ಪ್ರಿಯಕರನಿಗಾಗಿ ಹೆತ್ತ ಮಕ್ಕಳ ಜೀವ ತೆಗೆದ ಪಾಪಿ ತಾಯಿ

ರಾಮನಗರ : ಬೆಂಗಳೂರಿನಲ್ಲಿ ವಾಸವಿದ್ದ ಗಂಡನನ್ನು ಬಿಟ್ಟು ಎರಡು ಮಕ್ಕಳೊಂದಿಗೆ ಪ್ರಿಯಕರನೊಂದಿಗೆ ಓಡಿ ಹೋಗಿ ರಾಮನಗರದಲ್ಲಿ ವಾಸವಾಗಿದ್ದ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಈ ಮಕ್ಕಳು ಅಡ್ಡಿಯಾಗುತ್ತವೆ ಎಂದು ತಲೆದಿಂಬಿನಿಂದ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಹೆತ್ತ ತಾಯಿಯೇ ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿಕೊಂಡು ತನ್ನ ಹೊಟ್ಟೆಯಲ್ಲಿಯೇ ಹುಟ್ಟಿದ ಇಬ್ಬರು ಪುಟ್ಟ ಕಂದಮ್ಮಗಳನ್ನು ಸಾಯಿಸಿದ್ದಾಳೆ. ಈ ಮಕ್ಕಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ, ಎಂದು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾಳೆ. ಹೀಗೆ ಕೊಲೆ ಮಾಡಿದ ಮಹಿಳೆಯ ಹೆಸರು ಸ್ವೀಟಿ (24). ತಾಯಿಯಿಂದಲೇ ಕೊಲೆಯಾದ ಮಕ್ಕಳು ಕಬೀಲಾ (2) ಹಾಗೂ ಕಬೀಲನ್ (11) ಆಗಿದ್ದಾರೆ.

ಅದೇ ತಂದೆ ತಾಯಿ ಬಂದು ಮಕ್ಕಳನ್ನು ದಫನ್ ಮಾಡಿದ್ದ ಬಗ್ಗೆ ಸ್ಮಶಾನದ ಸಿಬ್ಬಂದಿಗೆ ಅನುಮಾನ ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಮಶಾನದ ಕಾವಲುಗಾರನ ದೂರನ್ನು ಆಧರಿಸಿ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮಕ್ಕಳನ್ನು ದಫನ್ ಮಾಡಿಹೋದ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ನಂತರ, ಮಕ್ಕಳ ಸಾವಿನ ಬಗ್ಗೆ ವಿಚಾರಣೆ ಮಾಡಿದಾಗ, ಅನಾರೋಗ್ಯದಿಂದ ಸಾವು ಎಂದು ಹೇಳಿದ್ದಾರೆ. ಪೊಲೀಸರ ಸ್ಟೈಲ್‌ನಲ್ಲಿ ವಿಚಾರಣೆ ಮಾಡಿದಾಗ ಸತ್ಯವನ್ನು ಒಪ್ಪಿಕೊಂಡು ತಾನೇ ತನ್ನಿಬ್ಬರು ಮಕ್ಕಳನ್ನು ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ.

Font Awesome Icons

Leave a Reply

Your email address will not be published. Required fields are marked *