂಡ ಜಮೀನಿನ ಮಾಲೀಕರಿಗೆ ನಿವೇಶನ ನೀಡುವ ಕಾನೂನು ಇದೆ.

ಮೂಡಾ ಹಗರಣದ ಆರೋಪ ಬರುತ್ತಿದ್ದಂತೆ ಸಿದ್ದರಾಮಯ್ಯ ಜನತೆಯ ಮುಂದೆ ಸವಿಸ್ತಾರವಾಗಿ ವಿವರಣೆ ಇಟ್ಟಿದ್ದಾರೆ. ಇಷ್ಟಾದರೂ ಸತ್ಯ ಹೊರಬರಲಿ ಎಂದು ನ್ಯಾಯಾಂಗ ತನಿಖೆ ಆದೇಶ ಮಾಡಿದ್ದಾರೆ. ಏತನ್ಮಧ್ಯೆ, ದೂರೊಂದರ ಆಧಾರದ ಮೇಲೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರನ್ನು ಶಿಕ್ಷೆಗೆ ಗುರಿಪಡಿಸಲು ಅನುಮತಿ ಕೋರಿದ್ದ ಅರ್ಜಿಯ ಅನ್ವಯ ರಾಜ್ಯ ಪಾಲ ತಾವರ್ ಚಂದ್ ಗೆಹಲೋತ್ ವಿವರಣೆ ಕೋರಿ ಪ್ರತ ಬರೆದಿದ್ದಾರೆ.

ರಾಜ್ಯಪಾಲರ ಈ ನಡೆ, ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಪ್ರತಿಭಟನೆ ಗೆ ನಾಂದಿ ಹಾಡಿದೆ. ಮೋದಿಯವರ ಸರ್ಕಾರ ರಾಜ್ಯಪಾಲರ ಮೂಲಕ ಬೆಜೆಪಿಯೇತರ ಸರ್ಕಾರಗಳನ್ನು ಅಸ್ಥಿರ ಗೊಳಿಸಲು ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇನ್ನೊಂದು ಕಡೆ ಪ್ರತಿ ಪಕ್ಷ ಬಿಜೆಪಿ ಜೆಡಿಎಸ್ ಮೂಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಕುರಿತು ಸರ್ಕಾರದ ವಿರುದ್ಧ ಬೆಂಗಳೂರಿಂದ ಮೈಸೂರು ವರಗೆ ಆಗಸ್ಟ್‌  3 ರಿಂದ ಪಾದಯಾತ್ರೆ ಮಾಡುತ್ತಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಆರಂಭಿಸುತ್ತಿದೆ. ಬಿಜೆಪಿ ಆಡಳಿತದ ಹಗರಣ ಗಳನ್ನು ಬಯಲಿಗೆ ಏಳೆಯುತ್ತೇವೆ ಎಂದು ಸರ್ಕಾರ ಶಪಥ ಮಾಡಿದೆ.

ಅನ್ನ ಭಾಗ್ಯ, ಶಾಧಿ ಭಾಗ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ಅವರ ಜನಸಂಖ್ಯ ಗೆ ಅನುಗುಣವಾಗಿ ಅನುದಾನ ಮೀಸಲಿಟ್ಟ ಸಿದ್ದರಾಮಯ್ಯ ಈ ವರ್ಷ ತಮ್ಮ ಜನ್ಮ ದಿನವನ್ನು ಆಚರಿಸಿ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಅವರ ಅಭಿಮಾನಿಗಳು ಸಹ ಸಂಭ್ರಮಿಸುವ ಮನಸ್ಥಿತಿ ಯಲ್ಲಿಲ್ಲ.

ಸದ್ಯಕ್ಕೆ ಸಿದ್ದರಾಮಯ್ಯ ನವರ ಮಂತ್ರಿ ಮಂಡಲ ಅವರ ಬೆಂಬಲಕ್ಕೆ ನಿಂತಿದೆ. ರಾಜ್ಯಪಾಲರ ನಡೆಯ ಕುರಿತು ಖಂಡಣಾ ನಿರ್ಣಯ ಕೈ ಗೊಂಡಿದೆ ಸಚಿವ ಸಂಪುಟ ಸಭೆ. ಒಂದು ವೇಳೆ ರಾಜ್ಯಪಾಲರು ಸಿದ್ದರಾಮಯ್ಯ ನವರ ವಿರುದ್ಧ ಪ್ರಾಷಿಕೂಷನ್ಗೆ ಅನುಮತಿ ನೀಡಿದರ, ಕಾಂಗ್ರೆಸ್ ವರಿಷ್ಠ ರು ಅವರ ಪರ ನಿಲ್ಲುವರೆ.?

ಅಹಿಂದ ವರ್ಗ ಜಾಗೃತರಾಗುವ ಕಾಲ ಈಗ ಸಕಾಲ. ಸಿದ್ದರಾಮಯ್ಯ ನವರ ಪರ ನಿಲ್ಲಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ನವರಿಗಿಂತ ಅಹಿಂದ ವರ್ಗಕ್ಕೆ ಇದೆ.

  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

key words: Conspiracies, against, “Ahinda” leaders, have decades of history, Analysis, by senior journalist, M. Siddaraju.

 

SUMMARY: 

Chief Minister Siddaramaiah turns 77 tomorrow and is making his 78th spring debut.(August 3, 1947, the day Siddaramaiah was born) A man, a popular leader, needs more reason to celebrate than this? Especially Siddaramaiah, a popular leader, “Huliya” who has millions of fans.

 

Font Awesome Icons

Leave a Reply

Your email address will not be published. Required fields are marked *