ಜಾರ್ಖಂಡ್​​​ನ ಮಾಜಿ ಸಿಎಂ ಚಂಪೈ ಸೊರೇನ್​​ ಆಸ್ಪತ್ರೆಗೆ ದಾಖಲು

ನವದೆಹಲಿ : ಜಾರ್ಖಂಡ್​​​ನ ಮಾಜಿ ಸಿಎಂ ಚಂಪೈ ಸೊರೇನ್​​ ಅವರ ಆರೋಗ್ಯದಲ್ಲಿ ಇಂದು ದಿಢೀರ್​​​​​ ಏರುಪೇರಾಗಿದ್ದು, ಅವರನ್ನು ರಾಂಚಿಯ ಜೆಮ್​​​​ಶೆಡ್​​​​ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕಡಿಮೆ ರಕ್ತದ ಒತ್ತಡದಿಂದಾಗಿ ಬಳಲಿದ ಸಂಪೈ ಅವರಿಗೆ ತಲೆ ಸುತ್ತು ಬಂದಿದ್ದು, ಈ ಕಾರಣಕ್ಕೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *