ಅಧಿವೇಶನದಲ್ಲಿ ಉತ್ತರ ಕೊಡದೆ ಓಡಿ ಹೋದ ರಣಹೇಡಿ ಸಿಎಂ: ತಾಕತ್ ಇದ್ರೆ ನಮ್ಮ ಹಗರಣ ಬಿಚ್ಚಿಡಿ- ಬಿವೈ ವಿಜಯೇಂದ್ರ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಆಗಸ್ಟ್,10,2024 (www.justkannada.in): ಅಧಿವೇಶನದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೆ ಓಡಿ ಹೋದ ರಣಹೇಡಿ ಸಿಎಂ ಇವರು. ನೀವು ಪ್ರಾಮಾಣಿಕವಾಗಿ ಇದ್ದರೆ ಸದನದಿಂದ ಯಾಕೆ ಓಡಿ ಹೋದ್ರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮೈಸೂರು ಚಲೋ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಇದು ಸಿದ್ದರಾಮಯ್ಯರ ವಿರುದ್ದ ಹೋರಾಟವಲ್ಲ. ಇದು ಭ್ರಷ್ಟ ಮುಖ್ಯಮಂತ್ರಿ ವಿರುದ್ದದ ಹೋರಾಟ. ಕನ್ನಡಿಗರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯದ ವಿರುದ್ದದ ಹೋರಾಟವಿದು. ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಬುಡ ಸಮೇತ ಕಿತ್ತು ಹಾಕುವ ಹೋರಾಟ ಇದು. ಅಧಿಕಾರದ ದಾಹದಿಂದ ನಾವು ಹೋರಾಟ ಮಾಡುತ್ತಿಲ್ಲ ಎಂದರು.

ಇದು ದರಿದ್ರ ಸರಕಾರ. ಬಡವರ ಕಲ್ಯಾಣಕ್ಕೆ ಹಣ ನೀಡದ ದರಿದ್ರ ಸರಕಾರವಿದು. ಸಿದ್ದರಾಮಯ್ಯರ ದರಿದ್ರ ಸರಕಾರದಿಂದ ಯಾವ ವರ್ಗದ ಜನರು ಸಂತೋಷವಾಗಿಲ್ಲ. ರಾಜ್ಯದ ಜನರ ಪಾಲಿಗೆ ಕಾಂಗ್ರೆಸ್ ಸರಕಾರ ಬದುಕಿದ್ದು ಸತ್ತ ರೀತಿ ಇದೆ. ವಿರೋಧ ಪಕ್ಷಗಳು ಸವಾಲ್ ಹಾಕಿದ್ದರೆ ನಮಗೆ ಧಮ್ಕಿ ಹಾಕುತ್ತೀರಾ. ವಿರೋಧ ಪಕ್ಷಗಳು ನಿಮ್ಮ ಚಮಚಾಗಿರಿ ಮಾಡಿಕೊಂಡು ಇರಬೇಕಾ? ನಿಮ್ಮ ಭ್ರಷ್ಟಾಚಾರಕ್ಕೆ ಬಹು ಪರಾಕ್ ಹೇಳಿಕೊಂಡು ಇರಬೇಕಾ? ಎಂದು ಬಿವೈ ವಿಜಯೇಂದ್ರ ಪ್ರಶ್ನಿಸಿದರು.

ತಾಕತ್ ಇದ್ದರೆ ನಮ್ಮ ಹಗರಣ ಬಿಚ್ಚಿಡಿ.

ಅಧಿವೇಶನದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೆ ಓಡಿ ಹೋದ ರಣಹೇಡಿ ಸಿಎಂ ಇವರು. ನೀವು ಪ್ರಾಮಾಣಿಕವಾಗಿ ಇದ್ದರೆ ಸದನದಿಂದ ಯಾಕೆ ಓಡಿ ಹೋದ್ರಿ. ಡಿಸಿಎಂ ವಿಪಕ್ಷಗಳಿಗೆ ಗೊಡ್ಡು ಬೆದರಿಕೆ ಒಡ್ಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ತಾಕತ್ ಇದ್ದರೆ ನಮ್ಮ ಹಗರಣ ಬಿಚ್ಚಿಡಿ. ಅದಕ್ಕೂ ಮುನ್ನ ಮೂಡಾ, ವಾಲ್ಮೀಕಿ ಹಗರಣ ಬಿಚ್ಚಿಡಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿ ಆಗಿ ಅಂತಾರೆ ಸಿದ್ದರಾಮಯ್ಯ. ಯಡಿಯೂರಪ್ಪ ನಾಡು ಕಂಡ ಧೀಮಂತ ಹೋರಾಟಗಾರ. ಯಡಿಯೂರಪ್ಪ ಕಂಡರೆ ಸಿದ್ದರಾಮಯ್ಯ ಅವರೇ ಇನ್ನೂ ನಿಮಗೆ ಭಯನಾ ? ಅದಕ್ಕೆ ಅವರ ನಿವೃತ್ತಿ ಬಯಸುತ್ತೀದ್ದಿರಾ? ಯಡಿಯೂರಪ್ಪ ಅವರ ಮೇಲೆ ಸಿಐಡಿ ವರದಿ ಆಧಾರದ ಮೇಲೆ ಹಿಂದೆ 15 ಎಫ್ ಐಆರ್  ಮಾಡಿಸಿದ್ದರು. ಅದಕ್ಕೂ ನಾವು ಜಗ್ಗಿಲ್ಲ. ಕಳೆದ 15 ವರ್ಷಗಳಿಂದ ಯಡಿಯೂರಪ್ಪ ವಿರುದ್ದ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರು ಯಾವತ್ತಿಗೂ ಹೆದರಿಲ್ಲ. ಸಿದ್ದರಾಮಯ್ಯ ಅವರೇ ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಹೇಳಿಕೆ ವಾಪಾಸ್ ಪಡೆಯಿರಿ ಎಂದು ಆಗ್ರಹಿಸಿದರು.

Key words: CM Siddaramaiah, mysore, BJP, BY Vijayendra

Font Awesome Icons

Leave a Reply

Your email address will not be published. Required fields are marked *