ಇಸ್ರೇಲ್: ಹತ್ಯೆಗೀಡಾದ ನಾಯಕ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿ ಮತ್ತು ಮುಂದಿನ ಹಿಜ್ಬುಲ್ಲಾ ಮುಖ್ಯಸ್ಥ ಹಶೀಮ್ ಸಫಿಯುದ್ದೀನ್ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಬೈರುತ್ನಲ್ಲಿ ಶುಕ್ರವಾರ ನಡೆದ ವೈಮಾನಿಕ ದಾಳಿಯಲ್ಲಿ ಸಫಿಯುದ್ದೀನ್ ಸಾವನ್ನಪ್ಪಿರುವುದನ್ನು ಇಸ್ರೇಲ್ ದೃಢಪಡಿಸಿದೆ ಎಂದು ಸೌದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಶುಕ್ರವಾರದಿಂದ ಸಫಿಯುದ್ದೀನ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಮೂಲವೊಂದು ರಾಯಿಟರ್ಸ್ಗೆ ತಿಳಿಸಿದೆ. ಬೈರುತ್ನಲ್ಲಿರುವ ಹಿಜ್ಬುಲ್ಲಾದ ಗುಪ್ತಚರ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿ ಸಫಿಯುದ್ದೀನ್ ಅವರನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ಶುಕ್ರವಾರ ತಿಳಿಸಿದೆ. ಸಫಿಯುದ್ದೀನ್ ನಸ್ರಲ್ಲಾನ ಉತ್ತರಾಧಿಕಾರಿ ಎಂದು ವ್ಯಾಪಕವಾಗಿ ನಂಬಲಾಗಿತ್ತು.
ದಾಳಿ ನಡೆದಾಗ ಭೂಗತ ಸಂಕೀರ್ಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ನಾಯಕರಲ್ಲಿ ಅವರು ಒಬ್ಬರಾಗಿದ್ದರು ಎಂದು ವರದಿಯಾಗಿದೆ. ಜೆರುಸಲೇಮ್ ಪೋಸ್ಟ್ ವರದಿಯ ಪ್ರಕಾರ, ಸಭೆಯ ಭಾಗವಾಗಿದ್ದ ಯಾರಾದರೂ ಜೀವಂತವಾಗಿ ಹೊರಬರುವ ಸಾಧ್ಯತೆಯಿಲ್ಲ.ಆಕ್ಸಿಯೋಸ್ನ ವರದಿಗಾರ ಬರಾಕ್ ರಾವಿದ್, ಸಫಿಯುದ್ದೀನ್ ಅವರನ್ನು ಇಸ್ರೇಲ್ ಗುರಿಯಾಗಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.