65ನೇ ವಯಸ್ಸಿನಲ್ಲಿ ಮತ್ತೊಮ್ಮೆ ಮದುವೆಯಾದ ಬಾಲಿವುಡ್​ನ ಹಿರಿಯ ನಟ ಸಂಜಯ್​ ದತ್ತ

ಬಾಲಿವುಡ್​ನ ಹಿರಿಯ ನಟ ಸಂಜಯ್​ ದತ್ತ ನಾಲ್ಕನೇ ಬಾರಿ ಮದುವೆಯಾಗುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಸದ್ಯ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಬಿಟೌನ್ ಅಂಗಳದಲ್ಲಿ ಮುನ್ನಾಭಾಯ್, ಆಕಾ, ಸಂಜುಬಾಬಾ ಅಂತಲೇ ಕರಿಸಿಕೊಳ್ಳುವ ಸಂಜಯ್​ ದತ್ತ ಮತ್ತೊಮ್ಮೆ ಮದುವೆಯಾಗಿರುವ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದ್ರೆ ಸಂಜಯ್​ ದತ್ತ​ರನ್ನು ಮದುವೆಯಾದ ವಧು ಯಾರು ಅಂತ ನೋಡಿದ್ರೆ, ಅದು ಮತ್ಯಾರು ಅಲ್ಲ ಈಗಾಗಲೇ ಸಂಜುಬಾಬಾನ ಮೂರನೇ ಹೆಂಡತಿಯಾಗಿ ಕೈಹಿಡಿದಿರುವ ಮಾನ್ಯತಾ ದತ್ತ.

ಸದ್ಯ ಸಂಜಯ್ ದತ್ತ ಹಾಗೂ ಮಾನ್ಯತಾ ದತ್ತ ಹವನ ಕುಂಡದ ಸುತ್ತ ಏಳು ಹೆಜ್ಜೆಯನ್ನಿಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ. ಏನಿದು ವಿಚಾರ ಅಂತ ನೋಡಿದಾಗ ಇತ್ತೀಚೆಗೆ ಸಂಜಯ್ ದತ್ತ ತಮ್ಮ ಮನೆಯನ್ನು ನವೀಕರಣಗೋಳಿಸಿದ್ದಾರೆ. ಹೀಗಾಗಿ ಮನೆಯಲ್ಲೊಂದು ಪೂಜೆಯನ್ನಿಟ್ಟುಕೊಂಡಿದ್ದಾರೆ. ಇದೇ ವೇಳೆ ಸಂಜಯ್ ದತ್ತ ಹಾಗೂ ಮಾನ್ಯತಾ ಮದುವೆಯಾಗಿ 16 ವರ್ಷಗಳು ಕೂಡ ತುಂಬಿದ್ದರಿಂದ ಈ ಜೋಡಿ ಮತ್ತೊಮ್ಮೆ ಮದುವೆಯಾಗಿದೆ. ಮದುವೆಯಲ್ಲಿ ನಡೆಯುವ ಸಾಂಪ್ರದಾಯದಂತೆ ಇಬ್ಬರು ಹೋಮ ಕುಂಡದ ಸುತ್ತ ಏಳು ಹೆಜ್ಜೆಯನ್ನಿಟ್ಟಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *