ಮೈಸೂರು,ಆಗಸ್ಟ್,2,2024 (www.justkannada.in): ಕೇರಳದ ವಯನಾಡುವಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಮೈಸೂರು ಮೂಲದವರಲ್ಲಿ ಇದೀಗ ಮತ್ತೆ ನಾಲ್ವರ ಶವ ಪತ್ತೆಯಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರದ ಉಕ್ಕಲಗೇರಿ ಗ್ರಾಮದವರಾದ ಒಂದೇ ಕುಟುಂಬದ 9 ಮಂದಿ ಭೂಕುಸಿತದಲ್ಲಿ ಕಣ್ಮರೆಯಾಗಿದ್ದರು. ಮಹದೇವಮ್ಮ ಕುಟುಂಬದ 9 ಮಂದಿ ಪೈಕಿ 8 ಮಂದಿಯ ಶವ ಪತ್ತೆಯಾಗಿದೆ. ಇದೀಗ ಎನ್ ಡಿಆರ್ ಎಫ್ ಹಾಗು ಶ್ವಾನದಳದಿಂದ ಪತ್ತೆ ಕಾರ್ಯ ನಡೆಸಲಾಗಿದ್ದು, ಅಶ್ವಿನ್, ಶ್ರೇಯ, ಶಿವಣ್ಣ, ಗುರುಮಲ್ಲ ಎಂಬುವವರ ಶವ ಪತ್ತೆಯಾಗಿದೆ. ಮೆಪ್ಪಾಡಿಯ ಕಮ್ಯುನಿಟಿಹಾಲ್ ನಲ್ಲಿದ್ದ ಶವಗಳನ್ನ ಮಹದೇವಮ್ಮ ಗುರುತಿಸಿದ್ದಾರೆ.
ಈ ಕುಟುಂಬ ಚುರ್ಲಮಲದಲ್ಲಿ ಹಲವು ವರ್ಷದಿಂದ ವಾಸವಾಗಿತ್ತು. ತಮ್ಮ ಕುಟುಂಬದ ಸದಸ್ಯರು ನಾಪತ್ತೆಯಾದ ಬಗ್ಗೆ ಮಹದೇವಮ್ಮ ಸಿಎಂ ಸಿದ್ದರಾಮಯ್ಯ ಜೊತೆ ಮೊಬೈಲ್ ಮೂಲಕ ಮಾತನಾಡಿದ್ದರು. ಸಿಎಂ ಜೊತೆ ಸಂಕಷ್ಟ ಹೇಳಿಕೊಂಡಿದ್ದರು. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗು ಕಾಂಗ್ರೆಸ್ ನಾಯಕಿ ಪ್ರಿಯಾಂಕಗಾಂಧಿ ಕೂಡ ಭೇಟಿಯಾಗಿದ್ದರು. ಇದೀಗ ಶವವಾಗಿ ಪತ್ತೆಯಾಗಿರುವ ಎಲ್ಲರನ್ನ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಮಾಡಲಾಗಿದೆ.
Key words: Wayanad Landslide, Mysore, Four, dead Body, found