Advances in Drug discovery: ವಿಶೇಷ ಉಪನ್ಯಾಸ ; ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಆಹ್ವಾನಿಸಿದ ಜಪಾನ್‌. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

Prof. Rangappa has been invited to give a keynote speech on the topic ” Small molecules in cancer therapy: Advances in Drug discovery” at the Laboratory of Advanced Chemical Biology, Frontier Research Centre for Advanced Material and Life Hokkaido University, Japan on 7th September 2024. Science,

ಮೈಸೂರು, ಸೆ.03,2024: (www.justkannada.in news) ವಿಶ್ರಾಂತ ಕುಲಪತಿ ಹಾಗೂ ಹೆಸರಾಂತ ರಸಾಯನಶಾಸ್ತ್ರ ವಿಜ್ಞಾನಿ ಪ್ರೊ.ಕೆ.ಎಸ್.‌ ರಂಗಪ್ಪ ಅವರನ್ನು ಜಪಾನ್‌ ದೇಶಕ್ಕೆ  ಆಹ್ವಾನಿಸಲಾಗಿದ್ದು, ಅಲ್ಲಿ ವಿವಿಧ ಯೂನಿವರ್ಸಿಟಗಳಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು.

ಸೆಪ್ಟೆಂಬರ್ 7, 2024 ರಂದು ಜಪಾನಿನ ಫ್ರಾಂಟಿಯರ್ ರಿಸರ್ಚ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಮೆಟೀರಿಯಲ್ ಮತ್ತು ಲೈಫ್ ಹೊಕ್ಕೈಡೋ ವಿಶ್ವವಿದ್ಯಾಲಯದಲ್ಲಿನ  ಅಡ್ವಾನ್ಸ್ಡ್ ಕೆಮಿಕಲ್ ಬಯಾಲಜಿ ಪ್ರಯೋಗಾಲಯದಲ್ಲಿ “ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಣ್ಣ ಅಣುಗಳು: ಡ್ರಗ್ ಅನ್ವೇಷಣೆಯಲ್ಲಿನ ಪ್ರಗತಿ” ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.

ಬಳಿಕ ಪ್ರೊ.ರಂಗಪ್ಪ ಅವರು  ಸೆಪ್ಟೆಂಬರ್ ೯ ರಂದು, ನಗೋಯಾದ ಮೆಜೊ ವಿಶ್ವವಿದ್ಯಾಲಯದ ಫಾರ್ಮಸಿ ವಿಭಾಗದ ಪ್ಯಾಥೋಬಯೋಕೆಮಿಸ್ಟ್ರಿ ವಿಭಾಗದಲ್ಲಿ ವಿಶೇಷ ಉಪನ್ಯಾಸ  ನೀಡುವರು. ಬಳಿಕ ಅವರು ವಿಶ್ವವಿದ್ಯಾಲಯದ ವಿವಿಧ ಡೀನ್‌ಗಳು, ಪ್ರಾಧ್ಯಾಪಕರು ಮತ್ತು ನಿರ್ದೇಶಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಸಮಾಲೋಚನೆಯ ಸಮಯದಲ್ಲಿ, ಹೊಕ್ಕೈಡೋ ವಿಶ್ವವಿದ್ಯಾನಿಲಯದ ರಾಯಭಾರಿಯಾಗಿ, ಪ್ರೊ.ಕೆ.ಎಸ್.ರಂಗಪ್ಪ ಅವರು ಹೊಕ್ಕೈಡೋ ವಿಶ್ವವಿದ್ಯಾಲಯ ಮತ್ತು ಭಾರತದ ವಿಶ್ವವಿದ್ಯಾಲಯಗಳು ಮತ್ತು ವಿಶೇಷವಾಗಿ ಕರ್ನಾಟಕದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ನಡುವಿನ ಸಂಶೋಧನೆಗೆ ಸಂಬಂಧಿಸಿದ ವಿವಿಧ ವೈಜ್ಞಾನಿಕ ಚರ್ಚೆಗಳನ್ನು ನಡೆಸಲಿದ್ದಾರೆ.

ಪ್ರೊ.ರಂಗಪ್ಪ ಅವರು ಇಟಲಿಯ ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ (FTWAS) ನ ವಿಶಿಷ್ಟ ಸಹೋದ್ಯೋಗಿಯಾಗಿದ್ದು (ಡಿಸ್ಟಿಂಗ್ವಿಷ್ಡ್‌ ಫೆಲೋ) , ಇದು ಮಲ್ಟಿ ಡಿಸಿಪ್ಲಿನೇರಿ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಪ್ರೇರೇಪಿಸಲಿದೆ. ಜತೆಗೆ ಪ್ರೊ.ರಂಗಪ್ಪ ಅವರು ಆಲ್ಝೈಮರ್, ಕ್ಯಾನ್ಸರ್, ಮತ್ತು ಹೃದಯರಕ್ತನಾಳದ ಕಾಯಿಲೆಗಳು ಸೇರಿದಂತೆ ಮಧುಮೇಹದಂತಹ ವಿವಿಧ ಕಾಯಿಲೆಗಳ ಕುರಿತಾದ ಔಷಧ ಅಭಿವೃದ್ಧಿ ಬಗ್ಗೆ ಚರ್ಚಿಸುವರು.

key words:  Advances in Drug discovery, Special lecture, Japan invites Prof. K.S. Rangappa

 SUMMARY: 

Prof. Rangappa has been invited to give a keynote speech on the topic ” Small molecules in cancer therapy: Advances in Drug discovery” at the Laboratory of Advanced Chemical Biology, Frontier Research Centre for Advanced Material and Life Hokkaido University, Japan on 7th September 2024. Science,

Prof.Rangappa is also delivering a special lecture at Department of Pathobiochemistry, Faculty of Pharmacy, Meijo University, Nagoya on 9th September 2024. He is going to interact with various deans, professors and directors of the University.

During the deliberations, as an Ambassador of Hokkaido University, Prof.K.S.Rangappa will have various scientific discussions including collaborations related to research between Hokkaido University and Universities in India and particularly Institutions and Universities in Karnataka.

It is also observed that Prof.Rangappa is a distinguished fellow of the The World Academy of Sciences (FTWAS), Italy. The Academy insists to motivate the international collaboration on multidisciplinary research. Prof.Rangappa involves in discussion about drug development on various diseases like Alzheimer, Cancer, and Diabetes including cardiovascular diseases.

Font Awesome Icons

Leave a Reply

Your email address will not be published. Required fields are marked *