iPhone​​ 16 ಸಿರೀಸ್​ ಬಿಡುಗಡೆ ಬಳಿಕ ನಷ್ಟಕ್ಕೆ ಜಾರಿದ ಆ್ಯಪಲ್​ ಕಂಪನಿ!

ಆ್ಯಪಲ್​ ಕಂಪನಿ ಇತ್ತೀಚೆಗೆ ಐಫೋನ್​ 16 ಸಿರೀಸ್​ ಪರಿಚಯಿಸಿದೆ. ಆದರೆ ದುಬಾರಿ ಬೆಲೆಯ ಐಫೋನ್​ ಪರಿಚಯಿಸಿದ ಬಳಿಕ ಆ್ಯಪಲ್​ ಕಂಪನಿ ಷೇರು ಮಾರುಕಟ್ಟೆಯಲ್ಲಿ ಬಹುದೊಡ್ಡ ನಷ್ಟದ ಹೊಡೆತವನ್ನು ಎದುರಿಸುತ್ತಿದೆ.

ಸೋಮವಾರದಂದು ಆ್ಯಪಲ್​ ಕಂಪನಿ USD116 ಅಂದರೆ 9,71,515 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ. 3 ಪ್ರತಿಶತದಷ್ಟು ಷೇರುಗಳನ್ನು ಕಳೆದುಕೊಂಡಿದೆ. ಐಫೋನ್​ 16 ಬೇಡಿಕೆ ತಗ್ಗಿದ ಹಿನ್ನೆಲೆ ಈ ಕುಸಿತಕ್ಕೆ ಕಾರಣವಾಗಿದೆ. ವಿಶ್ಲೇಷಕರು ಹೇಳುವಂತೆ ಐಫೋನ್​ 16ನಲ್ಲಿ ತಡವಾದ ಆರ್ಟಿಫೀಶಿಯಲ್​​ ಇಂಟೆಲಿಜೆನ್ಸ್​​ಗಳಿಂದ ಷೇರುಗಳ ಬೆಲೆಯಲ್ಲಿ ಕುಸಿತ ಕಂಡಿದೆ ಎಂದಿದ್ದಾರೆ. ಸದ್ಯ AI ಸಾಫ್ಟ್​​ವೇರ್​​ನಿಂದ ಐಫೋನ್​ 16 ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ.

ಕಳೆದ ವರ್ಷ 15 ಪ್ರೊಗೆ ಹೋಲಿಸಿದರೆ ಈ ವರ್ಷ ಐಫೋನ್​ 16 ಪ್ರೊ ಮಾದರಿ ಕಡಿಮೆ ಜಾಗತಿಕ ಶಿಪ್ಪಿಂಗ್​​​ ಹೊಂದಿದೆ. ಐಫೋನ್​​ 16 ಪ್ರೊಗೆ ಶಿಪ್ಪಿಂಗ್​ಗೆ ಬರೋಬ್ಬರಿ 14 ದಿನಗಳನ್ನು ತೆಗೆದುಕೊಂಡಿದೆ. ಕಳೆದ ವರ್ಷ ಐಫೋನ್​ 15 ಪ್ರೊ 24 ದಿನಗಳಿಗಿಂತ ಕಡಿಮೆ ಶಿಪ್ಪಿಂಗ್​ ದಿನವನ್ನು ಹೊಂದಿತ್ತು ಎಂದು ಡೇಟಾ ಹೇಳಿದೆ.

Font Awesome Icons

Leave a Reply

Your email address will not be published. Required fields are marked *