ಆರೋಪಿಗಳಿಗೆ ನ್ಯಾಯಾಂಗ ಬಂಧನ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಮಂಗಳೂರು:   ದಿನಾಂಕ 05-10-2024 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಬ್ರಿಡ್ಜ್ ಬಳಿ ಕ್ಯಾಥೋಲಿಕ ಸಭಾಭವನ ವತಿಯಿಂದ ನಡೆಸುತ್ತಿದ್ದ ಪ್ರತಿಭಟನೆ ಸಮಯ ಆಲ್ವಿನ್ ಜೆರೋಮ್ ಡಿಸೋಜಾ ಎಂಬವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊ.ನಂ.79/2024 ಕಲಂ: 352, 115(2), 351(2), 109 ಜೊತೆಗೆ 3(5) ಬಿ.ಎನ್.ಎಸ್ (ಕಲಂ 504,323,307,506 ಜೊತೆಗೆ 34 ಐ.ಪಿ.ಸಿ ) ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಘನ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಆರೋಪಿತರ ವಿವರಗಳು
1. ಮೊಹಮ್ಮದ್ ಅತಾವುಲ್ಲಾ, ಪ್ರಾಯ 40 ವರ್ಷ, ತಂದೆ ದಿ|| ಇದಿನಬ್ಬ, ವಾಸ 4-21/35, ಕೊಡಿಮಜಲು ಹೌಸ್, ಪುದು ಗ್ರಾಮ, ಫರಂಗಿಪೇಟೆ, ಬಂಟ್ವಾಳ ತಾಲೂಕು (ದಿನಾಂಕ 07-10-2024 ರಂದು ದಸ್ತಗಿರಿ)
2. ತೌಸೀರ್ @ ಪತ್ತೊಂಜಿ ತೌಚಿ ಪ್ರಾಯ 31 ವರ್ಷ ತಂದೆ-ಬಾವಾ ವಾಸ-ಪ್ಲಾಟ್ ನಂಬ್ರ 101, ಪಸ್ಟ್ ಪ್ಲೋರ್, ಶಮಾ ಅಪಾರ್ಟ್ಮೆಂಟ್, ಕುಡ್ಪಾಡಿ ರಸ್ತೆ, ಮಾರ್ನಾಮಿಕಟ್ಟೆ, ಮಂಗಳೂರು. ಆದಾರ್ ಕಾರ್ಡ್ ವಿಳಾಸ: ಬಜಾಲ್ ಪಡ್ಪು, ಬದ್ರಿಯಾ ಜುಮ್ಮಾ ಮಸೀದಿ ಜಲ್ಲಿಗುಡ್ಡೆ ಅಂಚೆ, ಬಜಾಲ್ ಗ್ರಾಮ, ಮಂಗಳೂರು. ಪ್ರಸ್ತುತ ವಿಳಾಸ; ಕುಂಜತ್ಕಲ್ ಹೌಸ್, ಭಾರತ್ ಪೆಟ್ರೋಲ್ ಪಂಪ್ ಬಳಿ, ಪರಂಗಿಪೇಟೆ, ಬಂಟ್ವಾಳ ತಾಲೂಕು, ದ.ಕ ಜಿಲ್ಲೆ (ದಿನಾಂಕ 08-10-2024 ರಂದು ದಸ್ತಗಿರಿ)

ದಸ್ತಗಿರಿ ಮಾಡಲಾದ ಆರೋಪಿತರ ಪೈಕಿ ಮಹಮದ್ ಅತಾವುಲ್ಲಾ ಎಂಬಾತನು ಘಟನಾ ಸಮಯದಲ್ಲಿ ಫಿರ್ಯಾಧಿದಾರರಿಗೆ ಅವಾಚ್ಯವಾಗಿ ಬೈದು ಹಲ್ಲೆಗೆ ಪ್ರಚೋದನೆ ನೀಡಿದ್ದು ಹಾಗೂ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ ಪ್ರಮುಖ ಆರೋಪಿ ತೌಸಿರ್ ಯಾನೆ ಪತ್ತೊಂಜಿ ತೌಸಿರ್ ನ್ನು ದಸ್ತಗಿರಿ ಮಾಡಲಾಗಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿರುತ್ತದೆ.

Font Awesome Icons

Leave a Reply

Your email address will not be published. Required fields are marked *