ಅಯೋದ್ಯ ರಾಮ ಮಂದಿರದಲ್ಲಿ ಹೊರಗಿನಿಂದ ತಂದ ಪ್ರಸಾದ ನಿಷಿದ್ಧ

ಅಯೋಧ್ಯೆ: ತಿರುಪತಿ ಲಡ್ಡುವಿನ ಕಲಬೆರಕೆ ವಿವಾದದ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಹೊರಗಿ ನಿಂದ ಬರುವ ಪ್ರಸಾದಗಳನ್ನು ದೇವರಿಗೆ ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಇದೇ ವೇಳೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ದೇಶದೆಲ್ಲೆಡೆ ಬಿಕರಿಯಾಗುತ್ತಿರುವ ತುಪ್ಪಗಳ ಶುದ್ಧತೆಯನ್ನು ಪ್ರಶ್ನಿಸಿದ್ದಾರೆ.

ಜತೆಗೆ ದೇವಾಲಯಗಳಲ್ಲಿ ಅಲ್ಲಿನ ಅರ್ಚಕರ ಮೇಲ್ವಿಚಾರಣೆಯಲ್ಲೇ ಪ್ರಸಾದವನ್ನು ತಯಾರಿಸ ಬೇಕು ಎಂದು ಕೋರಿದ್ದಾರೆ. ಅಲ್ಲದೇ ಎಲ್ಲ ಪ್ರಮುಖ ಧಾರ್ಮಿಕ ಕೇಂದ್ರಗಳು ಹಾಗೂ ದೇವಾಲಯಗಳಲ್ಲಿ ಹೊರಗಿನಿಂದ ತಂದ ಪ್ರಸಾದಗಳನ್ನು ದೇವರಿಗೆ ಅರ್ಪಿಸಲು ಸಂಪೂರ್ಣ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. “ತಿರುಪತಿ ಪ್ರಸಾದದಲ್ಲಿ ಕೊಬ್ಬು ಬಳಕೆಯಾದ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಭಕ್ತರು ಹಾಗೂ ಧಾರ್ಮಿಕ ಮುಖಂಡರು ಇದನ್ನು ಖಂಡಿಸಿದ್ದು, ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ ಎಂದು ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *