ಸತ್ತಿದ್ದು ತಾಯಿ, ಕೊಟ್ಟಿದ್ದು ಮಗನ ಮರಣ ದೃಢೀಕರಣ ಪತ್ರ!

ಚಾಮರಾಜನಗರ: ಎಡವಟ್ಟುಗಳು ಹೇಗೆಲ್ಲ ಆಗುತ್ತವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಇದು ಸಿಬ್ಬಂದಿಗೆ ತಾವು ಮಾಡುವ ಕೆಲಸ ಮೇಲಿನ ನಿರ್ಲಕ್ಷ್ಯವೋ, ಉಡಾಫೆಯೋ ಗೊತ್ತಿಲ್ಲ ಆದರೀಗ ಸಿಬ್ಬಂದಿ ಮಾಡಿದ ಎಡವಟ್ಟಿಗೆ ನಗರಸಭೆ ಮುಖ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಹೀಗಾಗಿ ಹಿಡಿಶಾಪ ಹಾಕಿಸಿಕೊಳ್ಳಬೇಕಾದ ದುಸ್ಥಿತಿ ಒದಗಿ ಬಂದಿದೆ.

ಇಲ್ಲಿ ಆಗಿದ್ದಿಷ್ಟು ತಾಯಿ ಮೃತಪಟ್ಟಿರುವ ಬಗ್ಗೆ ದೃಡೀಕರಣ ಕೊಡಿ ಎಂದು ನಗರಸಭೆಗೆ ಮಗ ಅರ್ಜಿ ಸಲ್ಲಿಸಿದ್ದನು. ಆದರೆ ಮರಣ ದೃಢೀಕರಣ ನೋಡಿದ ಮಗನಿಗೆ ಶಾಕ್ ಕಾದಿತ್ತು. ಏಕೆಂದರೆ ಮರಣ ದೃಢೀಕರಣ ಕೋರಿ ಅರ್ಜಿ ಸಲ್ಲಿಸಿದ್ದ ಮಗನ ಹೆಸರಿನಲ್ಲಿಯೇ ಕೊಳ್ಳೇಗಾಲ ಸ್ಥಳೀಯ ಸಂಸ್ಥೆ ದೃಢೀಕರಣ ಪತ್ರ ನೀಡಿತ್ತು. ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಇದನ್ನು ನೋಡಿ ಸುಸ್ತಾಗಿತ್ತು.

Nದ

ಇದೆಲ್ಲವೂ ಆಗಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಗರಸಭೆಯಲ್ಲಿ. ಕೊಳ್ಳೇಗಾಲ ಪಟ್ಟಣದ ಹಳೇ ಕುರುಬರ ಬೀದಿಯ ನಿವಾಸಿ ಶಂಕರ್ ರವರು ನಗರಸಭೆಗೆ ಅರ್ಜಿ ಸಲ್ಲಿಸಿ ತಮ್ಮ ತಾಯಿ ಪುಟ್ಟಮ್ಮ ರವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಅವರ ಶವ ಸಂಸ್ಕಾರವನ್ನು ಕೊಳ್ಳೇಗಾಲದಲ್ಲಿ ನೆರವೇರಿಸಿದ್ದರು. ಮೃತರ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ದೃಢೀಕರಣ ಪತ್ರ ನೀಡುವಂತೆ ನಗರಸಭೆಗೆ ಮೃತರ ಮಗ ಅರ್ಜಿ ಸಲ್ಲಿಸಿದ್ದರು.

ಆದರೆ ನಗರಸಭೆಯ ಕಂಪ್ಯೂಟರ್ ಆಪರೇಟರ್ ಎಡವಟ್ಟಿನಿಂದ ತಾಯಿ ಸಾವಿನ ಬಗ್ಗೆ ದೃಡೀಕರಣ ಪತ್ರ ಕೇಳಿ ಮಗ ಅರ್ಜಿ ಸಲ್ಲಿಸಿದರೆ, ಮಗನ ಶವ ಸಂಸ್ಕಾರ ದೃಢೀಕರಿಸಿದ್ದು ಕರ್ತವ್ಯ ಲೋಪ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ತನ್ನ ತಾಯಿ ಸತ್ತಿದ್ದಾರೆಂದು ಶವಸಂಸ್ಕಾರದ ದೃಢೀಕರಣ ಪತ್ರ ಕೇಳಿದರೆ ಬದುಕಿರುವ ನನ್ನನ್ನೆ ಸಾಯಿಸಿದ್ದಾರೆ. ನನ್ನಿಂದ ಸೀಲ್ ಹಾಕಲು ನೂರು ರೂಪಾಯಿ ಹಣವನ್ನು ಪಡೆದು ಸಹ ಪಡೆದುಕೊಂಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ನೊಂದಿರುವ ಶಂಕರ್ ಹೇಳುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *