ಕಾಸರಗೋಡಿಗೆ ತಲುಪಿದ ಅರ್ಜುನ್‌ ಪಾರ್ಥಿವ ಶರೀರಕ್ಕೆ ಅಂತಿಮ ನಮನ

ಕಾಸರಗೋಡು : ಶಿರೂರಿನಲ್ಲಿ ಭೂಕುಸಿತಕ್ಕೆ ಸಿಲುಕಿ  ನದಿಪಾಲಾಗಿ 72 ದಿನಗಳ ಬಳಿಕ ಪತ್ತೆಯಾದ ಲಾರಿ ಚಾಲಕ  ಕೋಝಿಕ್ಕೋಡ್   ಕನ್ನಾಡಿಕ್ಕಾಲ್ ನ ಪಾರ್ಥಿವ ಶರೀರ ಅಂಬ್ಯುಲೆನ್ಸ್ ಮೂಲಕ ಕಾಸರಗೋಡಿಗೆ ತಲಪಿದಾಗ  ಜಿಲ್ಲಾಡಳಿತ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ಮೊದಲಾದವರು ಪುಷ್ಪ ಚಕ್ರ ಅರ್ಪಿಸಿದರು.

ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ  ತಡರಾತ್ರಿ ಯಾದಾರೂ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಅಂಬ್ಯುಲೆನ್ಸ್ ನಲ್ಲಿದ್ದ  ಅರ್ಜುನ್ ರ ಸಹೋದರಿ ಪತಿ     ಜಿತಿನ್   ಸಹೋದರ  ಅಭಿಜಿತ್  ರವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್  ವರಿಷ್ಠಾಧಿಕಾರಿ ಸಾಂತ್ವನ ಪಡಿಸಿದರು.  ಮಂಜೇಶ್ವರ ಶಾಸಕ ಎ . ಕೆ . ಎಂ ಅಶ್ರಫ್ , ಕಾರವಾರ ಶಾಸಕ ಸತೀಶ್ ಸೈಲ್  ರವರು ಜೊತೆಗಿದ್ದಾರೆ. ಅರ್ಜುನ್  ಪ್ರತಿಬಾರಿ ಲಾರಿಕೊಂಡೊಯ್ಯುವ  ದಾರಿಯಾಗಿಯೇ ಅಂಬ್ಯುಲೆನ್ಸ್ ತೆರಳುತ್ತಿದೆ. ಬಳಿಕ   ಅಂಬ್ಯುಲೆನ್ಸ್ ಕೋಝಿಕ್ಕೋಡ್ ಗೆ ಪ್ರಯಾಣ ಬೆಳೆಸಿತು.  ಇಂದು ಬೆಳಿಗ್ಗೆ 8. 30 ರ ಸುಮಾರಿಗೆ ಅರ್ಜುನ್ ರ ಮೃತದೇಹ ಮನೆಗೆ ತಲಪಿಸಲಾಯಿತು ಶೋಧದ ಬಳಿಕ 72  ದಿನಗಳ ಬಳಿಕ ಗಂಗಾವಳಿ ನದಿಯ ಆಳಭಾಗದಲ್ಲಿ ಲಾರಿಯೊಂದರ ಒಳಗೆ ಕೊಳೆ ತ  ಸ್ಥಿತಿಯಲ್ಲಿ ಅರ್ಜುನ್‌ರ  ವರ ಮೃತದೇಹ  ಲಭಿಸಿತ್ತು .

Font Awesome Icons

Leave a Reply

Your email address will not be published. Required fields are marked *