51ನೇ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನಕ್ಕೆ ರಾಮದೇವ್ ಮಹಾರಾಜ್ ಚಾಲನೆ

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ 51ನೇ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ ನಡೆಯುತ್ತಿದೆ. ಪತಂಜಲಿ ಯೋಗ ಪೀಠದ ಯೋಗ ಗುರು ಸ್ವಾಮಿ ರಾಮದೇವ್ ಮಹಾರಾಜ್ ಮೂರು ದಿನಗಳ ಈ ಸಮ್ಮೇಳನ ಉದ್ಘಾಟನೆ ಮಾಡಿದರು. ದೇಶ ವಿದೇಶಗಳ ನೂರಾರು ವಿದ್ವಾಂಸರು ಈ ಸಮಾವೇಶದಲ್ಲಿ ಭಾಗಿಯಾದರು.

ವಾಯ್ಸ್-ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ, ನವ ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ ಆಯೋಜನೆ ಮಾಡಿರುವ 51ನೇ ಐತಿಹಾಸಿಕ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ ಶುಭಾರಂಭಗೊಂಡಿದೆ. ಯೋಗ,ಆಯುರ್ವೇದ, ವೈಷ್ಣವ ಭಕ್ತಿ, ಭಗವದ್ಗೀತೆ, ಇರಾನಿಯನ್ ಪರ್ಶಿಯನ್ ಸಹಿತ 23 ವಿಷಯಗಳ ಬಗ್ಗೆ ವಿವಿಧ ಗೋಷ್ಠಿಗಳು ಆಯೋಜನೆಯಾಗಿದೆ.

2 (1)

118 ದೇಶಗಳ 1,500ಕ್ಕೂ ಹೆಚ್ಚು ವಿದ್ವಾಂಸರ ಸಮಾಗಮಗೊಂಡಿದ್ದಾರೆ. ಈ ಐತಿಹಾಸಿಕ ಸಮ್ಮೇಳನವನ್ನು ಯೋಗ ಗುರು ಸ್ವಾಮಿ ರಾಮದೇವ್ ಮಹಾರಾಜ್ ಉದ್ಘಾಟಿಸಿದರು, ಬಳಿಕ ಮಾತನಾಡಿದ ಅವರು, ಆಕ್ಸ್ಫರ್ಡ್, ಹಾರ್ವರ್ಡ್ ವಿಶ್ವವಿದ್ಯಾಲಯಗಳ ಕಾಲ ಮುಗಿಯಿತು, ಮುಂದಿನ ಶತಮಾನ ಗುರುಕುಲದ ಶತಮಾನ, ಸಂಸ್ಕೃತದ ಶತಮಾನ ಎಂದು ಹೇಳಿದರು ಸಂಸ್ಕೃತ ಮೂಲ ಭಾಷೆ ,ವೇದ, ಯೋಗ ,ಸನಾತನ ನಮ್ಮ ಮೂಲ ಧರ್ಮ. ನಮ್ಮ ಆಚಾರ್ಯರು ಧರ್ಮ, ಸಂಸ್ಕೃತಿ ಆಚಾರಗಳ ಪಾರಮಾರ್ಥಿಕ ದರ್ಶನ ನೀಡಿದ್ದಾರೆ ಎಂದರು. ಸನಾತನ ಧರ್ಮಗಳ ಸಾಮ್ರಾಜ್ಯ ವಿಶ್ವದಲ್ಲೇ ಪಸರಿಸಬೇಕು ಅನ್ನುವುದು ನನ್ನ ಕನಸು ಇದಕ್ಕಾಗಿ 5 ಲಕ್ಷ ಕೋಟಿಯ ಸಾಮ್ರಾಜ್ಯ ಕಟ್ಟುವ ಆಸೆ ಹೊಂದಿದ್ದೇನೆ ತನ್ನ ಆಸ್ತಿಗಳೆಲ್ಲವೂ ಪಾರಮಾರ್ಥಿಕ ಸಾಧನೆಗೆ ಬಳಕೆಯಾಗಲಿದೆ ಎಂದರು.

