ವಿದ್ಯಾರ್ಥಿಗಳ ಸಾಹಸ “ನೈಪುಣ್ಯ”ತೆ  ಪ್ರದರ್ಶನ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

 ಮೈಸೂರು, ಸೆ.03,204: (www.justkannada.in news) ವಿದ್ಯಾರ್ಥಿಗಳಲ್ಲಿ  ಸಾಹಸ ಪೃವೃತ್ತಿ ಮತ್ತು ನಾಯಕತ್ವದ ಗುಣವನ್ನು ಉತ್ತೇಜಿಸಲು ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಕನಕದಾಸ ನಗರ (ದಟ್ಟಗಳ್ಳಿ) ಮತ್ತು ಆರ್. ಟಿ. ನಗರ ಕ್ಯಾಂಪಸ್ ನ ವಿದ್ಯಾರ್ಥಿಗಳಿಗೆ ಸಾಹಸ ಚಟುವಟಿಕೆಗಳ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರೇವಣ ಸಿದ್ದೇಶರ ಬೆಟ್ಟದಲ್ಲಿ ಟ್ರೆಕಿಂಗ್ ಮತ್ತು ಸನಿಹದಲ್ಲಿಯೇ ಇದ್ದ ಕೆರೆಯಲ್ಲಿ ಕಯಾಕಿಂಗ್, ರಾಪ್ಟಿಂಗ್, ಜಿಪ್ ಲೈನ್ ಸೈಕ್ಲಿಂಗ್, ಜಿಪ್ ಲೈನ್ ಸೇರಿದಂತೆ ಬೆಟ್ಟ ಗುಡ್ಡವನ್ನು ಬಂಡೆಗಳ ಮುಖೇನ ಏರಿದ ಮಕ್ಕಳು ಸಾಹಸ ಸಾಮರ್ಥ್ಯ ತೋರಿದರು.

ಮಕ್ಕಳಲ್ಲಿ ಸಾಹಸ ಪ್ರವೃತಿ ಜೊತೆಗೆ ನಾಯಕತ್ವದ ಗುಣವನ್ನು ಬೆಸೆಯುವಲ್ಲಿ ಸಾಹಸ ಕ್ರೀಡಗಳು ಉತ್ತಮ ಪರಿಣಾಮ ಬೀರಲಿದ್ದು, ನೈಪುಣ್ಯ ಸಂಸ್ಥೆಯು ಪಠ್ಯೇತರ ಚಟುವಟಿಕೆಗಳಲ್ಲಿ ಇದನ್ನು ಪುಮುಖ ಭಾಗವಾಗಿ ಅಳವಡಿಸಿಕೊಂಡಿದ್ದು, 3 ತಿಂಗಳಿಗೊಮ್ಮೆ ಈ ಸಾಹಸ ಕ್ರೀಡೆಯನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಿಕೊಂಡಿದೆ.

ಸಾಹಸ ಕ್ರೀಡೆಯು ಸಾಹಸ ಚಟುವಟಿಕೆಗಳನ್ನು ಉತ್ತೇಜಿಸುವ ಜೊತೆಗೆ ಮಕ್ಕಳಲ್ಲಿ ಪರಿಸರದ ಕಾಳಜಿ ಮತ್ತು ಪರಿಸರವನ್ನು ಉಳಿಸಬೇಕಾದ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ ಎಂದು ಕಾರ್ಯಕ್ರಮದ ಸಂಯೋಜಕಿ ರುಕ್ಮಿಣಿ ಚಂದ್ರ  ಹೇಳಿದರು.

ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್ ನೊಂದಿಗೆ ಸೇರಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕ್ರೀಡಾ ಮಾರ್ಗದರ್ಶಕರಾಗಿ ನವೀನ್ ಮತ್ತು ಸೋಮಶೇಖರ್ ಅವರು ಮಕ್ಕಳಿಗೆ ಸಾಹಸ  ಚಟುವಟಿಕೆಗಳಲ್ಲಿ ತರಬೇತಿ ನೀಡಿದರು.

key words: mysore, nypunya school, students, adventure games

 

Font Awesome Icons

Leave a Reply

Your email address will not be published. Required fields are marked *