ದಸರಾ ಮಹೋತ್ಸವ:  ಟ್ರಾಫಿಕ್ ನಿರ್ವಹಣೆಯಲ್ಲಿ ಪೊಲೀಸರು ಸಂಪೂರ್ಣ ವಿಫಲ- ಎಂ.ಲಕ್ಷ್ಮಣ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಅಕ್ಟೋಬರ್,5,2024 (www.justkannada.in): ಮೈಸೂರು ದಸರಾ ಮಹೋತ್ಸವದಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ಪೋಲಿಸ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಎಂ.ಲಕ್ಷ್ಮಣ್,  ಪೊಲೀಸರನ್ನು ಎಲ್ಲಿಂದಲೋ ಕರೆಸಿ ಟ್ರಾಫಿಕ್ ಮಾಡಲು ಬಿಟ್ಟಿದ್ದಾರೆ. ಅವರಿಗೆ ಟ್ರಾಫಿಕ್ ಕಂಟ್ರೋಲ್ ಮಾಡಲು ಆಗುತ್ತಲ್ಲ. ಎಲ್ಲಾ ಅದ್ವಾನವಾಗಿದೆ. ಟ್ರಾಫಿಕ್ ಇಂಜಿನಿಯರಿಂಗ್ ಗೊತ್ತಿಲ್ಲ, ಪೊಲೀಸರದ್ದು ಹುಚ್ಚರ ದರ್ಬಾರ್ ಆಗಿದೆ.  ಬೆಂಗಳೂರಿನ ಪೊಲೀಸ್ ರವರಿಗೆ ಟ್ರಾಫಿಕ್ ಗೊತ್ತು. ಆದರೆ ಹೊರಗಡೆಯವರಿಗೆ ಟ್ರಾಫಿಕ್ ಡ್ಯೂಟಿ ಗೊತ್ತಿಲ್ಲ. ಹೀಗಾಗಿ ಮೈಸೂರು, ಬೆಂಗಳೂರು ಪೋಲಿಸರಿಗೆ ಟ್ರಾಫಿಕ್ ನಿರ್ವಹಣೆ ಮಾಡಲು ಬಿಡಿ ಎಂದು ಆಗ್ರಹಿಸಿದ್ದಾರೆ

ನಗರದಲ್ಲಿ ಎಲ್ಲಾ ರಸ್ತೆಗಳನ್ನು ಒನ್ ವೇ ಮಾಡಿ ಪ್ರವಾಸಿಗರಿಗೆ ಕಿರಿಕಿರಿಯಾಗಿದೆ. ಅರಸು ರಸ್ತೆ ಬಂದ್ ಮಾಡಿದ್ದಾರೆ ಹಾಗಾದರೆ ಅಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡುವುದಾದರೂ ಹೇಗೆ ? ಏನಾದರೂ ಹೆಚ್ಚು‌ ಕಡಿಮೆ ಆದರೆ ಪೊಲೀಸರೇ  ಹೊಣೆಯಾಗುತ್ತಾರೆ. ಸರಿಯಾಗಿ ಟ್ರಾಫಿಕ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿ ಭೇಟಿ ಮಾಡಿ ಸಲಹೆ ಕೊಡುವ ಕೆಲಸವನ್ನು ನಾವು ಮಾಡಿತ್ತೇವೆ ಎಂದು ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

Key words: mysore Dasara, Police, failed, traffic , M. Laxman

Font Awesome Icons

Leave a Reply

Your email address will not be published. Required fields are marked *