ಸೂರ್ಯಕಾಂತಿ ಹೂವುಗಳಿಗೆ ಮೊದಲು ಗೊತ್ತಾಗಿದ್ದು : 16  ನಿಮಿಷ ಆದರೆ 16 ಯುಗವಾದರೂ ಸತ್ಯ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

ಮೈಸೂರು, ಅ.08,2024: (www.justkannada.in news) ಮುದುಕಿ ಕೋಳಿ  ಎತ್ತಿಕೊಂಡು ಯಾರಿಗೂ ಗೊತ್ತಾಗದಂತೆ ಹೊರಟು ಹೋಗಿದ್ದಾಳೆ. ಮುಂಜಾನೆ ಕೋಳಿ ಕೂಗಲಿಲ್ಲ. ಸೂರ್ಯ ಮೂಡಲಿಲ್ಲ. ಊರಿನವರು ಗಾಬರಿಯಾದರು. ಎಲ್ಲರೂ  ಮುದುಕಿಯ ಮಗನ ಬಳಿಗೆ ಬಂದು ಬೈಯುವವರೆ. ಮಗನೋ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ,ನಡೆಯುವುದನ್ನು ಯಾರು ತಪ್ಪಿಸಲು ಆಗುವುದಿಲ್ಲ ಎನ್ನುತ್ತಾ ತನ್ನ ಪಾಡಿಗೆ ತಾನು ‘ ಹಲಸಿನ ಹಣ್ಣು’ ತೊಳೆ ಬಿಡಿಸುತ್ತಾ ಕುಳಿತ್ತಿದ್ದಾನೆ.

ಹಗಲು ಮುಂದಕ್ಕೆ ಹೋಗುತ್ತಿದೆ. ಜನರು ಕಾರ್ಣಿಕ ಕೇಳಿದ್ದೂ ಆಯಿತು.ಗೊರವಪ್ಪ ಭವಿಷ್ಯ ಹೇಳಿದ್ದೂ ಆಯಿತು. ಮುದುಕಿಯನ್ನು ಹುಡುಕುವ ತೀರ್ಮಾನ ವಾಯಿತು. ಇತ್ತ ಮಗ ತಮ್ಮವ್ವನನ್ನು ಅಶ್ಲೀಲ ಪದಗಳಲ್ಲಿ ಬೈಯತ್ತಾ ಹುಡುಕಾಟಕ್ಕೆ ಹೊರಡುತ್ತಾನೆ. ಅವನಿಗೆ ಜೊತೆಯಾಗಿ ಅವನ ಮಗನು ಹೋಗುತ್ತಾನೆ.

ಆದರೆ ಕೋಳಿ ಎತ್ತಿಕೊಂಡು ಹೋದ ಮುದುಕಿಯ ನೋವೇ ಬೇರೆ.ಅದೂ ಯಾರಿಗೂ ಅರ್ಥವಾಗದ, ಪಾತಾಳ ಗರಡಿಗೂ ಸಿಲುಕದ, ಮಗನ ಶ್ರೇಯಸ್ಸನ್ನೇ ಬಯಸುವ ತುಂಬಿದ ಕೊಡ.

ಮುದುಕಿ ಏಕೆ ಕೋಳಿ ಎತ್ತಿಕೊಂಡು ಹೋದಳು ಎನ್ನುವ ವಿಚಾರವನ್ನು ಹೇಳಿಬಿಟ್ಟರೆ  ಸ್ವಾರಸ್ಯ ಹಾಗೂ  ತಾಯಿ ಎಂಬೋ ಶಕ್ತಿಯ ಅಗಾಧತೆಯನ್ನು ಮನದಲ್ಲಿ ಅನುಭೂತಿಸಲು ಆಗುವುದಿಲ್ಲ. ಅದು ‘ ಸೂರ್ಯಕಾಂತಿ ಹೂವುಗಳಿಗೆ ಮೊದಲು ಗೊತ್ತಾಗಿದ್ದು’ ಎಂಬ 16 ನಿಮಿಷದ ಕಿರುಚಿತ್ರವನ್ನು ನೋಡಬೇಕು. ಅನುಭವಿಸಬೇಕು.

ಕೇನ್ಸ್‌  ಚಿತ್ರೋತ್ಸವದಲ್ಲಿ ಚಿನ್ನದ ಪದಕ ಗೆದ್ದಿರುವ ನಮ್ಮ ಕನ್ನಡದ ಈ ಕಿರುಚಿತ್ರ ಮೇನ್ ಸ್ಟ್ರೀಮ್ ಸಿನಿಮಾಕ್ಕೆ ಬೇಕಾದಂತಹ ಕಥೆಯನ್ನೇ ಹೊಂದಿದೆ. ಪೂನಾ ಫಿಲ್ಮ್ ಇನಸ್ಟಿಟ್ಯೂಟ್ ನಲ್ಲಿ ಕಲಿತು ಚಿತ್ರ ನಿರ್ದೇಶನ ಮಾಡಿರುವವರು ಮೈಸೂರಿನ ಹುಡುಗ ಚಿದಾನಂದ ನಾಯಕ್. ಕಿರುಚಿತ್ರ ಕೆಲ ನಿಮಿಷವಾದರೂ ಅದರಲ್ಲಿನ ಸಂದೇಶ, ಸತ್ಯ ಮಾತ್ರ 16 ಯುಗವಾದರೂ ಬದಲಾಗದು. ತಾಯಿಯ ಆಂತರ್ಯದ ಭಾವನೆ, ನೋವು ಆಕೆಯನ್ನು ಸೃಷ್ಟಿಸಿದ ಬ್ರಹ್ಮನಿಗೂ ಅಲ್ಲದೇ ಅವರಪ್ಪ ನಾರಾಯಣ ನಿಗೂ ತಿಳಿಯುವುದಿಲ್ಲ ಎನ್ನುವುದನ್ನು ನೀಟಾಗಿ ಚಿತ್ರ ಹೇಳುತ್ತದೆ.

– ವಿ.ಡಿ.ಆರ್.ಪಟೇಲ್

key words: sunflowers were the first ones to know, Mysore, Dasara

Font Awesome Icons

Leave a Reply

Your email address will not be published. Required fields are marked *