ಮಂಗಳೂರು : ಉಳಿಯ ಪಾವೂರಿನಲ್ಲಿ ನಡೆಯುತ್ತಿದ್ದೆನ್ನಲಾದ ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಕ್ಯಾಥೊಲಿಕ್ ಸಭಾ ಅಧ್ಯಕ್ಷರಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಅಡ್ಯಾರ್ ಬಳಿ ನಡೆದಿದೆ. ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಆಲ್ವಿನ್ ಜರೋಂ ಡಿಸೋಜ ಪಾಣೇರ್ ಗೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಸದ್ಯ ಆಲ್ವಿನ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ನೇತ್ರಾವತಿ ನದಿ ತೀರದ ತುಂಬೆ, ಮಾರಿಪಳ್ಳದಲ್ಲಿ ನಡೆಯುತ್ತಿದ್ದೆನ್ನಲಾದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆ ದಾಳಿ ನಡೆಸಿ 20 ಬೋಟ್ ಗಳನ್ನು ವಶಪಡಿಸಿಕೊಂಡಿತ್ತು. ಈ ಬೋಟ್ ಗಳನ್ನು ಅಡ್ಯಾರ್ ಬಳಿ ಇಡಲಾಗಿತ್ತು. ಇನ್ನು ಬೋಟ್ ನಿಂದ ಅಕ್ರಮದಲ್ಲಿ ಪಾಲ್ಗೊಂಡಿದ್ದೆನ್ನಲಾದ ತಂಡವೊಂದು ಇಂಜಿನ್ ಗಳನ್ನು ಹೊರ ತೆಗೆಯುತಿತ್ತು ಎನ್ನಲಾಗಿದೆ. ಗಣಿ ಇಲಾಖೆ, ಮಂಗಳೂರು ಗ್ರಾಮಾಂತರ ಪೊಲೀಸರು ಸಮ್ಮುಖದಲ್ಲಿ ಯಂತ್ರಗಳನ್ನು ಸಾಗಾಣಿಕೆ ಮಾಡಲಾಗುತ್ತು ಎನ್ನಲಾಗಿದೆ. ಇನ್ನು ಇದೇ ವೇಳೆ ಘಟನಾ ಸ್ಥಳದಲ್ಲಿದ್ದ ಆಲ್ವಿನ್ ಅವರಿಗೆ ಹತ್ತರಿಂದ ಹದಿನೈದು ಮಂದಿ ತಂಡದಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ.