‘ಅನಾಥಾಶ್ರಮಗಳೊಂದಿಗೆ ನಾವು ನೀವು’ ಎಂಬ ವಿಶಿಷ್ಟ ಸೇವಾಕಾರ್ಯ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಉಡುಪಿ: ‘ಅನಾಥಾಶ್ರಮಗಳೊಂದಿಗೆ ನಾವು ನೀವು’ ಎಂಬ ಶೀರ್ಷಿಕೆ ಅಡಿಯಲ್ಲಿ ಸುಧೀರ್ ಶೆಟ್ಟಿ ಮಲ್ಯಾಡಿ, ಮಂಜು ಸೈಬ‌ರ್ ಕಟ್ಟೆ, ಗಣೇಶ ಶೆಟ್ಟಿ ಉಳ್ಳೂರು ಇವರ ನೇತೃತ್ವದ ತಂಡದ ನೆರವಿನ ಹೊರೆ ಕಾಣಿಕೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ವಿಟ್ಟಲ್ ಶೆಟ್ಟಿ ಕೊರ್ಗಿ ಅವರು ಉದ್ಘಾಟಿಸಿದರು.

ಬಳಿಕ ನಾಲ್ಕು ಆಶ್ರಮಗಳಿಗೆ ನಾಲ್ಕು ಲಕ್ಷಕ್ಕೂ ಮಿಕ್ಕಿದ ವಸ್ತುಗಳನ್ನು ದಾನಿಗಳ ಸಹಕಾರದಿಂದ ಅನಾಥಾಶ್ರಮಗಳಿಗೆ ಕೊಟ್ಟು ಬರಲಾಯಿತು.ವಿಶು ಶೆಟ್ಟಿ ಅಂಬಲಪಾಡಿ  ಮಾತನಾಡಿ, ರಾಜ್ಯದಲ್ಲೇ ಪ್ರಥಮ ಎನ್ನುವಂತೆ ನೆರವಿನ ಹೊರೆ ಕಾಣಿಕೆ ಅನಾಥಾಶ್ರಮಗಳಿಗೆ ಇವತ್ತು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಅನಾಥಾಶ್ರಮಗಳಿಗೂ ಈ ಹೊರೆ ಕಾಣಿಕೆ ಅಭಿಯಾನ ಆರಂಭಿಸುವ ಯುವಕರು ಊರು ಊರುಗಳಲ್ಲಿ ಹುಟ್ಟಿಕೊಳ್ಳಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ್ ಶೆಟ್ಟಿ ಉಳ್ಳೂರು, ಗಣೇಶ ಶೆಟ್ಟಿ ಮಲ್ಯಾಡಿ, ಪ್ರತಾಪ್ ಶೆಟ್ಟಿ ಉಳ್ಳೂರು, ದಿನೇಶ್ ಪೂಜಾರಿ ಕೆದೂರು, ನಾಗರಾಜ ಹೊಸಮಠ, ಕೃಷ್ಣಶೆಟ್ಟಿ ಶಾನಾಡಿ, ದಿನೇಶ್‌ ಶೆಟ್ಟಿ ಕೆದೂರು, ಚಂದ್ರಶೇಖ‌ರ್ ಕೊಟ್ಟಾರಿ ಊಳ್ಳೂರು, ನವೀನ್ ಚಂದ್ರ ಶೆಟ್ಟಿ ಬೇಳೂರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *