ದ್ವಿತೀಯ ಮಹಾಸಭೆ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಮಂಗಳೂರು: ಯಕ್ಷಧ್ರುವ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಯಕ್ಷಧ್ರುವ ಸೌಹಾರ್ದ ಕೋ- ಅಪರೇಟಿವ್‌ ಸೊಸೈಟಿ ಲಿ. ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಕಾವೂರಿನ ಶ್ರೀ ಹಿಲ್ಸೈಡ್ ಸಭಾಂಗಣದಲ್ಲಿ ಜರಗಿತು.ಸಂಘವು ವರ್ಷಾಂತ್ಯಕ್ಕೆ ಎ ದರ್ಜೆಯ ಸದಸ್ಯತ್ವ ಪಾಲುಬಂಡವಾಳ ರೂ 46.30 ಲಕ್ಷ, ಠೇವಣಿ ಸಂಗ್ರಹಣೆ ರೂ 4.64 ಕೋಟಿ ಹಾಗೂ ರೂ 4.56 ಕೋಟಿಯ ವಿವಿಧ ರೀತಿಯ ಸಾಲವನ್ನು ವಿತರಿಸಲಾಗಿದ್ದು, ರೂ 1.17 ಲಕ್ಷ ನಿವ್ವಳ ಲಾಭವನ್ನು ಗಳಿಸಿರುತ್ತದೆ.

ಸಂಘದ ಸದಸ್ಯರ ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿಯನ್ನು ನೀಡುವುದರೊಂದಿಗೆ ಹಿರಿಯ ನಾಗರಿಕರಿಗೆ ವಿಶೇಷ ರೀತಿಯ ಬಡ್ಡಿಯನ್ನು ನೀಡಲಾಗುತ್ತಿದೆ. ಸಂಘವು ಚಿನ್ನಾಭರಣ ಈಡಿನ ಸಾಲ, ಗೃಹ ಸಾಲ, ಅಡವು ಸಾಲ, ಜಾಮೀನು ಸಾಲ, ಭದ್ರತಾ ಸಾಲ, ಎಲ್ಲಾ ತರಹದ ವಾಹನ ಸಾಲಗಳನ್ನು ನೀಡಲಾಗುತ್ತಿದೆ. 2024-25ನೇ ಸಾಲಿಗೆ ಅಂದಾಜು ರೂ:10.00 ಕೋಟಿ ಠೇವಣಿ ಸಂಗ್ರಹಣೆ ಮತ್ತು ಸಾಲ ವಿತರಣೆ ರೂ:8.50 ಕೋಟಿ ಹಾಗೂ ನಿವ್ವಳ ಲಾಭ ರೂ:12.74 ಲಕ್ಷ ಎಂದು ಅಂದಾಜಿಸಲಾಗಿದ್ದು, ಮಂಗಳೂರು ನಗರದ ಪಂಪ್‌ವೆಲ್ ಪ್ರದೇಶದಲ್ಲಿ ನೂತನ ಶಾಖೆಯು ಶೀಘ್ರದಲ್ಲೇ ಕಾರ್ಯಾರಂಭ ಆಗಲಿದೆ ಎಂದು ಅಧ್ಯಕ್ಷರಾದ ಪಟ್ಟ ಸತೀಶ್ ಶೆಟ್ಟಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಸೊಸೈಟಿಯ ನಿರ್ದೇಶಕರೂ ಆಗಿರುವ ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ  ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಗಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಕೆಲಸವನ್ನು ಮಾಡಿರುವುದಲ್ಲದೇ ಇತ್ತೀಚೆಗೆ ಅಮೇರಿಕಾ ಪ್ರವಾಸ ಸಂದರ್ಭದಲ್ಲಿ ಎರಡು ರಾಜ್ಯಗಳ | ಮೇಯರ್‌ರವರು ಯಕ್ಷಧ್ರುವ ದಿನವನ್ನು ಆಚರಿಸುವ ಘೋಷಣೆಯನ್ನು ಮಾಡಿರುವುದು ನಮ್ಮ ತುಳುನಾಡಿನ ಯಕ್ಷಗಾನಕ್ಕೆ ಸಂದ ಗೌರವ ಹಾಗೂ ಸಹಕಾರ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಸಮಾಜಕ್ಕೆ ಸಹಕರಿಸುವುದು ಶ್ಲಾಘನೀಯ ಕೆಲಸವೆಂದು ಪರಿಗಣಿಸಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿದರು. ಸೊಸೈಟಿಯ ನಿರ್ದೇಶಕರಾದ ಸವಣೂರು ಸೀತಾರಾಮ ರೈ ಯವರು ಸ್ವಾಗತಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತನುಜಾ ಜೆ ಅಡ್ಯಂತಾಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿದರು. ನಿರ್ದೇಶಕರಾದ  ನಿಟ್ಟೆಗುತ್ತು ರವಿರಾಜ ಶೆಟ್ಟಿ, ಸುಧಾಕರ ಎಸ್ ಪೂಂಜ, ಸಂತೋಷ್ ಕುಮಾರ್ ಶೆಟ್ಟಿ,  ಲೋಕೇಶ ಪೂಜಾರಿ ಭರಣಿ,  ರವಿಚಂದ್ರ ಶೆಟ್ಟಿ,  ಆರತಿ ಆಳ್ವ,  ನಾಗವೇಣಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ  ಅಡ್ಯಾರ್ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ  ಗಿರೀಶ್ ಎಂ ಶೆಟ್ಟಿ ಕಟೀಲು ಧನ್ಯವಾದ ಸಲ್ಲಿಸಿದರು.

Font Awesome Icons

Leave a Reply

Your email address will not be published. Required fields are marked *