ಜಾನಿ ಮಾಸ್ಟರ್​ ಅರೆಸ್ಟ್‌ ಬೆನ್ನಲ್ಲೇ ಕೇಸ್​ಗೆ ಹೊಸ ಟ್ವಿಸ್ಟ್​ ಕೊಟ್ಟ ಪತ್ನಿ ಸುಮಲತಾ

ಆಂಧ್ರಪ್ರದೇಶ: ತಮಿಳು, ತೆಲುಗು ಚಿತ್ರಮಂದಿರಗಳಲ್ಲಿ ತನ್ನದೇ ಹೆಸರು ಸ್ಥಾಪಿಸಿಕೊಂಡಿರುವ ಸ್ಟಾರ್​ ಡ್ಯಾನ್ಸ್ ಕೋರಿಯೋಗ್ರಾಫರ್​ ಜಾನಿ ಮಾಸ್ಟರ್  ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪವು ಇದೀಗ ಚಿತ್ರೋದ್ಯಮದಲ್ಲಿ ದೊಡ್ಡ ಸುದ್ಧಿ ಮಾಡಿದೆ. ಇದೀಗ ಈ ಮದ್ಯೆ ಪತ್ನಿ ಸುಮಲತಾ ಕೇಸ್​ಗೆ ಹೊಸ ಟ್ವಿಸ್ಟ್​  ಕೊಟ್ಟಿದ್ದಾರೆ.

ಸೆ.16ರಂದು ಶೈಖ್ ಜಾನಿ ಬಾಷಾ ಅಲಿಯಾಸ್​ ಜಾನಿ ಮಾಸ್ಟರ್​ ವಿರುದ್ಧ 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಪ್ರಕರಣ ದಾಖಲಿಸಿಕೊಂಡ ನರಸಿಂಗಿ ಪೊಲೀಸರು ಇದೀಗ ಜಾನಿಯನ್ನು ಗೋವಾದಲ್ಲಿ ಬಂಧಿಸಿ, ಹೈದರಾಬಾದ್​ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊದಲೇ ಜಾನಿ ಅರೆಸ್ಟ್​ ಆಗಿದ್ದಾರೆ ಎಂಬ ಸುದ್ದಿ ತಿಳಿದು ನೇರವಾಗಿ ಪೊಲೀಸ್ ಠಾಣೆಗೆ ಪತಿಯನ್ನು ಹುಡುಕಿಕೊಂಡು ಬಂದಿದ್ದ ಜಾನಿ ಪತ್ನಿ ಸುಮಲತಾ, ಠಾಣೆಯಲ್ಲಿ ಪೊಲೀಸರ ವಿರುದ್ಧವೇ ಗಲಾಟೆ ಮಾಡಿದ್ದರು. ಆದ್ರೆ, ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಸುಮಲತಾ, ಪತಿಯ ಕೇಸ್​ಗೆ ಹೊಸ ಟ್ವಿಸ್ಟ್​ ತಂದಿದ್ದಾರೆ.

‘ಅವಳು ನನ್ನ ಪತಿಯನ್ನು ಮನೆಗೆ ಬರಲು ಬಿಡುತ್ತಿರಲಿಲ್ಲ ಮತ್ತು ಕೇವಲ 2ರಿಂದ3 ಗಂಟೆಗಳ ಕಾಲ ಮಾತ್ರ ನನ್ನ ಮನೆಯಲ್ಲಿರುವಂತೆ ಹೇಳುತ್ತಿದ್ದಳು. ಒಮ್ಮೆ ಆಕೆಯನ್ನು ನೇರವಾಗಿ ಪ್ರಶ್ನಿಸಿದ ನನಗೆ ಆಕೆ ಕೊಟ್ಟ ಉತ್ತರ ಶೂನ್ಯ. ಯಾವುದನ್ನು ಒಪ್ಪಿಕೊಳ್ಳಲು ಅವಳು ರೆಡಿಯಿರಲ್ಲಿಲ್ಲ. ಜಾನಿ ಮಾಸ್ಟರ್​ ನನ್ನ ಸಹೋದರ, ನೀವು ನನ್ನ ಅತ್ತಿಗೆ ಎಂದು ಕರೆಯುತ್ತಿದ್ದಳು. ಶ್ರೀಮಂತ ಪುರುಷರೇ ಈಕೆಯ ಟಾರ್ಗೆಟ್​. ಪ್ರೀತಿಯ ಹೆಸರಿನಲ್ಲಿ ಬಲೆಗೆ ಬೀಳಿಸಿಕೊಂಡು, ಹೀಗೆ ಚಿತ್ರಹಿಂಸೆ ನೀಡುತ್ತಾಳೆ. ಈ ಸಮಸ್ಯೆಯ ಬಗ್ಗೆ ಚುರುಕು ತನಿಖೆ ನಡೆಸಿ, ನನಗೆ ಮತ್ತು ನನ್ನ ಮಕ್ಕಳಿಗೆ ನ್ಯಾಯ ಒದಗಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾನು ಮನವಿ ಮಾಡುತ್ತೇನೆ’ ಎಂದು ಸುಮಲತಾ ಹೇಳಿದ್ದಾರೆ,

Font Awesome Icons

Leave a Reply

Your email address will not be published. Required fields are marked *