ಬೆಂಗಳೂರಿನಲ್ಲಿನ ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ವುಮೆನ್ ರಿಸೋರ್ಸ್ ವಿಭಾಗ ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಿದೆ. ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ದೇಶವ್ಯಾಪಿ ಇರುವ ಎಲ್ಲ ಬ್ರ್ಯಾಂಚ್ಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ, ಅರ್ಹರು ಇದನ್ನು ಸದುಪಯೋಗ ಮಾಡಿಕೊಳ್ಳಬಹುದು. ಕರ್ನಾಟಕದಲ್ಲಿ ಒಟ್ಟು 600 ಉದ್ಯೋಗಗಳಿದ್ದು ಅದರಲ್ಲಿ ಬೆಂಗಳೂರು ಅರ್ಬನ್ನಲ್ಲಿ 92 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆ ತಿಳಿಸಿದೆ. ಸಂಸ್ಥೆ ಹೆಸರು- ಕೆನರಾ ಬ್ಯಾಂಕ್, ಪೋಸ್ಟ್ ಹೆಸರು- ಅಪ್ರೆಂಟಿಸ್, ಒಟ್ಟು ಹುದ್ದೆಗಳು- 3,000, ವೆಬ್ಸೈಟ್- @canarabank.com. ವಯೋಮಿತಿ: 20 ರಿಂದ 28 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಸಡಿಲಿಕೆ: ಎಸ್ಎಸಿ, ಎಸ್ಟಿಗೆ 5 ವರ್ಷಗಳು ಸಡಿಲಿಕೆ, ಒಬಿಸಿ, ಜನರಲ್ 3 ವರ್ಷಗಳು ಇರುತ್ತದೆ. ವಿಶೇಷ ಚೇತನಿಗೆ 10 ವರ್ಷಗಳು ಸಡಿಲಿಕೆ. ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಆಯ್ಕೆ ಪ್ರಕ್ರಿಯೆ: ಸೆಕೆಂಡ್ ಪಿಯುಸಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧ ಪಡಿಸಲಾಗುತ್ತದೆ.
ಟೆಸ್ಟ್ ನಡೆಸಲಾಗುತ್ತದೆ, ದಾಖಲೆ ಪರಿಶೀಲನೆ, ಸಂಸ್ಥೆಯಿಂದ ಆಯ್ಕೆ ಮಾಡಲಾದ ಬ್ರ್ಯಾಂಚ್ಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಇರಲ್ಲ, ಜನರಲ್, ಒಬಿಸಿ ಸೇರಿ ಎಲ್ಲರಿಗೂ- 500 ರೂಪಾಯಿಗಳು. ಈ ಹುದ್ದೆಗೆ ಸಂಬಂಧಿಸಿದ ಪ್ರಮುಖ ತಾರೀಖು: ನೋಟಿಫಿಕೇಶನ್ ರಿಲೀಸ್- ಸೆಪ್ಟೆಂಬರ್ 18, ಆನ್ಲೈನ್ ಅರ್ಜಿ ಆರಂಭ- ಸೆಪ್ಟೆಂಬರ್ 21, ಅರ್ಜಿ ಹಾಕಲು ಅಕ್ಟೋಬರ್ 04 ಕೊನೆ ದಿನ.