ಮಂಗಳೂರು: ರಾತ್ರಿ ವೇಳೆ ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ಆರೋಪ ಹಿನ್ನಲೆ ಮಹಿಳೆಯರು ಸೇರಿ ಮುಸ್ಲಿಂ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಮಂಗಳೂರು ನಗರದ ಕೂಳೂರಿನಲ್ಲಿ ನಡೆದಿದೆ.
ಕೂಳೂರಿನ ಜನರಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಡರಾತ್ರಿ ಯುವತಿಗೆ ಕರೆ ಮಾಡಿ ಅಸಭ್ಯ ವರ್ತಿಸುತ್ತಿದ್ದ ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಅಂಗಡಿಗೆ ನುಗ್ಗಿ ಯುವಕನನ್ನು ಪ್ರಶ್ನಿಸಿ ಥಳಿಸಿದ್ದಾರೆ. ಇದೀಗ ಮಹಿಳೆಯರ ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.