ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅದಿತಿ ರಾವ್​ ಹೈದರಿ-ಸಿದ್ದಾರ್ಥ್

ಬಾಲಿವುಡ್​ ನಟಿ ಅದಿತಿ ರಾವ್​ ಹೈದರಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ನಟ ಸಿದ್ದಾರ್ಥ್​ ಜೊತೆ ಅವರ ಮದುವೆ ನೆರವೇರಿದೆ. ಕಳೆದ ಕೆಲವು ವರ್ಷಗಳಿಂದ ಸಿದ್ದಾರ್ಥ್​ ಮತ್ತು ಅದಿತಿ ರಾವ್​ ಹೈದರಿ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರು. ಈಗ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದಿದ್ದಾರೆ.

ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರ ಮದುವೆ ವಿಷಯ ತಿಳಿದು ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ದಕ್ಷಿಣ ಭಾರತದ ಶೈಲಿಯಲ್ಲಿ ಅದಿತಿ ರಾವ್​ ಹೈದರಿ ಹಾಗೂ ಸಿದ್ದಾರ್ಥ್​ ಮದುವೆ ನಡೆದಿದೆ. ‘ನೀನೇ ನನ್ನ ಚಂದ್ರ, ನೀನೇ ನನ್ನ ಸೂರ್ಯ, ನೀನೇ ನನ್ನ ನಕ್ಷತ್ರ’ ಎಂದು ಕ್ಯಾಪ್ಷನ್​ ನೀಡುವ ಮೂಲಕ ಅದಿತಿ ರಾವ್​ ಹೈದರಿ ಅವರು ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮದುವೆಯಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿ ಆಗಿದ್ದರು.

ಇನ್ನು‌ ಈ ಜೋಡಿ ತಮ್ಮ ಪ್ರೀತಿಯ ವಿಷಯವನ್ನು ಅವರಿಬ್ಬರು ಮುಚ್ಚಿಟ್ಟಿರಲಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ತಮ್ಮಿಬ್ಬರ ಫೋಟೋಗಳನ್ನು ಅವರು ಆಗಾಗ ಶೇರ್​ ಮಾಡಿಕೊಳ್ಳುತ್ತಿದ್ದರು. 2024ರ ಆರಂಭದಲ್ಲಿ ಅವರಿಬ್ಬರು ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಈಗ ಸದ್ದಿಲ್ಲದೇ ಮದುವೆ ಆಗಿದ್ದಾರೆ.

Font Awesome Icons

Leave a Reply

Your email address will not be published. Required fields are marked *