“JUST KANNADA “ಯೂ ಟ್ಯೂಬ್‌ ಚಾನಲ್‌ ನಲ್ಲಿ ಸಂದರ್ಶನ ಪ್ರಸಾರದ ಬೆನ್ನಲ್ಲೇ MUDA ನಟೇಶ್‌ ನಿವಾಸದ ಮೇಲೆ ಇಡಿ ದಾಳಿ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

ಮೈಸೂರು, ಅ.28,2024: (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಡಿ.ಬಿ.ನಟೇಶ್‌ ಅವರ ಬೆಂಗಳೂರು ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧನಕಾರ್ಯ ನಡೆಸಿದ್ದಾರೆ.

ಪ್ರಸ್ತುತ  ರೈಲ್ ಇನ್‌ಫ್ರಾಸ್ಟ್ ರಕ್ಚರ್ ಡೆವಲಪ್‌ಮೆಂಟ್ (ಕರ್ನಾಟಕ) ಲಿಮಿಟೆಡ್‌ನ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಪ್ರಸ್ತುತ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ,

ಕಳೆದ ವಾರ ಬೆಂಗಳೂರು ವಸಂತನಗರದಲ್ಲಿರುವ ಕೆ-ರೈಡ್‌ ಕಚೇರಿಯಲ್ಲಿ ಡಿ.ಬಿ.ನಟೇಶ್‌ ಅವರನ್ನು ಭೇಟಿಯಾಗಿದ್ದ “ ಜಸ್ಟ ಕನ್ನಡ “ ಸಂದರ್ಶನ ನಡೆಸಿತ್ತು. ಈ ವೇಳೆ, ಕಾನೂನು ಸಮಸ್ಯೆಗಳನ್ನು ತಪ್ಪಿಸಲು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸ್ವಯಂಪ್ರೇರಣೆಯಿಂದ ಪಾರ್ವತಿ ( ಸಿಎಂ ಸಿದ್ದರಾಮಯ್ಯ ಪತ್ನಿ) ಅವರಿಗೆ 14 ಸೈಟ್‌ಗಳನ್ನು ಪರಿಹಾರವಾಗಿ ಸ್ವೀಕರಿಸಲು ಮನವರಿಕೆ ಮಾಡಿತು ಎಂದು  ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಸ್ಪಷ್ಟ ಪಡಿಸಿದ್ದರು. ಜತೆಗೆ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಪರಿಹಾರ ರೂಪದಲ್ಲಿ ೧೪ ನಿವೇಶನಗಳನ್ನು ನೀಡಿರುವ ಪ್ರಾಧಿಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಇದಕ್ಕೆ ಪೂರಕವಾಗಿ, ಒಂದೊಮ್ಮೆ ಆಸ್ತಿ ಮಾಲೀಕರಾದ ಪಾರ್ವತಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರೆ, ಮುಡಾಕ್ಕೆ ಅಪಾರ ನಷ್ಟ ಉಂಟಾಗುತ್ತಿತ್ತು ಎಂದಿದ್ದರು. ಮುಂದುವರೆದು  2017ರಲ್ಲಿ ಇದೇ ಪ್ರಕರಣದಲ್ಲಿ ಶ್ರೀರಾಂಪುರದಲ್ಲಿ 2.17 ಎ/ಜಿ ಹೊಂದಿದ್ದ ಸುಂದರಮ್ಮ ತಮ್ಮ ಜಮೀನು ವಾಪಸ್ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಘಟನೆಯನ್ನು ಉದಾಹರನೆ ನೀಡಿದ್ದರು.

