ಚಾಮರಾಜನಗರ, ಸೆಪ್ಟಂಬರ್,4,2024 (www.justkannada.in): ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ರಚನೆ ವಿಚಾರ ಸಂಬಂಧ ವಿವಾದವನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಿ ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಸುನೀಲ್ ಬೋಸ್, ನ್ಯಾಯಾಲಯದಿಂದ ತಡೆಯಾಜ್ಞೆ ತೆರವಾಗಿದ್ದರಿಂದ ಸಿಎಂ ಸಭೆ ಮಾಡಿದ್ದಾರೆ . ನ್ಯಾಯಾಲಯ ನೀಡುವ ಅಂತಿಮ ತೀರ್ಪುಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಾದ ಆಗೋದು ಇಷ್ಟ ಇಲ್ಲ. ಹಾಗೇ ನೋಡಲು ಹೋದರೆ ಮೈಸೂರಿನಲ್ಲಿರುವ ಎಲ್ಲಾ ಆಸ್ತಿ ರಾಜಮನೆತನದ್ದೆ. ಮೈಸೂರಿನ ಚಾಮುಂಡೇಶ್ವರಿ ತಾಯಿ ನಾಡಿನ ಎಲ್ಲರಿಗೂ ಸೇರಿದವಳು. ವಿವಾದವನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಿ ಎಂದರು.
Key words: Chamundeshwari Authority, dispute, MP, Sunil Bose