ಈಗ DASARA ಪ್ರಾಯೋಜಕತ್ವ ಅನ್ನೋದು ದುಡ್ಡು ಹೊಡೆಯೋ ಸ್ಕೀಂ: ಅಡಗೂರು ವಿಶ್ವನಾಥ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

The government has announced that it will release 40 crores for celebrating the Dasara festival. Meanwhile, why are they still looking for sponsors? asked Legislative Council member Adaguru H. Vishwanath.

ಮೈಸೂರು,ಸೆ.11,2024: (www.justkannada.in news):  ದಸರಾ ಮಹೋತ್ಸವದ ಆಚರಣೆಗೆಂದು ಸರಕಾರವೇ 40 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ನಡುವೆ ಮತ್ತೆ ಪ್ರಾಯೋಜಕರನ್ನು ಹುಡುಕುತ್ತಿರುವುದಾದರು ಯಾಕೆ..? ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್‌ ಪ್ರಶ್ನಿಸಿದರು.

ನಾಡ ಹಬ್ಬ ದಸರಾ ಮಹೋತ್ಸವದ ಸಿದ್ಧತೆ ಆರಂಭಗೊಂಡ ಬೆನ್ನಲ್ಲೇ, ದಸರಾಗೆ ಪ್ರಾಯೋಕರನ್ನು ಹುಡುಕುವ ಕೆಲಸ ಶುರುವಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹಾದೇವಪ್ಪ ಅವರ ನೇತೃತ್ವದಲ್ಲಿ ಇಂದು ಲಲಿತಾ ಮಹಲ್‌ ಪ್ಯಾಲೆಸ್‌ ಹೋಟೆಲ್‌ ನಲ್ಲಿ ಉದ್ಯಮಿಗಳ ಜತೆ ಸಭೆ ನಡೆಸಿ ಪ್ರಾಯೋಜಕತ್ವದ ಬಗ್ಗೆ ಚರ್ಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಸ್ಟ್‌ ಕನ್ನಡ ಜತೆ ಮಾತನಾಡಿದ ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಅಡಗೂರು ಎಚ್.ವಿಶ್ವನಾಥ್‌ ಅವರು ಹೇಳಿದಿಷ್ಟು..

ಈ ಹಿಂದೆ 2003 ರಲ್ಲಿ ರಾಜ್ಯದಲ್ಲಿ ಕಂಡು ಕೇಳರಿಯದ ಭೀಕರ ಬರಗಾಲ. ಆಗ ದುಂದು ವೆಚ್ಚ ಮಾಡಿ ದಸರಾ ಆಚರಣೆ ಮಾಡುವುದು ಬೇಡ ಎಂದು ರೈತ ಸಂಘಟನೆ ಹಾಗೂ ಕನ್ನಡ ಪರ ಹೋರಾಟಗಾರರು ಚಳವಳಿ ಆರಂಭಿಸಿದ್ದರು.  ಈ ಸಲುವಾಗಿಯೇ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ನಾನು, ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮನವೊಲಿಸಿ ದಸರಾ ಆಚರಣೆಗೆ ಮುಂದಾದೆ. ಸರಕಾರದ ನಯಾ ಪೈಸೆಯೂ ಬೇಡ. ಪ್ರಾಯೋಕರ ಸಹಕಾರದಿಂದ ನಾಡಹಬ್ಬ ಮಾಡುವುದಾಗಿ ತಿಳಿಸಿದೆ.

ಇದಕ್ಕೆ ಎಸ್. ಎಂ.ಕೃಷ್ಣ ಅವರು ಸಮ್ಮತಿಸಿದರು. ಅದರಂತೆ ಟಿವಿಎಸ್‌ ಕಂಪನಿ ಸೇರಿದಂತೆ ಪ್ರಮುಖವಾದ ಒಂದೆರೆಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಣ ಸಂಗ್ರಹಿಸಿ ದಸರಾ ಆಚರಿಸಿದೆವು. ಆದರೆ ಆನಂತರ ಪ್ರಾಯೋಜಕತ್ವ ಪಡೆಯುವುದೇ ಒಂದು ಚಾಳಿಯಾಯ್ತು.

ಇದೀಗ ರಾಜ್ಯ ಸರಕಾರವೇ ಈ ಬಾರಿ ಅದ್ದೂರಿ ದಸರಾ ಮಾಡುವುದಾಗಿ ಹೇಳಿಕೆ ನೀಡಿದ್ದು, ಇದಕ್ಕಾಗಿ 40 ಕೋಟಿ ರೂ. ಅನುದಾನವನ್ನು ಘೋಷಿಸಿದೆ. ಇಷ್ಟಾದ ಮೇಲೂ ಪ್ರಾಯೋಜಕರ ಬಳಿ ಹಣ ಕೇಳುವುದು ಎಷ್ಟರ ಮಟ್ಟಿಗೆ ಸರಿ..?

ದಸರಾ ಪ್ರಾಯೋಜಕತ್ವ : ಜಂಬೂ ಸವಾರಿ 2 ಕೋಟಿ, ಅಂಬಾರಿ 1 ಕೋಟಿ..!

ಏನ್‌ ಅಂಬಾರಿಗೆ ಬ್ಯಾನರ್‌ ಕಟ್ತಾರ..?

ಜಿಲ್ಲಾ ಉಸ್ತುವಾರಿ ಸಚಿವರ ನೇತೃವದಲ್ಲಿ ನಡೆದ ಪ್ರಾಯೋಜಕತ್ವದ ಸಭೆಯಲ್ಲಿ ಜಂಬೂವಾರಿಗೆ ಇಷ್ಟು ಕೋಟಿ, ಅಂಬಾರಿಗೆ ಇಷ್ಟು ಕೋಟಿ ಎಂದು ನಿಗಧಿ ಮಾಡಿದ್ದಾರೆ. ಜಂಬೂಸವಾರಿಯಲ್ಲೇ ತಾನೆ ಅಂಬಾರಿ ಸಾಗುವುದು..? ಅದು ಹೇಗೆ ಎರಡಕ್ಕೂ ಪ್ರತ್ಯೇಕ ಪ್ರಾಯೋಜಕತ್ವ ಪಡೆಯುತ್ತಾರೆ. ಏನು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ ಆನೆಗಳಿಗೆ ಪ್ರಚಾರದ ಬ್ಯಾನರ್‌ ಕಟ್ತಾರ..? ಎಂದು ವ್ಯಂಗ್ಯವಾಡಿದರು.

key words: sponsorship for Dasara, money-making scheme, Adaguru Vishwanath.

SUMMARY:

The government has announced that it will release 40 crores for celebrating the Dasara festival. Meanwhile, why are they still looking for sponsors? asked Legislative Council member Adaguru H. Vishwanath.

 

 

 

 

Font Awesome Icons

Leave a Reply

Your email address will not be published. Required fields are marked *