ಬಡಾವಣೆಯಂತೆ ಜಮೀನು ಅಭಿವೃದ್ಧಿ ಪಡಿಸಿ ರಸ್ತೆ ಕಾಮಗಾರಿ ಮುಗಿಸಿ, ಯುಜಿಡಿ ಪೈಪ್ ಹಾಕಿ, ಚರಂಡಿ ಕಾಮಗಾರಿ ನಡೆದಿದೆ. 16 ನಿವೇಶನಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಅಭಿವೃದ್ಧಿ ಪಡಿಸಿದ ಭೂಮಿಯನ್ನು ಸುಂದರಮ್ಮ ಅವರಿಗೆ ಹಿಂದಿರುಗಿಸುವಂತೆ ಹೈಕೋರ್ಟ್‌ ಆದೇಶ ನೀಡಿದಾಗ ಮುಡಾಕ್ಕೆ ಹೊಡೆತ ಬಿದ್ದಿತ್ತು. ಅಲ್ಲದೆ, ಪ್ರಕರಣದಲ್ಲಿ ಕೆಲ ಅಧಿಕಾರಿಗಳಿಗೆ ದಂಡ ವಿಧಿಸಲಾಗಿತ್ತು ಎಂಬುದನ್ನು ಸ್ಮರಿಸಿಕೊಂಡಿದ್ದರು ನಟೇಶ್.‌

ಅಂತಹ ಕಾನೂನು ಪ್ರಕರಣವನ್ನು ತಪ್ಪಿಸಲು ಮತ್ತು ಪ್ರಾಧಿಕಾರಕ್ಕೆ ಯಾವುದೇ ನಷ್ಟವನ್ನು ತಡೆಗಟ್ಟಲು ಪಾರ್ವತಿ ಸಿದ್ದರಾಮಯ್ಯ ಅವರಿಗೆ ೧೪ ನಿವೇಶನಗಳನ್ನು ಹಂಚಿಕೆ ಮಾಡಿ ವಿಷಯವನ್ನು ಸಮರ್ಥವಾಗಿ ಇತ್ಯರ್ಥಗೊಳಿಸಲಾಯಿತು ಎಂದು ನಟೇಶ್‌ ತಮ್ಮ ಕ್ರಮವನ್ನು ಬಲವಾಗಿ ಪ್ರತಿಪಾದಿಸಿದ್ದರು.

ಬೇಸರ ವ್ಯಕ್ತ :

ಇದೇ ವೇಳೆ ಮಾಧ್ಯಮಗಳಲ್ಲಿನ ವರದಿಗಳ ಬಗ್ಗೆ ಡಿ.ಬಿ.ನಟೇಶ್‌ ಬೇಸರ ವ್ಯಕ್ತಪಡಿಸಿದ್ದರು. ಪ್ರಾಧಿಕಾರದ ಹಣ ಉಳಿಸಲು ಮುಂದಾದದ್ದೇ ತಪ್ಪಾಯ್ತ..? ನನ್ನ ವಿರುದ್ಧವೇ ಷಡ್ಯಂತ್ರ ಮಾಡುತ್ತಿದ್ದಾರೆ. ಕೆಲ ಮಾಧ್ಯಮಗಳಲ್ಲಿ ನನ್ನನ್ನು ಖಳನಾಯಕನಂತೆ ಬಿಂಬಿಸುತ್ತಿದ್ದಾರೆ ಎಂದು “ಜಸ್ಟ್‌ ಕನ್ನಡ” ಬಳಿ ಅಳಲು ತೋಡಿಕೊಂಡಿದ್ದರು.

ನಟೇಶ್‌ ಅವರ ಈ ಸಂದರ್ಶನ “ ಜಸ್ಟ್‌ ಕನ್ನಡ “ ಯೂಟ್ಯೂಬ್‌ ನಲ್ಲಿ ಕಂತುಗಳ ರೂಪದಲ್ಲಿ ಪ್ರತ್ಯೇಕ ವಿಷಯವಾರು ಪ್ರಸಾರಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

key words:  ED raids, MUDA, Natesh, interview telecast, YouTube channel, ‘JUST Kannada’

SUMMARY:

The Enforcement Directorate (ED) conducted raids at the residence of MUDA Natesh shortly after an interview he gave that was broadcast on the YouTube channel “JUST Kannada.”

Last week, ‘Just Kannada’ conducted an interview with D.B. Natesh at his office in Vasanthnagar, Bengaluru. Natesh, a former commissioner of the Mysuru Urban Development Authority (MUDA), explained that MUDA convinced Parvathy, the wife of Chief Minister Siddaramaiah, to accept 14 sites as compensation to prevent any legal issues.

Font Awesome Icons

Leave a Reply

Your email address will not be published. Required fields are marked *