ಬದುಕು ನುಂಗಿದ ದುರಂತ: ಮಕ್ಕಳಿಬ್ಬರನ್ನು ಕಳೆದುಕೊಂಡ ಮಹಿಳೆ ಆಕ್ರಂಧನ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

courtesy: TOI


ಬೆಂಗಳೂರು, ಅ.23,2024: (www.justkannada.in news) ನನಗಿದ್ದ ಒಂದೇ ಕುಟುಂಬ ಅವರೇ, ಈಗ ಅವರೂ ಇಲ್ಲವಾಗಿದ್ದಾರೆ. ಎರಡು ವರ್ಷಗಳ ಹಿಂದೆ, ನನ್ನ ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದರು, ಮತ್ತು ಈಗ ನನ್ನ ಇಬ್ಬರು ಮಕ್ಕಳೂ ಇಲ್ಲ. ನನಗೆ ಬದುಕಲು ಮನಸ್ಸಿಲ್ಲ,’’ ಎಂದು ಕೆಂಗೇರಿ ಕೆರೆಯ ದಡದಲ್ಲಿ ಕುಳಿತಿದ್ದ ಬಿಬಿಎಂಪಿ ತ್ಯಾಜ್ಯ ವಿಂಗಡಣೆ ಕಾರ್ಯಕರ್ತೆ ನಾಗಮ್ಮ ಅಳಲು ತೋಡಿಕೊಂಡರು.

ಹಿಂದಿನ ದಿನ ಸಂಜೆ ನೀರಿಗೆ ಜಾರಿ ನಾಗಮ್ಮ ಅವರ ಮಕ್ಕಳಿಬ್ಬರು ಮುಳುಗಿ ಮೃತಪಟ್ಟಿದ್ದರು. ಮಹಾಲಕ್ಷ್ಮಿ (11) ಮತ್ತು ಜಾನ್ ಶ್ರೀನಿವಾಸ್ (13) ಮೃತದೇಹಗಳನ್ನು ಮಧ್ಯಾಹ್ನದ ವೇಳೆಗೆ ಹೊರ ತೆಗೆಯಲಾಯಿತು. ಮಕ್ಕಳು ಮತ್ತು ಅವರ ತಾಯಿ ಕೆರೆಯಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ವಾಸಿಸುತ್ತಿದ್ದರು.

ಸೋಮವಾರ ಮನೆಯ ಹೊರಗೆ ಆಟವಾಡುತ್ತಿದ್ದ ಮಹಾಲಕ್ಷ್ಮಿ ಕೈ ತೊಳೆಯಲು ಕೆರೆಗೆ ಹೋಗಿ ಜಾರಿ ನೀರಿಗೆ ಬಿದ್ದಳು. ಸಹಾಯಕ್ಕಾಗಿ ಕೂಗಿದಾಗ, ಸಹೋದರ ಜಾನ್ ಧಾವಿಸಿದ. ದುರಂತವೆಂದರೆ ಇಬ್ಬರೂ ನೀರಿನಲ್ಲಿ ಮುಳುಗಿದರು.

ಎರಡು ವರ್ಷಗಳ ಹಿಂದೆ ತಮಿಳುನಾಡಿನಿಂದ ಸ್ಥಳಾಂತರಗೊಂಡ ನಾಗಮ್ಮ, ತಮ್ಮ ತಾಯಿ ತ್ಯಾಜ್ಯ ವಿಂಗಡಣೆ ಮಾಡುವವಳು ಎಂದು ಅಣಕಿಸಿದ್ದರಿಂದ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದರು ಎಂದು ಪತ್ರಿಕೆಗೆ ತಿಳಿಸಿದರು.

ಘಟನೆ ನಡೆದ ತಕ್ಷಣ ಮಕ್ಕಳಿಗಾಗಿ ಹುಡುಕಾಟ ಆರಂಭವಾಯಿತು. ಅಗ್ನಿಶಾಮಕ ಸೇವೆಗಳು, ಸಿವಿಲ್ ಡಿಫೆನ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿದವು, ಆದರೆ ಮೃತದೇಹಗಳನ್ನು ಪತ್ತೆ ಹಚ್ಚುವ ಪ್ರಯತ್ನಗಳು ಕತ್ತಲೆ ಮತ್ತು ಭಾರೀ ಮಳೆಯಿಂದ ಅಡ್ಡಿಯಾಯಿತು, ಕಾರ್ಯಾಚರಣೆಯನ್ನು ವಿರಾಮಗೊಳಿಸಲಾಯಿತು. ಮಂಗಳವಾರ ಮುಂಜಾನೆ 5.30ಕ್ಕೆ ಮತ್ತೆ ಶೋಧ ಕಾರ್ಯ ಆರಂಭಗೊಂಡಿದ್ದು, ಮಧ್ಯಾಹ್ನ 12:55ರ ಸುಮಾರಿಗೆ ಬಾಲಕನ ಮೃತದೇಹ ಪತ್ತೆಯಾಗಿದೆ.

ಮಾಹಿತಿ: TOI

key words: Bangalore tragedy, brother-sister dead, kengeri lake

Font Awesome Icons

Leave a Reply

Your email address will not be published. Required fields are marked *