ಮೈತ್ರಿ ಅಭ್ಯರ್ಥಿ ಕರೆದೊಯ್ದಿದ್ದಾರೆ ಎಂದ ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ ಪರಮೇಶ್ವರ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಬೆಂಗಳೂರು,ಅಕ್ಟೋಬರ್,24,2024 (www.justkannada.in): ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿಪಿ ಯೋಗೇಶ್ವರ್ ಇದೀಗ ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನ ಕರೆದೊಯ್ದಿದೆ ಎಂದು ಹೇಳಿದ್ದ ಬಿಜೆಪಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿಪಿ ಯೋಗೇಶ್ವರ್  ಬಿಜೆಪಿ ಅಭ್ಯರ್ಥಿ ಯಾವಾಗ ಆಗಿದ್ದರು ಗೊತ್ತಿಲ್ಲ. ಮೊದಲು ಸಿಪಿ ಯೋಗೇಶ್ವರ್ ಕಾಂಗ್ರೆಸ್ ನಲ್ಲೇ ಇದ್ದರು. ಯೋಗೇಶ್ವರ್ ಕಾಂಗ್ರೆಸ್  ನಲ್ಲಿದ್ದಿದ್ದು ಬಿಜೆಪಿ ಮರೆತಿದ್ದಾರೆ  ಯೋಗೇಶ್ವರ್ ತಾತ್ಕಾಲಿಕವಗಿ ಬಿಜೆಪಿಗೆ ಹೋಗಿದ್ದರು.  ಈಗ ವಾಪಸ್ ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಹೇಳಿದರು.

ಸಿಪಿ ಯೋಗೇಶ್ವರ್ ವಿರುದ್ದ ಡಿಕೆ ಬ್ರದರ್ಸ್ ಮಾಡುತ್ತಿದ್ದ ಆರೋಪ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ.  ಯಾರೂ ಮಿತ್ರರಲ್ಲ. ಹೀಗಾಗಿ ಇತ್ತೀಚೆಗೆ ರಾಜಕೀಯದಲ್ಲಿ ನೋಡಿದ್ದೇವೆ.  ಹರಿಯಾಣ ಮಹಾರಾಷ್ಟ್ರದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ .  ಕಾನೂನಿನಲ್ಲಿ ಪಕ್ಷಾಂತರ ನೀಷೇಧ ಮಾಡಿದ್ರೆ ಇಂತಹವೆಲ್ಲಾ ನಿಂತು ಹೋಗುತ್ತೆ. ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕೆ ಬದ್ದರಾಗಿರುತ್ತೇವೆ ಎನ್ನೋದು ಕಷ್ಟ ಎಂದರು.

ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿಪಿವೈ ಸೇರ್ಪಡೆಯಿಂದ ಚನ್ನಪಟ್ಟಣದಲ್ಲಿ ಪಕ್ಷಕ್ಕೆ ದೊಟ್ಟ ಶಕ್ತಿ ಬಂದಿದೆ. ಅವರು ನಮ್ಮ ಪಕ್ಷಕ್ಕೆ ಬಂದಿರೋದು ಒಳ್ಳೆಯದು. ಪಕ್ಷದ ಹಿತದೃಷ್ಠಿಯಿಂದ ಸಿಪಿವೈ ಕರೆತಂದಿದ್ದಾರೆ.  ಆ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

Key words: Minister, Parameshwar, BJP, alliance candidate






Previous articleಬ್ಯಾಂಕ್‌ ವ್ಯವಹಾರಗಳಲ್ಲಿ ಕನ್ನಡಕ್ಕೆ ಆಧ್ಯತೆ ನೀಡಿ : ಕನ್ನಡಪರ ಸಂಘಟನೆಗಳ ಆಗ್ರಹ


Font Awesome Icons

Leave a Reply

Your email address will not be published. Required fields are marked *