ಮೈಸೂರಿನ 3ನೇ ತರಗತಿ ವಿದ್ಯಾರ್ಥಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ನವೆಂಬರ್,7,2024 (www.justkannada.in): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಹಾಗೂ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ) ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರಿನ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಪೃಥು ಪಿ ಅದ್ವೈತ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಪೃಥು ಪಿ ಅದ್ವೈತ್ ರವರು ಇತ್ತೀಚೆಗೆ 150 ಶ್ಲೋಕಗಳನ್ನು 30 ನಿಮಿಷದಲ್ಲಿ ಪಠಿಸಿ ಏಕಕಾಲದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ್ದರು.  ಅವರ ಸಾಧನೆ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪೃಥು,  ನನ್ನ ಈ ಪ್ರಯತ್ನ ಗುರುತಿಸಿ  ಆದರ್ಶ ಬಾಲ ಪ್ರತಿಭಾ ರತ್ನ, ಬಾಲ ಸ್ತೋತ್ರ ಕಲಾ ರತ್ನ, ಶ್ಲೋಕ ಸ್ಕಾಲರ್, ರೈಸಿಂಗ್ ಸ್ಟಾರ್ ಆಫ್ ಕರ್ನಾಟಕ ಹಾಗೂ ಬಾಲ ಕರುನಾಡ ರತ್ನ ಪ್ರಶಸ್ತಿ  ಎಂಬ ಪ್ರಶಸ್ತಿ ಬಂದಿದೆ.  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಖುಷಿಯಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ನನ್ನ ಪ್ರಯತ್ನ ಗುರುತಿಸಿ ಅಭಿನಂದಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ಧನ್ಯವಾದಗಳು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಹರ್ಷಿ ಸಿದ್ದಾರ್ಥ ಸ್ವಾಮಿಜಿ , ರಾಜು ಮೋರೆ, ಶರಣಪ್ಪ ಕಲ್ಲೂರು , ನಾಗರಾಜ್ ತಂಬ್ರಡಗಿ, ಸಾಹಿತ್ಯ ಪರಿಷತ್ ಸಲಹೆಗಾರರಾದ ಅಮೀನ ಖಾಲಿ ಖಾನ್ ಪೋಷಕರಾದ ಪುನೀತ್ ಜಿ, ಪೂಜಾ ಎನ್, ಕೆ.ಆರ್. ಗಣೇಶ್ , ಸರಸ್ವತಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Key words: Kannada Rajyotsava Award, student, Mysore

Font Awesome Icons

Leave a Reply

Your email address will not be published. Required fields are marked *