3 (1)

ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ದಕ್ಷಿಣ ಭಾರತ ದ ಆಧ್ಯಾತ್ಮಿಕ ರಾಜಧಾನಿ ಉಡುಪಿ, ಸಂಸ್ಕೃತ ಭಾಷೆ ಒಂದು ಪಾತ್ರೆ ಇದ್ದಂತೆ ಅದು ಚೆನ್ನಾಗಿದ್ದರೆ ಅದರಲ್ಲಿ ತಯಾರಾಗುವ ಪಾಯಸ ಚೆನ್ನಾಗಿರುತ್ತದೆ. ಸಂಸ್ಕೃತ ಅತಿ ಶ್ರೇಷ್ಠವಾದ ಭಾಷೆ, ಇಂಗ್ಲಿಷ್ ಪ್ರತಿದಿನ ಪರಿವರ್ತನೆ ಯಾಗುವ ಭಾಷೆ. ಸಂಸ್ಕೃತ ಏಕರೂಪ ಮತ್ತು ಸ್ಪಷ್ಟ , ಆದರೆ ಆಂಗ್ಲ ಭಾಷೆ ಅಸ್ಪಷ್ಟ ಎಂದರು. ಆಂಗ್ಲ ಭಾಷೆಯಲ್ಲಿ ಹಲವಾರು ಪದಗಳು ಸೈಲೆಂಟ್ ಆಗಿರುತ್ತವೆ ಸಂಸ್ಕೃತದಲ್ಲಿ ಹೇಳುವುದನ್ನೇ ಬರೆಯುತ್ತೇವೆ ಬರೆದದ್ದನ್ನೇ ಓದುತ್ತೇವೆ. ಪುರಾತನ ಭಾಷೆಗಳ ರಕ್ಷಣೆಗಾಗಿ ರಾಜ್ಯ ಭಾಷಾ ಸಮ್ಮೇಳನ ಆಯೋಜನೆಯಾಗಿದೆ ಪ್ರಾಚೀನ ಭಾಷೆ ಮತ್ತು ಆಧ್ಯಾತ್ಮ ನಿಜವಾದ ವಿದ್ಯೆ. ಬೇರೆಲ್ಲವೂ ಹೊಟ್ಟೆಪಾಡಿಗಾಗಿರುವ ವಿದ್ಯೆ ಎಂದು ಹೇಳಿದರು‌ ಹಿಂದೂ ಧರ್ಮದಲ್ಲಿ ಮಾತ್ರ ಚರ್ಚೆ ವಿಮರ್ಶೆಗಳು ನಡೆಯುತ್ತವೆ ಅನ್ಯ ಮತಗಳಲ್ಲಿ ಯಾವುದೇ ವಿಮರ್ಶೆ ನಡೆಯುವುದಿಲ್ಲ ಎಂದರು.

3 (1)

50 ವರ್ಷಗಳ ಬಳಿಕ ದಕ್ಷಿಣ ಭಾರತದಲ್ಲಿ ಈ ಸಮ್ಮೇಳನ ಆಯೋಜನೆಯಾಗಿದೆ‌ 300ಕ್ಕೂ ಅಧಿಕ ವಿದ್ವಾಂಸರು 2000 ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಶ್ರೀ ಕೃಷ್ಣ ಮಠದ ರಾಜಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹತ್ತಾರು ಗೋಷ್ಠಿಗಳು ನಡೆಯಲಿವೆ‌. ವೇದ, ಭಗವದ್ಗೀತೆ, ಭಾಷಾ ಶಾಸ್ತ್ರ, ಬೌದ್ಧ ಧರ್ಮ, ಪ್ರಾಕೃತ, ಜೈನ ಧರ್ಮ, ಭಾರತೀಯ ಜ್ಞಾನ ಮತ್ತು ವ್ಯವಸ್ಥೆ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ಸಮಲೋಚನೆ ಆಯೋಜಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *