ಆರೋಪಿ ಪೊಲೀಸರ ವಶಕ್ಕೆ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಕ್ಯಾಲಿಫೋರ್ನಿಯಾ:  ಕೋಚೆಲ್ಲಾ ವ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ರ್ಯಾಲಿಯಲ್ಲಿ ಕೈಬಂದೂಕು, ಶಾಟ್‌ಗನ್ ಮತ್ತು ಮ್ಯಾಗಜೀನ್ ಹೊಂದಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಲಾಸ್ ವೇಗಸ್ ನ ವಿಮ್ ವಿಲ್ಲರ್ (49) ಎಂದು ಗುರುತಿಸಲಾಗಿದೆ.

ರ್ಯಾಲಿಯ ಪ್ರವೇಶದ್ವಾರದಿಂದ ಇನ್ನೂರು ಮೀಟರ್ ದೂರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಿವರ್‌ಸೈಡ್ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ. ವರದಿಯ ಪ್ರಕಾರ, ಅಮೆರಿಕದ ಮಾಜಿ ಅಧ್ಯಕ್ಷರ ವಿರುದ್ಧ ಇದು ಮೂರನೇ ಹತ್ಯೆ ಯತ್ನವಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದು, ಬಹುಶಃ ನಾವು ಮತ್ತೊಂದು ಹತ್ಯೆಯನ್ನು ನಿಲ್ಲಿಸಿದ್ದೇವೆ ಎಂದು ರಿವರ್‌ಸೈಡ್ ಕೌಂಟಿ ಶೆರಿಫ್ ವರದಿ ಮಾಡಿದೆ.

ಆರೋಪಿಯನ್ನು ರ್ಯಾಲಿಯ ಪ್ರವೇಶದ್ವಾರದ ಬಳಿ ನಿಲ್ಲಿಸಿದಾಗ ಆತ ನಕಲಿ ಪ್ರೆಸ್ ಹಾಗೂ ವಿಐಪಿ ಪಾಸ್ ಗಳನ್ನು ತೋರಿಸಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಚೆಕ್ ಮಾಡಿದಾಗ ಲೋಡೆಡ್ ಬಂದೂಕು ಇರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ಬಂಧಿಸಲಾಗಿತ್ತು. ಇದೀಗ ಶನಿವಾರ ವಿಮ್ ವಿಲ್ಲರ್ ಐದು ಸಾವಿರ ಡಾಲರ್ ಹಣ ಹಾಗೂ ಷರತ್ತುಬದ್ದ ಜಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಿದ್ದು, ಜನವರಿ 2 2025 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದೆ.

Font Awesome Icons

Leave a Reply

Your email address will not be published. Required fields are marked *